ಕರ್ನಾಟಕ

karnataka

ETV Bharat / entertainment

'ಭೂಲ್ ಭುಲೈಯ್ಯಾ 3'ರ ಟ್ರೇಲರ್ ಔಟ್​: ದೆವ್ವ ಇರೋದು ನಿಜವೇ? ಹಾರರ್ ಕಾಮಿಡಿ ಸಿನಿಮಾ ಬಿಡುಗಡೆಗೆ ದಿನಗಣನೆ

ಬಹುನಿರೀಕ್ಷಿತ ಚಿತ್ರ 'ಭೂಲ್ ಭುಲೈಯ್ಯಾ 3'ರ ಟ್ರೇಲರ್​ ಇಂದು ಅನಾವರಣಗೊಂಡಿದೆ.

By ETV Bharat Entertainment Team

Published : 4 hours ago

Updated : 4 hours ago

Bhool Bhulaiyaa 3 Trailer release
'ಭೂಲ್ ಭುಲೈಯ್ಯಾ 3'ರ ಟ್ರೇಲರ್ ರಿಲೀಸ್ (Photo: film poster)

ಬಿಡುಗಡೆ ಹೊಸ್ತಿಲಲ್ಲಿರುವ ಬಹುನಿರೀಕ್ಷಿತ ಚಿತ್ರ 'ಭೂಲ್ ಭುಲೈಯ್ಯಾ 3'ರ ಟ್ರೇಲರ್​ ಇಂದು ರಿಲೀಸ್​ ಆಗಿದೆ. ಬಾಲಿವುಡ್​ನ ಯಂಗ್​ ಸೂಪರ್​ ಸ್ಟಾರ್ ಕಾರ್ತಿಕ್ ಆರ್ಯನ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಈ ಚಿತ್ರವು ಹಾಸ್ಯ, ಸಸ್ಪೆನ್ಸ್, ಸೂಪರ್​ನ್ಯಾಚುರಲ್​​ ಥ್ರಿಲ್ಲಿಂಗ್​ ಅಂಶಗಳನ್ನು ಒಳಗೊಂಡಿದೆ. ಸಿನಿಮಾ ತನ್ನ ಹಿಂದಿನ ಎರಡು ಭಾಗಗಳನ್ನು ಅನುಸರಿಸಲಿದೆ.

ಯಶಸ್ವಿ ಭೂಲ್ ಭುಲೈಯ್ಯಾ ಫ್ರ್ಯಾಂಚೈಸ್‌ನ ಮೂರನೇ ಅಧ್ಯಾಯವಾಗಿ ಈ ಚಲನಚಿತ್ರ ಒಂದೊಳ್ಳೆ ಸಿನಿಮೀಯ ಅನುಭವ ಕೊಡಲಿದೆ ಎಂಬ ಭರವಸೆಯನ್ನು ಇಂದು ಬಿಡುಗಡೆ ಆಗಿರುವ ಟ್ರೇಲರ್​ ಮೂಡಿಸಿದೆ.

ಬಾಲಿವುಡ್​ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ಯಂಗ್​​ ಸೂಪರ್​ ಸ್ಟಾರ್ ಕಾರ್ತಿಕ್ ಆರ್ಯನ್ ತಮ್ಮ ರೂಹ್ ಬಾಬಾ ಪಾತ್ರವನ್ನು ಪುನರಾವರ್ತಿಸಿದ್ದಾರೆ. ರೂಹ್ ಬಾಬಾ ಎಂದೂ ಕರೆಯಲ್ಪಡುವ ಹಾಸ್ಯಮಯ ಹಾಗೂ ನಿರ್ಭೀತ ರುಹಾನ್ ರಾಂಧವಾ ಪಾತ್ರದಲ್ಲಿ ನಿಮ್ಮೆದುರು ಬರಲು ಸಜ್ಜಾಗಿದ್ದಾರೆ. ಅಶುಭ, ಪವರ್​ಫುಲ್​ ಪರಿಸ್ಥಿತಿಯನ್ನು ಎದುರಿಸುತ್ತಾರೆ. ಟ್ರೇಲರ್​​, ಪ್ರಾರಂಭದಿಂದಲೇ ಸಸ್ಪೆನ್ಸ್ ಅಂಶಗಳನ್ನು ಒಳಗೊಂಡಿದೆ.

ಚಿತ್ರದ ಟ್ರೇಲರ್​​ ಸ್ಪೂಕಿ ಮಹಲುಗಳು, ಮಂದವಾಗಿ ಬೆಳಗಿದ ಕಾರಿಡಾರ್‌ಗಳು ಮತ್ತು ನೆರಳಿನ ಆಕೃತಿಗಳ ಮಿಶ್ರಣವಾಗಿದೆ. ಅದು ಕಥೆಯ ಸುತ್ತಲಿನ ಕುತೂಹಲವನ್ನು ಹೆಚ್ಚಿಸುತ್ತದೆ. ಅಲ್ಲದೇ ಈ ಟ್ರೇಲರ್ ಕಾರ್ತಿಕ್ ಆರ್ಯನ್​​ ಅವರ ಬಹುಮುಖ ಪ್ರತಿಭೆಯ ಒಂದು ನೋಟವನ್ನು ಒದಗಿಸಿದೆ. ಹೌದು, ನಟ ತಮ್ಮ ಸಿಗ್ನೇಚರ್ ಹ್ಯೂಮರ್​ ಜೊತೆಗೆ ಹಾರರ್ ಅಂಶಗಳನ್ನೂ ಸಲೀಸಾಗಿ ಬ್ಯಾಲೆನ್ಸ್ ಮಾಡಿದೆ. ಹಿನ್ನೆಲೆ ಸಂಗೀತ ದೃಶ್ಯಗಳನ್ನು ಮತ್ತಷ್ಟು ಆಕರ್ಷೀಯಗೊಳಿಸಿದೆ. ಅದಾಗ್ಯೂ ಒಂದಿಷ್ಟು ದೃಶ್ಯಗಳು ಸಿನಿಮಾದ ಹಿಂದಿನ ಭಾಗವನ್ನೇ ನೆನಪಿಸುವಂತಿವೆ.

ಭೂಲ್ ಭುಲೈಯ್ಯಾ 3ಕ್ಕೆ ಅನೀಸ್ ಬಾಜ್ಮಿ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಭೂಲ್ ಭುಲೈಯಾ 2ರ ಅದ್ಭುತ ಯಶಸ್ಸಿನ ನಂತರ ಮತ್ತೆ ಪ್ರೇಕ್ಷಕರೆದುರು ಬರುತ್ತಿದ್ದಾರೆ. ಎರಡನೇ ಭಾಗದಲ್ಲೂ ಕಾರ್ತಿಕ್ ಆರ್ಯನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಮತ್ತೆ ಈ ಇಬ್ಬರ ಕಾಂಬಿನೇಶನ್​​ನಲ್ಲಿ ಭೂಲ್ ಭುಲೈಯ್ಯಾ 3 ರೆಡಿಯಾಗಿದೆ. ಟಿ-ಸೀರೀಸ್ ಮತ್ತು ಸಿನಿ1 ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಭೂಷಣ್ ಕುಮಾರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಇದನ್ನೂ ಓದಿ:ಸರಳತೆಯ ಸಾಹುಕಾರ: ನೂಕುನುಗ್ಗಲಿನ ನಡುವೆ ತಾಳ್ಮೆಯಿಂದ ಸೆಲ್ಫಿಗೆ ಪೋಸ್ ಕೊಟ್ಟ ಸೂಪರ್​ ಸ್ಟಾರ್​

ಕಾರ್ತಿಕ್ ಆರ್ಯನ್ ಜೊತೆಗೆ, ಚಿತ್ರದಲ್ಲಿ ವಿದ್ಯಾ ಬಾಲನ್, ತೃಪ್ತಿ ದಿಮ್ರಿ, ಮಾಧುರಿ ದೀಕ್ಷಿತ್ ಮತ್ತು ರಾಜ್‌ಪಾಲ್ ಯಾದವ್ ಸೇರಿದಂತೆ ಹಲವರು ತಮ್ಮ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಾಲಿವುಡ್​ ಕಿಲಾಡಿ ಖ್ಯಾತಿಯ ಅಕ್ಷಯ್ ಕುಮಾರ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿವೆ. ಆದ್ರೆ ನಟ ಈ ಊಹಾಪೋಹಗಳನ್ನು ಅಲ್ಲಗೆಳೆದಿದ್ದಾರೆ. ಚಿತ್ರ ದೀಪಾವಳಿಗೆ, ನವೆಂಬರ್​ 3ರಂದು ಬಿಡುಗಡೆಯಾಗಲಿದೆ. ಹಾರರ್, ಕಾಮಿಡಿ ಮತ್ತು ಥ್ರಿಲ್ಲಿಂಗ್​​ ಅಂಶಗಳ ಮಿಶ್ರಣದಿಂದ ಪ್ರೇಕ್ಷಕರನ್ನು ಆಕರ್ಷಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ:'ಪ್ರೇಕ್ಷಕರಾಗಿ ನಾವು ನಕಾರಾತ್ಮಕವಾಗಿದ್ದೇವೆ': ಸೂಪರ್​ ಸ್ಟಾರ್ ಜೂ.ಎನ್​ಟಿಆರ್​ ಹೀಗಂದಿದ್ದೇಕೆ?

ಇನ್ನು ಕಾರ್ತಿಕ್​ ಆರ್ಯನ್​ ಅವರ ವಿಡಿಯೋವೊಂದು ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ. ಟ್ರೇಲರ್​​ ರಿಲೀಸ್​ ಈವೆಂಟ್​ ಸಲುವಾಗಿ ಇಂದು ಎಕಾನಮಿ ಕ್ಲಾಸ್‌ನಲ್ಲಿ ಜೈಪುರಕ್ಕೆ ವಿಮಾನ ಪ್ರಯಾಣ ಕೈಗೊಂಡರು. ಪ್ಲೇನ್​​ನಲ್ಲಿದ್ದ ಅಭಿಮಾನಿಗಳು ನಟನನ್ನು ಸುತ್ತುವರೆದರು. ನಗುಮೊಗದಲ್ಲೇ ಅಭಿಮಾನಿಗಳ ಮಾತಿಗೆ ಸ್ಪಂದಿಸಿದ ನಟ, ನೂಕುನುಗ್ಗಲ ನಡುವೆಯೂ ಸೆಲ್ಫಿಗೆ ಪೋಸ್​ ಕೊಟ್ಟರು.

Last Updated : 4 hours ago

ABOUT THE AUTHOR

...view details