ಕರ್ನಾಟಕ

karnataka

ETV Bharat / entertainment

ನಿರ್ಮಾಪಕರು ಸಿನಿಮಾಗಳಿಗೆ ಬಂಡವಾಳ ಹಾಕಿದ್ದಾರೆ, ತನಿಖೆಯಾಗುವವರೆಗೆ ದರ್ಶನ್ ಮೇಲೆ ಕ್ರಮ ಇಲ್ಲ: ಎಂ.ಎನ್.ಸುರೇಶ್ - Karnakata Film Chamber - KARNAKATA FILM CHAMBER

ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಅವರು ನಟ ದರ್ಶನ್ ವಿರುದ್ಧ ಕ್ರಮ ಕೈಗೊಳ್ಳುವ ವಿಚಾರವಾಗಿ ಮಾತನಾಡಿದರು.

m-n-suresh
ಎಂ.ಎನ್.ಸುರೇಶ್ (ETV Bharat)

By ETV Bharat Karnataka Team

Published : Jun 14, 2024, 6:56 PM IST

ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ (ETV Bharat)

ಬೆಂಗಳೂರು:ನಿರ್ಮಾಪಕರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಹಾಗಾಗಿ ತನಿಖೆಯಾಗುವವರೆಗೆ ನಟ ದರ್ಶನ್ ವಿರುದ್ಧ ನಿಷೇಧ ಕ್ರಮವಿಲ್ಲ ಎಂದು ಕರ್ನಾಟಕ ವಾಣಿಜ್ಯ ಚಿತ್ರ ಮಂಡಳಿ ಅಧ್ಯಕ್ಷ ಎಂ.ಎನ್.ಸುರೇಶ್ ಸ್ಪಷ್ಟಪಡಿಸಿದ್ದಾರೆ.

ಕೆಪಿಸಿಸಿ ಕಚೇರಿ ಬಳಿಯ ಇಂದಿರಾ ಭವನದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಫಿಲಂ‌ ಚೇಂಬರ್ ಪದಾಧಿಕಾರಿಗಳು ಭೇಟಿಯಾದ ಬಳಿಕ ದರ್ಶನ್ ಬ್ಯಾನ್ ವಿಚಾರವಾಗಿ ಪ್ರತಿಕ್ರಿಯಿಸಿ, "ಮಾಧ್ಯಮಗಳ ಮುಂದೆ ಮಾತನಾಡಿದ್ದೇವೆ. ಸಂಜಯ್ ದತ್, ಸಲ್ಮಾನ್ ಖಾನ್ ಬೇರೆ ಪ್ರಕರಣ. ಪೊಲೀಸರು ತನಿಖೆ ಮಾಡ್ತಿದ್ದಾರೆ. ಈಗಲೇ ಯಾವ ನಿರ್ಧಾರವನ್ನೂ ತೆಗೆದುಕೊಳ್ಳಲ್ಲ. ನಿರ್ಮಾಪಕರು ಚಿತ್ರಗಳಿಗೆ ಬಂಡವಾಳ ಹಾಕಿದ್ದಾರೆ. ಹಾಗಾಗಿ ತನಿಖೆಯಾಗುವವರೆಗೆ ಏನೂ ಕ್ರಮವಿಲ್ಲ" ಎಂದು ತಿಳಿಸಿದರು.

ಉಪ್ಪು ತಿಂದವರು ನೀರು ಕುಡಿಯಲೇಬೇಕು: ಇದೇ ವೇಳೆ ಮಾತನಾಡಿದ ಚಲನಚಿತ್ರ ನಿರ್ಮಾಪಕ ಸಾ ರಾ ಗೋವಿಂದ್, "ನೊಂದ ಕುಟುಂಬಕ್ಕೆ ಆಸರೆಯಾಗಬೇಕು. ಆ ನಿಟ್ಟಿನಲ್ಲಿ ನಾವು ಯೋಚನೆ ಮಾಡ್ತಿದ್ದೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ದರ್ಶನ್ ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಾವ್ಯಾರೂ ಅವರನ್ನು ಸಮರ್ಥನೆ ಮಾಡಲ್ಲ. ನಿರಪರಾಧಿ ಅನ್ನೋದು ಸಾಬೀತಾಗಲು ಇನ್ನೂ ಆರು ತಿಂಗಳು, ವರ್ಷ ಆಗಬಹುದು. ಅಲ್ಲಿಯವರೆಗೆ ಅವರೇ ಬರೋದಿಲ್ಲವಲ್ಲ. ನಾವು ಸಂತ್ರಸ್ಥರ ಪರವಾಗಿ ನಿಲ್ತೇವೆ. ಕ್ರಮ ತೆಗೆದುಕೊಳ್ಳುವ ಕೆಲಸ ಮಾಡ್ತೇವೆ" ಎಂದರು.‌

ಕಟ್ಟಡ ಉದ್ಘಾಟನೆಗೆ ಆಹ್ವಾನ: ನಿರ್ಮಾಪಕರ ಸಂಘದ ಕಟ್ಟಡ ಉದ್ಘಾಟನೆಗಾಗಿ ಚಲನಚಿತ್ರ ಮಂಡಳಿ ಪದಾಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್​ರನ್ನು ಭೇಟಿಯಾಗಿ ಆಹ್ವಾನಿಸಿದರು. ಜೂನ್ 30 ರಂದು ಕಟ್ಟಡ ಉದ್ಘಾಟನೆ ಇದೆ. ಅದಕ್ಕೆ ಆಹ್ವಾನ ನೀಡಲು ಬಂದಿದ್ದೆವು. ಸೌತ್ ಇಂಡಿಯಾದಲ್ಲಿ ನಿರ್ಮಾಪಕರ ಸಂಘದ ಕಟ್ಟಡ ಇದೇ ಮೊದಲು ಎಂದು ತಿಳಿಸಿದರು.

ಈ ಸಭೆ ವೇಳೆ ನಟ ದರ್ಶನ್​ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ‌. ಕೇವಲ ಕಟ್ಟಡ ಉದ್ಘಾಟನೆ ವಿಚಾರವಾಗಿ ಆಹ್ವಾನ ನೀಡಿದ್ದೇವೆ. ಅದು ಬಿಟ್ಟು ಬೇರೆ ಯಾವುದೇ ವಿಚಾರವನ್ನು ಚರ್ಚೆ ಮಾಡಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ:ಪೊಲೀಸರು ವರದಿ ಕೊಟ್ಟ ಮೇಲೆ ದರ್ಶನ್ ಬ್ಯಾನ್ ವಿಚಾರ ನಿರ್ಧಾರ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್. ಎಂ ಸುರೇಶ್ - Actor Darshan Arrest Case

ABOUT THE AUTHOR

...view details