ಬಾಲಿವುಡ್ನ ವಿಚ್ಛೇದಿತ ತಾರಾ ದಂಪತಿ ಸೈಫ್ ಅಲಿ ಖಾನ್ ಹಾಗೂ ಅಮೃತಾ ಸಿಂಗ್ ಅವರ ಪುತ್ರ ಇಬ್ರಾಹಿಂ ಅಲಿ ಖಾನ್ ಚಿತ್ರರಂಗಕ್ಕೆ ಪ್ರವೇಶಿಸುತ್ತಿದ್ದಾರೆ ಎಂದು ಬಾಲಿವುಡ್ನ ಖ್ಯಾತ ನಿರ್ಮಾಪಕ-ನಿರ್ದೇಶಕ ಕರಣ್ ಜೋಹರ್ ಅಧಿಕೃತವಾಗಿ ಘೋಷಿಸಿದ್ದಾರೆ. ಇಬ್ರಾಹಿಂ ಅವರನ್ನು ಸಿನಿ ಜಗತ್ತಿಗೆ ಪರಿಚಯಿಸುತ್ತಿರುವ ಬಗ್ಗೆ ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಾ, ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಇಬ್ರಾಹಿಂ ಅಲಿ ಖಾನ್ ಅವರ ಕ್ಯಾಂಡಿಡ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ, ಇಬ್ರಾಹಿಂ ಕುಟುಂಬದೊಂದಿಗಿನ ಬಾಂಧವ್ಯದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕೇವಲ 12 ವರ್ಷದವನಿದ್ದಾಗ ಅಮೃತಾ ಸಿಂಗ್ ಅವರನ್ನು ಕರಣ್ ಭೇಟಿಯಾಗಿದ್ದರು. ಇದೀಗ ತಮ್ಮ ಮೊದಲ ಭೇಟಿಯನ್ನು ಇಲ್ಲಿ ನೆನಪಿಸಿಕೊಂಡಿದ್ದಾರೆ.
"ನಾನು ಕೇವಲ 12 ವರ್ಷದವನಿದ್ದಾಗ ಅಮೃತಾ/ಡಿಂಗಿ ಅವರನ್ನು ಭೇಟಿಯಾಗಿದ್ದೆ. ಪ್ರೀತಿಪಾತ್ರರು ಅವರನ್ನು ಈ ರೀತಿ ಕರೆಯಲು ಇಷ್ಟಪಡುತ್ತಾರೆ. ನನ್ನ ತಂದೆಯೊಂದಿಗೆ ದುನಿಯಾ ಎಂಬ ಸಿನಿಮಾ ಮಾಡಿದ್ರು. ಅವರು ಹೊಂದಿದ್ದ ಕ್ಯಾಮರಾ ಮೇಲಿನಗ್ರೇಸ್, ಎನರ್ಜಿ ಮತ್ತು ಕಮಾಡೆಂಟ್ ಅನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆ" ಎಂದು ತಿಳಿಸಿದ್ದಾರೆ.
ಅಮೃತಾ ಮತ್ತು ಅವರ ಕೇಶ ವಿನ್ಯಾಸಕಿ ಜೊತೆಗಿನ ಮೊದಲ ಭೇಟಿಯ ನಂತರದ ಕ್ಷಣಗಳನ್ನೂ ನೆನಪಿಸಿಕೊಂಡಿದ್ದಾರೆ. "ಅವರು ಮತ್ತು ಅವರ ಕೇಶ ವಿನ್ಯಾಸಕಿ ಜೊತೆಗಿನ ಭೇಟಿ ನಂತರ ಚೈನೀಸ್ ಡಿನ್ನರ್ನ ಕ್ಷಣವನ್ನು ನಾನು ಹೆಚ್ಚಾಗಿ ನೆನಪಿಸಿಕೊಳ್ಳುತ್ತೇನೆ. ನಮ್ಮ ಎರಡನೇ ಭೇಟಿಯಲ್ಲಿ ಅವರು ನನ್ನನ್ನು ತಮ್ಮವರಂತೆ ನೋಡಿಕೊಂಡರು. ಆ ಶಕ್ತಿ ಅವರ ಮತ್ತು ಅವರ ಮಕ್ಕಳ ಮೂಲಕ ಜೀವಿಸುತ್ತದೆ" ಎಂದು ತಿಳಿಸಿದರು.
ಆನಂದ್ ಮಹೇಂದ್ರು ಅವರ ಆಫೀಸ್ನಲ್ಲಿ ನಟ ಸೈಫ್ ಅಲಿ ಖಾನ್ ಅವರೊಂದಿಗಿನ ತಮ್ಮ ಮೊದಲ ಭೇಟಿಯನ್ನು ನೆನಪಿಸಿಕೊಂಡ ಕರಣ್, ಸೈಫ್ ಅವರನ್ನು "ಯುವ, ಸೌಮ್ಯ, ಆಕರ್ಷಕ" ಎಂದು ಬಣ್ಣಿಸಿದರು. ಆ ಕ್ಷಣಕ್ಕೂ ಮತ್ತು ಮಗ ಇಬ್ರಾಹಿಂ ಅವರೊಂದಿಗಿನ ತಮ್ಮ ಮೊದಲ ಭೇಟಿಯೂ ಬಹುತೇಕ ಒಂದೇ ರೀತಿಯಿತ್ತು ಎಂದು ತಿಳಿಸಿದ್ದಾರೆ.