ಕರ್ನಾಟಕ

karnataka

ETV Bharat / entertainment

'ಕರ್ಮ ಹಿಂಬಾಲಿಸುತ್ತದೆ, ಅವನ ಪಾಪಕರ್ಮ ಅವನ ಸುಡುತ್ತದೆ': ಜಗ್ಗೇಶ್ ಹೀಗಂದಿದ್ದೇಕೆ, ಯಾರಿಗೆ? - Jaggesh Tweet - JAGGESH TWEET

ನಟ ಜಗ್ಗೇಶ್ ತಮ್ಮ​​ ಟ್ವೀಟ್​ನಲ್ಲಿ ದರ್ಶನ್​​ ಅವರ ಹೆಸರು ಉಲ್ಲೇಖಿಸದಿದ್ದರೂ ಇದು ದರ್ಶನ್​​ಗೆ ಕೊಟ್ಟ ಟಾಂಗ್​ ಎಂದು ಬಹುತೇಕ ಸೋಷಿಯಲ್​ ಮೀಡಿಯಾ ಬಳಕೆದಾರರು ಮಾತನಾಡಿಕೊಳ್ಳುತ್ತಿದ್ದಾರೆ.

Jaggesh
ಜಗ್ಗೇಶ್​​ (ETV Bharat)

By ETV Bharat Karnataka Team

Published : Jun 12, 2024, 2:01 PM IST

Updated : Jun 12, 2024, 3:48 PM IST

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪ ಎದುರಿಸುತ್ತಿರುವ ನಟ ದರ್ಶನ್​​ ಬಂಧನವಾಗಿದ್ದು, ಕನ್ನಡ ಚಿತ್ರರಂಗ ಮೌನ ವಹಿಸಿದೆ. ಮತ್ತೊಂದೆಡೆ, ಕೊಲೆಯಾದ ರೇಣುಕಾಸ್ವಾಮಿ ತಾಯಿ ದರ್ಶನ್ ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ‌. ಆದರೆ, ಈ ಬಗ್ಗೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಮಧ್ಯೆ ನಟ ಜಗ್ಗೇಶ್​​ ಮಾಡಿರುವ ಸೋಷಿಯಲ್​​ ಮೀಡಿಯಾ ಪೋಸ್ಟ್ ಹೆಚ್ಚಿನವರ ಗಮನ ಸೆಳೆದಿದೆ.

ರಾಜಕಾರಣಿ, ನಟ - ನವರಸನಾಯಕ ಜಗ್ಗೇಶ್ ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಶೇರ್ ಮಾಡಿದ್ದು, ಸಖತ್​ ಸದ್ದು ಮಾಡುತ್ತಿದೆ‌. ಈ ಟ್ವೀಟ್​​​​ ಎಲ್ಲೆಡೆ ವೈರಲ್‌ ಆಗುತ್ತಿದ್ದು, ಬಹಳ ಚರ್ಚೆಗೆ ಗ್ರಾಸವಾಗಿದೆ. ನಟ ದರ್ಶನ್ ಹೆಸರನ್ನು ಜಗ್ಗೇಶ್ ಎಲ್ಲೂ ಪ್ರಸ್ತಾಪಿಸದಿದ್ದರೂ, ಬಹುತೇಕ ನೆಟ್ಟಿಗರು ಇದು ದರ್ಶನ್​ ಅವರಿಗೇನೇ ಹಾಕಿರೋ ಪೋಸ್ಟ್​ ಎಂದು ಭಾವಿಸಿದಂತಿದೆ.

ಜಗ್ಗೇಶ್​​ ಟ್ವೀಟ್​: ''ಸರ್ವ ಆತ್ಮಾನೇನಬ್ರಹ್ಮ, ಸರ್ವ ಜೀವಿಯಲ್ಲಿ ದೇವರಿದ್ದಾನೆ. ಯಾರನ್ನೂ ಕೊಲ್ಲುವ ಹಕ್ಕು ಜೀವನಿಗಿಲ್ಲ. ಕರ್ಮ ಜೀವನನ ಹಿಂದೆ ಹಿಂಬಾಲಿಸುತ್ತದೆ. ಅವನ ಪಾಪಕರ್ಮ ಅವನ ಸುಡುತ್ತದೆ. ಕಲಿಯುಗದಲ್ಲಿ ದೇವರು ಕಲ್ಲಲ್ಲ. ಎಲ್ಲಾ ಕರ್ಮಕ್ಕೂ ತಕ್ಷಣ ಫಲಿತಾಂಶ ಉಂಟು. ರಾಮನಾಗು, ರಾವಣನಾದರೆ ಅಂತ್ಯ ಎಂದಿದೆ ಸನಾತನ ಕೃತಿ. ಮದಕ್ಕೆ ಕಾರುಣ್ಯದ ಅರಿವಿಲ್ಲ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:'ಅಂತಿಮ ನಿರ್ಧಾರ ಸರಿಯಲ್ಲ, ದರ್ಶನ್-ಪವಿತ್ರಾ ನಿರಪರಾಧಿಗಳು': ವಕೀಲ ನಾರಾಯಣಸ್ವಾಮಿ - Darshan Advocate Narayanaswamy

ಈ ಹಿಂದೆ ಜಗ್ಗೇಶ್ ಅವರ ಒಂದು ಹೇಳಿಕೆ ವಿಚಾರವಾಗಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ಜಗ್ಗೇಶ್​​​ಗೆ ಮುತ್ತಿಗೆ ಹಾಕಿದ್ದರು. ಹಿರಿಯ ನಟ ಎಂಬುದನ್ನೂ ನೋಡದೇ ಮಾತಿನ ಚಕಮಕಿ ನಡೆದಿತ್ತು. ಕಳೆದ ವರ್ಷ ತೋತಾಪುರಿ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಜಗ್ಗೇಶ್ ಅವರಿಗೆ ಅವಮಾನ ಮಾಡಿದ್ದರೆಂಬ ಆರೋಪವಿದೆ‌. ಅಭಿಮಾನಿಗಳು ಜಗ್ಗೇಶ್ ಮೇಲೆ ಮುತ್ತಿಗೆ ಹಾಕಿದ್ದರೂ, ದರ್ಶನ್ ಒಂದೇ ಒಂದು ಮಾತು ಕೂಡ ಆಡರಲಿಲ್ಲ. ಅಭಿಮಾನಿಗಳು ಮಾಡಿದ್ದು ತಪ್ಪೆಂದು ಹೇಳಲಿಲ್ಲ. ‌ಇದು ಜಗ್ಗೇಶ್ ಅವರಿಗೆ ನೋವುಂಟು ಮಾಡಿತ್ತು.

ಇದನ್ನೂ ಓದಿ:'ಕಾನೂನು ಪರಮೇಶ್ವರ್​ಗೂ, ದರ್ಶನ್​ಗೂ ಒಂದೇ': ಗೃಹ ಸಚಿವ - Parameshwar on Darshan case

ಸದ್ಯ ಜಗ್ಗೇಶ್ ಸನಾತನ ಧರ್ಮಕ್ಕೆ ಹೋಲಿಸಿ ಪಾಪ ಯಾರನ್ನೂ ಬಿಡೋದಿಲ್ಲ ಎಂದು ಹೇಳಿದ್ದು, ಹೆಚ್ಚಿನ ಸಂಖ್ಯೆಯ ನೆಟ್ಟಿಗರು ಇದು ದರ್ಶನ್​​ ಅವರಿಗೆ ಕೊಟ್ಟ ಟಾಂಗ್​ ಎಂದು ಭಾವಿಸಿದ್ದಾರೆ. ಆದರೆ ನವರಸನಾಯಕ ಮಾತ್ರ ಎಲ್ಲೂ ದಚ್ಚು ಹೆಸರನ್ನು ಉಲ್ಲೇಖಿಸಿಲ್ಲ. ಜಗ್ಗೇಶ್​ ಟ್ವೀಟ್​ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ನವರಸನಾಯಕ ಹೇಳಿದ್ದು ಸರಿ ಎಂದರೆ, ಅಭಿಮಾನಿಗಳು ದರ್ಶನ್​ ಪರ ಕಾಮೆಂಟ್​ಗಳ ಮಳೆಯನ್ನೇ ಹರಿಸಿದ್ದಾರೆ.

Last Updated : Jun 12, 2024, 3:48 PM IST

ABOUT THE AUTHOR

...view details