ಕರ್ನಾಟಕ

karnataka

ETV Bharat / entertainment

ಕಲ್ಕಿ 2898 AD ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಘೋಷಣೆ ಸಾಧ್ಯತೆ: ಮುಂಗಡ ಟಿಕೆಟ್ ಬುಕಿಂಗ್​ಗೂ ಮುಹೂರ್ತ ಫಿಕ್ಸ್​ - KALKI 2898 AD TRAILER - KALKI 2898 AD TRAILER

ಟ್ರೇಲರ್ ಪ್ರಕಟಣೆ ಸಮೀಪಿಸುತ್ತಿದ್ದಂತೆ ಕಲ್ಕಿ 2898 AD ಚಿತ್ರದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ವೈಜ್ಞಾನಿಕ ಕಾಲ್ಪನಿಕ ಚಿತ್ರದ ಟ್ರೇಲರ್ ಬಿಡುಗಡೆ ದಿನಾಂಕ ಇಂದು ಹೊರಬೀಳಲಿದೆ. ಏತನ್ಮಧ್ಯೆ, ಜೂನ್ 8 ರಂದು ಪ್ರಭಾಸ್ ಅಭಿನಯದ ಸಿನಿಮಾದ ಮುಂಗಡ ಬುಕಿಂಗ್ ಆರಂಭಿಸಲು ತಯಾರಕರು ಸಿದ್ಧರಾಗಿದ್ದಾರೆ.

KALKI 2898 AD  PRABHAS  KALKI 2898 AD TRAILER  KALKI 2898 AD US ADVANCE BOOKING
ಕಲ್ಕಿ 2898 AD ಚಿತ್ರದ ಟ್ರೈಲರ್ ಬಿಡುಗಡೆಗೆ ದಿನಾಂಕ ಘೋಷಣೆ ಸಾಧ್ಯತೆ: ಸಿನಿಮಾದ ಮುಂಗಡ ಟಿಕೆಟ್ ಬುಕಿಂಗ್​ಗೂ ಮುಹೂರ್ತ ನಿಗದಿ (ETV Bharat)

By ETV Bharat Karnataka Team

Published : Jun 3, 2024, 12:56 PM IST

ಹೈದರಾಬಾದ್: ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕಲ್ಕಿ 2898 AD. ಈ ಸಿನಿಮಾಕ್ಕೆ ವಿಶೇಷವಾಗಿ ಅನಿಮೇಟೆಡ್ ಮುನ್ನುಡಿ ತಿಳಿಸುವ ಬುಜ್ಜಿ ಮತ್ತು ಭೈರವ ಬಿಡುಗಡೆಯ ನಂತರ ಸಿನಿ ರಸಿಕರ ನಿರೀಕ್ಷೆಯು ಇಮ್ಮಡಿಯಾಗುತ್ತಿದೆ. ನಾಗ್ ಅಶ್ವಿನ್ ನಿರ್ದೇಶನದ ಹಾಗು ಪ್ರಭಾಸ್ ಅಭಿನಯದ ಕಲ್ಕಿ 2898 AD ಟ್ರೇಲರ್ ಬಿಡುಗಡೆಯ ದಿನಾಂಕಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಲ್ಕಿ 2898 ಜಾಹೀರಾತು ಟ್ರೈಲರ್ ಶೀಘ್ರದಲ್ಲೇ ಬಿಡುಗಡೆ ಸಾಧ್ಯತೆ: ಪ್ರಭಾಸ್ ಅಭಿನಯದ ಇತ್ತೀಚಿನ buzz 'ಕಲ್ಕಿ 2898 AD'ಯ ಟ್ರೇಲರ್ ಪ್ರಕಟಣೆಯ ದಿನಾಂಕವನ್ನು ಇಂದು (ಜೂನ್ 3 ರಂದು) ಬಿಡುಗಡೆ ಮಾಡುವ ಸಾಧ್ಯತೆಯಿದೆ. ಜೂನ್ 7ರಂದು ಥಿಯೇಟ್ರಿಕಲ್ ಟ್ರೈಲರ್ ಬಿಡುಗಡೆಯಾಗಲಿದೆ. ಈ ಸಮಯವು ಲೋಕಸಭೆ ಚುನಾವಣೆ 2024ರ ನೀತಿ ಸಂಹಿತೆ ಮುಕ್ತಾಯಕ್ಕೆ ಸರಿಯಾಗಿ ಹೊಂದಿಕೆಯಾಗುತ್ತದೆ. ಚಿತ್ರ ಪ್ರಚಾರ ಮಾಡಲು ಇದು ಸೂಕ್ತ ಸಂದರ್ಭವಾಗಿದೆ.

ಸಿನಿಮಾದ ರನ್​ಟೈಮ್, ಮುಂಗಡ ಬುಕಿಂಗ್:'ಕಲ್ಕಿ 2898 AD' ಸಿನಿಮಾಕ್ಕಾಗಿ ಮುಂಗಡ ಬುಕಿಂಗ್ ಜೂನ್ 8 ರಂದು ಪ್ರಾರಂಭವಾಗುತ್ತದೆ. ಚಿತ್ರದ US ವಿತರಕರು ಚಲನಚಿತ್ರದ ರನ್​ಟೈಮ್​ 2 ಗಂಟೆ 50 ನಿಮಿಷಗಳ ನಿರೀಕ್ಷೆಯಿದೆ ಎಂದು ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC)ನಿಂದ ಇನ್ನೂ ಚಲನಚಿತ್ರವನ್ನು ಪ್ರಮಾಣೀಕರಿಸಬೇಕಾಗಿದೆ. ಆದ್ದರಿಂದ ನಿಖರವಾದ ರನ್​ಟೈಮ್​ ಕುರಿತು ಅಧಿಕೃತ ಪ್ರಕಟಣೆಯೊಂದೇ ಬಾಕಿ ಉಳಿದಿದೆ.

ಎಲ್ಲರ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ ಬುಜ್ಜಿ ಮತ್ತು ಭೈರವ: ಇತ್ತೀಚೆಗೆ ಬಿಡುಗಡೆಯಾದ ಅನಿಮೇಟೆಡ್ ಸರಣಿಯ ಬುಜ್ಜಿ ಮತ್ತು ಭೈರವ, ಕಲ್ಕಿ 2898 AD ಸಿನಿಮಾದ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪುರಾಣ ಮತ್ತು ವೈಜ್ಞಾನಿಕತೆಯ ಈ ಕಾಲ್ಪನಿಕ ಕಥೆಗಳ ಸಮ್ಮಿಲನಕ್ಕೆ ಒಂದು ನೋಟವನ್ನು ನೀಡುತ್ತದೆ. ಪ್ರೈಮ್ ವಿಡಿಯೋದಲ್ಲಿ ಸರಣಿಯ ಮೊದಲ ಎರಡು ಸಂಚಿಕೆಗಳು ಚಲನಚಿತ್ರದ ಬಿಡುಗಡೆಗೆ ವೇದಿಕೆಯನ್ನು ಹೊಂದಿಸುತ್ತದೆ.

ಕಲ್ಕಿ 2898 AD ಚಿತ್ರದ ತಾರಾ ಬಳಗ: ಅಮಿತಾಬ್ ಬಚ್ಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್ ಮತ್ತು ದಿಶಾ ಪಟಾನಿ ಚಿತ್ರದ ತಾರಾ ಬಳಗದಲ್ಲಿದ್ದಾರೆ. ವೈಜಯಂತಿ ಮೂವೀಸ್ ನಿರ್ಮಿಸಿದ ಈ ವೈಜ್ಞಾನಿಕ ಕಾಲ್ಪನಿಕ ಚಿತ್ರವು ಜೂನ್ 27ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಸಂತೋಷ್ ನಾರಾಯಣನ್ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ.

ಬಿಗ್ ಬಿ ಈಗಾಗಲೇ ಅಶ್ವತ್ಥಾಮ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೇ ರೀತಿ ಇನ್ನಷ್ಟು ಪಾತ್ರಗಳನ್ನು ಅನಾವರಣಗೊಳಿಸಲು ತಂಡವು ಸಜ್ಜಾಗಿದೆ. 600 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾದ ಕಲ್ಕಿ 2898 AD ಒಂದು ರೋಮಾಂಚನಕಾರಿ ಸಿನಿಮಾ ಅನುಭವವನ್ನು ನೀಡುತ್ತದೆ. ಬ್ಲಾಕ್‌ಬಸ್ಟರ್ ಸಲಾರ್‌ನ ಸಾಲಿನಲ್ಲಿಯೇ ಕಲ್ಕಿ 2898 AD ಚಿತ್ರವು ತೆರೆ ಮೇಲೆ ಬರಲು ಸಿದ್ಧವಾಗಿದೆ. ಚಿತ್ರ ರಸಿಕರಿಗೆ ಪ್ರಭಾಸ್ ಮತ್ತೊಂದು ಬೃಹತ್ ಮನರಂಜನೆಯನ್ನು ನೀಡಲು ಸಿದ್ಧರಾಗಿದ್ದಾರೆ.

ಇದನ್ನೂ ಓದಿ:ನಟಿ ರವೀನಾ ಟಂಡನ್​ ವಿರುದ್ದ ಸುಳ್ಳು ದೂರು ದಾಖಲು: ಮುಂಬೈ ಪೊಲೀಸರ ಸ್ಪಷ್ಟನೆ - False Case Against Raveena Tandon

ABOUT THE AUTHOR

...view details