ಪ್ಯಾನ್-ಇಂಡಿಯನ್ ಸ್ಟಾರ್ ಪ್ರಭಾಸ್ ತಮ್ಮ ಪುರಾಣ ಪ್ರೇರಿತ ಸೈನ್ಸ್ ಫಿಕ್ಷನ್ ಸಿನಿಮಾ 'ಕಲ್ಕಿ 2898 ಎಡಿ' ಮೂಲಕ ಜಗತ್ತಿನಾದ್ಯಂತ ಸದ್ದು ಮಾಡಲು ಸಜ್ಜಾಗುತ್ತಿದ್ದಾರೆ. ಬಹುತಾರಾಗಣದ ಬಿಗ್ ಪ್ರಾಜೆಕ್ಟ್ ಇದೇ ಗುರುವಾರ (ಜೂನ್ 27, 2024) ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ನಾಗ್ ಅಶ್ವಿನ್ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಒಂದು ದೊಡ್ಡ ಸಿನಿಮೀಯ ಅನುಭವ ನೀಡಲು ಸಜ್ಜಾಗಿದ್ದು, ಪ್ರೇಕ್ಷಕರು ಸಿನಿಮಾ ವೀಕ್ಷಿಸಲು ಕಾತುರದಲ್ಲಿದ್ದಾರೆ. ಆಂಧ್ರಪ್ರದೇಶ, ತೆಲಂಗಾಣ ಮತ್ತು ಇತರೆ ರಾಜ್ಯಗಳಲ್ಲಿ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ತೆರೆಯಲಾಗಿದೆ. ಹೈದರಾಬಾದ್‌ನ ಅನೇಕ ಮಲ್ಟಿಪ್ಲೆಕ್ಸ್‌ಗಳು ಹೆಚ್ಚಿನ ಸಂಖ್ಯೆಯ ಶೋಗಳನ್ನು ಆಯೋಜಿಸುತ್ತಿವೆ.
ಹೊಸದಾಗಿ ತೆರೆಯಲಾದ ಮಲ್ಟಿಪ್ಲೆಕ್ಸ್ - ಅಪರ್ಣಾ ಸಿನಿಮಾಸ್ 'ಕಲ್ಕಿ 2898 ಎಡಿ' ತೆರೆಕಾಣುವ ಮೊದಲ ದಿನವೇ (ಗುರುವಾರ) 42 ಶೋಗಳನ್ನು ಏರ್ಪಡಿಸಿ ದಾಖಲೆ ನಿರ್ಮಿಸಿದೆ. ಈ ಎಲ್ಲಾ ಪ್ರದರ್ಶನಗಳ ಟಿಕೆಟ್‌ಗಳು 'ಸೋಲ್ಡ್ ಔಟ್' ಆಗಿದ್ದು, ಸಿನಿಮಾದ ಕ್ರೇಜ್ ಹೇಗಿದೆ ಎಂಬುದು ಸ್ಪಷ್ಟವಾಗಿದೆ. ಟಿಕೆಟ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ ಪ್ರಕಾರ, ಮೊದಲ 60 ನಿಮಿಷಗಳಲ್ಲಿ (1 ಗಂಟೆ) ಬರೋಬ್ಬರಿ 36,000 ಟಿಕೆಟ್‌ಗಳು ಮಾರಾಟವಾಗಿವೆ. ತೆಲಂಗಾಣದ ಎಲ್ಲಾ ಶೋಗಳ ಟಿಕೆಟ್‌ಗಳು ಮಾರಾಟವಾಗಿವೆ. ಚಿತ್ರದ ಮೊದಲ ದಿನಕ್ಕೆ, ಭಾರತದಾದ್ಯಂತ 2 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. ಇನ್ನೂ ಹೆಚ್ಚಿನ ಸಂಖ್ಯೆಯ ಮಲ್ಟಿಪ್ಲೆಕ್ಸ್‌ಗಳು ಬುಕ್ಕಿಂಗ್ ಅನ್ನು ಇನ್ನಷ್ಟೇ ಪ್ರಾರಂಭಿಸಬೇಕಿರುವುದರಿಂದ, ಈ ಅಂಕಿ-ಅಂಶ ದ್ವಿಗುಣಗೊಳ್ಳುವ ಸಾಧ್ಯತೆ ಹೆಚ್ಚಿದೆ.
ಇದನ್ನೂ ಓದಿ:28 ವರ್ಷಗಳ ನಂತರ ಬರ್ತಿದೆ ಕಮಲ್ ಹಾಸನ್ ನಟನೆಯ 'ಇಂಡಿಯನ್ 2'; ಸಂಜೆ 7ಕ್ಕೆ ಟ್ರೇಲರ್ ನೋಡಿ - Indian 2 Trailer