ಕರ್ನಾಟಕ

karnataka

ETV Bharat / entertainment

ಬಾಬಿ ಡಿಯೋಲ್​​ಗೆ ಧನ್ಯವಾದ ಅರ್ಪಿಸಿದ ಸೂರ್ಯ ನಟನೆಯ 'ಕಂಗುವ' ನಿರ್ಮಾಪಕರು - ಕಂಗುವ

ತಮ್ಮ ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ 'ಕಂಗುವ' ನಿರ್ಮಾಪಕರು ಬಾಬಿ ಡಿಯೋಲ್ ಅವರಿ​​ಗೆ ಧನ್ಯವಾದ ಅರ್ಪಿಸಿದ್ದಾರೆ.

Kanguva Makers Thank Bobby Deol for Making Film 'Majestic'
ಬಾಬಿ ಡಿಯೋಲ್​​ಗೆ ಧನ್ಯವಾದ ಅರ್ಪಿಸಿದ 'ಕಂಗುವ' ನಿರ್ಮಾಪಕರು

By ETV Bharat Karnataka Team

Published : Mar 1, 2024, 7:17 PM IST

'ಅನಿಮಲ್​​​' ಸಿನಿಮಾದಲ್ಲಿ ಅಬ್ಬರಿಸಿರುವ ಬಾಲಿವುಡ್ ನಟ ಬಾಬಿ ಡಿಯೋಲ್ ದಕ್ಷಿಣ ಚಿತ್ರದಂಗದ ಸ್ಟಾರ್ ಡೈರೆಕ್ಟರ್ ಶಿವ ನಿರ್ದೇಶನದ ಬಹುನಿರೀಕ್ಷಿತ 'ಕಂಗುವ' ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವುದು ಖಚಿತವಾಗಿದೆ. ನಾಯಕ ನಟ ಸೂರ್ಯ ಮತ್ತು ಬಾಬಿ ಡಿಯೋಲ್​​ ಮುಖಾಮುಖಿಯಾಗಲಿದ್ದು, ಅದ್ಭುತ ದೃಶ್ಯಗಳನ್ನು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಪೋಸ್ಟ್-ಪ್ರೊಡಕ್ಷನ್ ಕೆಲಸ ಭರದಿಂದ ಸಾಗಿದೆ. ಚಿತ್ರದ ತೂಕ ಹೆಚ್ಚಿಸಿರುವ ಉಧಿರನ್ ಪಾತ್ರಧಾರಿ ಬಾಬಿ ಡಿಯೋಲ್ ಅವರಿಗೆ ಚಿತ್ರ ನಿರ್ಮಾಪಕರು ಕೃತಜ್ಞತೆ ಸಲ್ಲಿಸಿದ್ದಾರೆ.

ಕಂಗುವ ಹೆಸರಿನ ಎಕ್ಸ್ ಖಾತೆ, ನಿರ್ಮಾಪಕ ಕೆ.ಇ ಜ್ಞಾನವೆಲ್ ರಾಜ ಅವರು ನಟ ಬಾಬಿ ಡಿಯೋಲ್‌ಗೆ ಪುಷ್ಪಗುಚ್ಛವನ್ನು ನೀಡುತ್ತಿರುವ ಫೋಟೋವನ್ನು ಹಂಚಿಕೊಂಡಿದೆ. 'ಕಂಗುವ'ವನ್ನು ಭವ್ಯವಾಗಿಸಿದ್ದಕ್ಕಾಗಿ ನಟನಿಗೆ ಪ್ರೊಡಕ್ಷನ್ ಹೌಸ್ ಮೆಚ್ಚುಗೆ ವ್ಯಕ್ತಪಡಿದೆ. ಪೋಸ್ಟ್​​ನಲ್ಲಿ, "ನಮ್ಮ ಉಧಿರನ್​ಗೆ ತುಂಬು ಹೃದಯದ ಧನ್ಯವಾಗಳು. ಬಾಬಿ ಡಿಯೋಲ್​​ ಸರ್​ ಕಂಗುವವನ್ನು ಮತ್ತಷ್ಟು ವಿಶೇಷ ಮತ್ತು ಭವ್ಯವಾಗಿಸಿದ್ದಕ್ಕಾಗಿ ಕೃತಘ್ಞತೆಗಳು'' ಎಂದು ಬರೆದುಕೊಂಡಿದ್ದಾರೆ.

ಈ ಪೀರಿಯಾಡಿಕಲ್​​ ಡ್ರಾಮಾದಲ್ಲಿ ಸೌತ್​ ಸೂಪರ್ ಸ್ಟಾರ್​ ಸೂರ್ಯ ಮುಖ್ಯಭೂಮಿಕೆಯಲ್ಲಿದ್ದಾರೆ. ಬಾಲಿವುಡ್ ನಟಿ ದಿಶಾ ಪಟಾನಿ ನಾಯಕಿಯ ಪಾತ್ರ ನಿರ್ವಹಿಸಿದ್ದರೆ, ಬಾಬಿ ಡಿಯೋಲ್​​​ ಖಳನಾಯಕನ ಪಾತ್ರ ವಹಿಸಿದ್ದಾರೆ. 2023ರ ಬ್ಲಾಕ್​ಬಸ್ಟರ್ 'ಅನಿಮಲ್'​ ಸಿನಿಮಾದಲ್ಲೂ ಖಳನಾಯಕನ ಪಾತ್ರದಲ್ಲಿ ಅಬ್ಬರಿಸಿದ್ದರು. ಹೆಸರಾಂತ ನಟ ಸೂರ್ಯ ಅವರು ಈ ಕಥೆಯಲ್ಲಿ 5 ವಿಭಿನ್ನ ಪಾತ್ರಗಳನ್ನು ನಿರ್ವಹಿಸೋ ಮೂಲಕ ತಮ್ಮ ಬಹುಮುಖ ಪ್ರತಿಭೆಯನ್ನು ಮತ್ತೊಮ್ಮೆ ಪ್ರದರ್ಶಿಸಲು ಸಜ್ಜಾಗಿದ್ದಾರೆ. ಮೃಣಾಲ್ ಠಾಕೂರ್, ಯೋಗಿ ಬಾಬು, ಕೊವೈ ಸರಳ ಮತ್ತು ರೆಡಿನ್ ಕಿಂಗ್ಸ್ಲಿ ತಾರಾಗಣದಲ್ಲಿದ್ದಾರೆ.

ಇದನ್ನೂ ಓದಿ:ಕೆಂಗೇರಿಯ ಛಲವಾದಿ ಮಹಾಸಭಾ ಆವರಣದಲ್ಲಿ ಕೆ.ಶಿವರಾಮ್​ ಅಂತ್ಯಕ್ರಿಯೆಗೆ ಆಗ್ರಹ

'ಕಂಗುವ' 2024ರ ಬಹುನಿರೀಕ್ಷಿತ ಚಿತ್ರ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಅವರ ಸಂಗೀತವಿರಲಿದೆ. ಸುಪ್ರೀಮ್ ಸುಂದರ್ ಅವರ ನೃತ್ಯ ಸಂಯೋಜನೆ ಇದೆ. ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ ಎಂದು ಹೇಳಲಾಗಿದೆ. ಚಿತ್ರ ಪಂಚಭಾಷೆಗಳಲ್ಲಿ ಮಾತ್ರವಲ್ಲದೇ ಬಹು-ಭಾಷಾ 3D ಡ್ರಾಮಾ ಆಗಿ ತೆರೆಗಪ್ಪಳಿಸಲಿದೆ. ನಿರ್ದೇಶಕ ಶಿವ ಅವರ ಅವರ ಈ ಸಿನಿಮಾದಲ್ಲಿ ಅದ್ಭುತ ಸಿನಿಮೀಯ ದೃಶ್ಯಗಳನ್ನು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ. ಇನ್ನೂ ಸೂರ್ಯ ಅವರ ಸಿನಿಮಾ ಅಂದಮೇಲೆ ಅಭಿಮಾನಿಗಳ ಕುತೂಹಲ ಹೆಚ್ಚೇ ಅಲ್ವೇ. ಒಟ್ಟಾರೆ ಶೀಘ್ರ ಬಿಡುಗಡೆಗೆ ಸಿನಿಪ್ರಿಯರು, ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ:ಎಕಾನಮಿ ಕ್ಲಾಸ್‌ನಲ್ಲಿ ಸೂಪರ್​ ಸ್ಟಾರ್ ರಜನಿಕಾಂತ್​ ಪ್ರಯಾಣ: ವಿಡಿಯೋ ಹಂಚಿಕೊಂಡ ನಟ ಜೀವ

ಇನ್ನೂ ಬಾಲಿವುಡ್ ನಟ ಬಾಬಿ ಡಿಯೋಲ್ ಕೊನೆಯದಾಗಿ ಕಾಣಿಸಿಕೊಂಡಿರೋ 'ಅನಿಮಲ್​​​' ಸೂಪರ್​ ಡೂಪರ್​ ಹಿಟ್​ ಆಗಿದೆ. ಬಾಕ್ಸ್​ ಆಫೀಸ್​ನಲ್ಲಿ ಸರಿಸುಮಾರು 900 ಕೋಟಿ ರೂ. ಕಲೆಕ್ಷನ್​ ಮಾಡುವ ಮೂಲಕ ಚಿತ್ರ 2023ರ ಯಶಸ್ವಿ ಸಿನಿಮಾವಾಗಿ ಹೊರಹೊಮ್ಮಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ರಣ್​ಬಿರ್​ ಕಪೂರ್​, ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿದ್ದರೆ, ಬಾಬಿ ಡಿಯೋಲ್​​ ಖಳನಾಯಕನ ಪಾತ್ರ ನಿರ್ವಹಿಸಿದ್ದರು. ಅನಿಲ್​ ಕಪೂರ್​​, ತೃಪ್ತಿ ದಿಮ್ರಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ABOUT THE AUTHOR

...view details