ಕರ್ನಾಟಕ

karnataka

ETV Bharat / entertainment

ಹದಿನೆಂಟು ಪುರಾಣಗಳನ್ನು ಆಧರಿಸಿರೋ ಕನ್ನಡದ ಮೊದಲ ಸೂಪರ್ ಹೀರೋ ಕಾನ್ಸೆಪ್ಟ್ ಚಿತ್ರ - film based on eighteen myths

ಹದಿನೆಂಟು ಪುರಾಣಗಳನ್ನು ಆಧರಿಸಿ ತಯಾರಾಗಿರುವ ದಿ ಎಂಡ್​ ಸಿನಿಮಾ ಒಂಭತ್ತು ಭಾಷೆಗಳಲ್ಲಿ ಐದು ಭಾಗಗಳಲ್ಲಿ ರಿಲೀಸ್​ ಆಗಲಿದೆ.

The End movie Team
ದಿ ಎಂಡ್​ ಚಿತ್ರತಂಡ

By ETV Bharat Karnataka Team

Published : Mar 11, 2024, 1:51 PM IST

ಕನ್ನ ಚಿತ್ರರಂಗದಲ್ಲಿ ಸಾಕಷ್ಟು ಕಂಟೆಂಟ್​ ಆಧಾರಿತ ಸಿನಿಮಾಗಳು ಬರುತ್ತಿವೆ. ಇದೀಗ ಪವನ್​ ಕುಮಾರ್​ ನಿರ್ದೇಶನದ ಹಾಗೂ ಯುವ ನಟ ರವಿಶೇಖರ್​ ಅಭಿನಯದ 'ದಿ ಎಂಡ್​' ಸಿನಿಮಾ ಸೈಲೆಂಟ್​ ಆಗಿ ಚಿತ್ರೀಕರಣ ಮುಗಿಸಿ, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಮಹಾಶಿವರಾತ್ರಿ ದಿನ ದಿ ಎಂಡ್​ ಚಿತ್ರದ ಹನುಮಾನ್​ ಚಾಲೀಸ್ ಎಂಬ ಲಿರಿಕಲ್​ ವಿಡಿಯೋ ಬಿಡುಗಡೆಯಾಗಿದೆ.

ನಿರ್ಮಾಪಕರಾದ ಶಿಲ್ಪ ಶ್ರೀನಿವಾಸ್​, ಮಂಜುನಾಥ್​, ಧರ್ಮಶ್ರೀ ಮಂಜುನಾರ್ತ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವೆಂಕಟೇಶ್​ ಮುಂತಾದ ಗಣ್ಯರು ಅತಿಥಿಗಳಾಗಿ ಆಗಮಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.

ದಿ ಎಂಡ್​ ಚಿತ್ರದ ಪೋಸ್ಟರ್​

ಬಳಿಕ ಮಾತನಾಡಿದ ನಿರ್ದೇಶಕ ಪವನ್ ಕುಮಾರ್, "ಕನ್ನಡದ ಪ್ರಥಮ ಸೂಪರ್ ಹೀರೋ ಕಾನ್ಸೆಪ್ಟ್​ನ ಚಿತ್ರ 'ದಿ ಎಂಡ್'. ಈಗಾಗಲೇ ಚಿತ್ರದ ಚಿತ್ರೀಕರಣ ಮುಕ್ತಾಯ ಆಗಿದೆ. ವಿಶೇಷ ಪಾತ್ರದಲ್ಲಿ ನಟಿಸಲು ಅನಂತನಾಗ್ ಅವರ ಜೊತೆ ಮಾತುಕತೆ ನಡೆಯುತ್ತಿದೆ. ಹದಿನೆಂಟು ಪುರಾಣಗಳನ್ನು ಆಧರಿಸಿ ಮಾಡುತ್ತಿರುವ ಈ ಚಿತ್ರ, ಒಂಭತ್ತು ಭಾಷೆಗಳಲ್ಲಿ ಐದು ಭಾಗಗಳಲ್ಲಿ ಬರಲಿದೆ. ಇದು ಮೊದಲ ಭಾಗ. 'ದಿ ಎಂಡ್' ಚಿತ್ರಕ್ಕೆ 'PREAMBLE' ಎಂಬ ಅಡಿಬರಹವಿದೆ. 'PREAMBLE' ಎಂದರೆ ಪೀಠಿಕೆ ಎಂದು ಅರ್ಥ. ಇನ್ನು ಸರ್ವಕಾಲಿಕ ಸೂಪರ್ ಹೀರೋ ಹನುಮಂತನ ಮಹಿಮೆಯನ್ನು ವರ್ಣಿಸುವ ಹನುಮಾನ್ ಚಾಲೀಸ್ ಹಾಡನ್ನು ಈ ಚಿತ್ರದಲ್ಲಿ ಬಳಸಿಕೊಂಡಿದ್ದೇವೆ. ಮಹಾಶಿವರಾತ್ರಿ ಪುಣ್ಯದಿವಸ ಈ ಹಾಡನ್ನು ಬಿಡುಗಡೆ ಮಾಡಿದ್ದೇವೆ. ಐದು ಪ್ರಸಿದ್ಧ ಶಿವ ದೇಗುಲಗಳಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿರುವುದು ವಿಶೇಷ. ಅರುಣ್ ಆಂಡ್ರ್ಯೂ ಸಂಗೀತ ನೀಡಿರುವ ಈ ಹಾಡನ್ನು ಮಧುಕುಮಾರ್ ಭಾವಪರವಶರಾಗಿ ಹಾಡಿದ್ದಾರೆ" ಎಂದರು.

ದಿ ಎಂಡ್​ ಚಿತ್ರದ ತಂಡ

ನಂತರ ಯುವ ನಟ ರವಿಶೇಖರ್ ಮಾತನಾಡಿ, "ಪವನ್ ಕುಮಾರ್ ಅವರು ಆಯ್ದುಕೊಂಡಿರುವ ಕಥೆ ಚೆನ್ನಾಗಿದೆ. ಸೂಪರ್ ಹೀರೋ ಎಂದರೆ ವಿಶೇಷ ಶಕ್ತಿಯುಳ್ಳವನು ಅಂತ. ಚಿತ್ರದಲ್ಲಿ ನಾನು ಸೂಪರ್ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ" ಎಂದು ತಿಳಿಸಿದರು.

ನಾಯಕ ರವಿಶೇಖರ್​ಗೆ ಜೋಡಿಯಾಗಿ ಪವಿತ್ರಾ ಅಭಿನಯಿಸಿದ್ದಾರೆ. ವಿಶೇಷ ಪಾತ್ರದಲ್ಲಿ ಚೈತ್ರಾ ಕೊಟ್ಟೂರ್ ನಟಿಸಿದ್ದಾರೆ. ಈ ಚಿತ್ರಕ್ಕೆ ಅರುಣ್ ಆಂಡ್ರ್ಯೂ ಅವರು ಸಂಗೀತ ನಿರ್ದೇಶನವಿದೆ. ಈ ಸಿನಿಮಾದ ಹಾಡುಗಳಿಗೆ ಮಧುಕುಮಾರ್ ಅವರು ಧ್ವನಿಯಾಗಿದ್ದಾರೆ. ಸದ್ಯ ಟೀಸರ್ ನಿಂದ ಗಮನ ಸೆಳೆಯುತ್ತಿರೋ ದಿ ಎಂಡ್ ಚಿತ್ರ ಮೇ ತಿಂಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ಶಿವಣ್ಣನ 'ಭೈರತಿ ರಣಗಲ್'​​ ರಿಲೀಸ್​ ಡೇಟ್ ಅನೌನ್ಸ್: ಪುಷ್ಪ 2 ಜೊತೆ ಫೈಟ್​!

ABOUT THE AUTHOR

...view details