ಆರ್ಆರ್ಆರ್ ಖ್ಯಾತಿಯ ಜೂನಿಯರ್ ಎನ್ಟಿಆರ್ ಪ್ರಸ್ತುತ ತಮ್ಮ ಬಹುನಿರೀಕ್ಷಿತ ಚಿತ್ರ 'ದೇವರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಪ್ರೊಜೆಕ್ಟ್ ಅಲ್ಲದೇ ಮತ್ತೊಂದು ಕುತೂಹಲಾರಿ ಸಿನಿಮಾ ಕೂಡ ನಟನ ಕೈಯಲ್ಲಿದೆ. ಸಲಾರ್ ಮತ್ತು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರುತ್ತಿರುವ ಹಿನ್ನೆಲೆ, ದಕ್ಷಿಣ ಚಿತ್ರರಂಗ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ.
ಚಿತ್ರದ ಸುತ್ತಲಿರುವ ಮಾಹಿತಿ ಪ್ರಕಾರ, ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ನ ಪ್ರೊಜೆಕ್ಟ್ ಬರುವ ವರ್ಷ ಸೆಟ್ಟೇರಲಿದೆ. ಭಾರತೀಯ ಚಿತ್ರರಂಗದಲ್ಲಿ ಹೊಸ ಮಾನದಂಡ ಸೃಷ್ಟಿಸುವ ಗುರಿ ಹೊಂದಿರುವ ಹೈ ಆ್ಯಕ್ಷನ್ ಸಿನಿಮಾ ಸದ್ಯ ಪ್ರೀ ಪ್ರೊಡಕ್ಷನ್ ಹಂತದಲ್ಲಿದೆ. ಅಲ್ಲದೇ ಎರಡು ಭಾಗಗಳಲ್ಲಿ ಈ ಚಿತ್ರ ಮೂಡಿಬರಲಿದೆ. ಸದ್ಯ ನಿರ್ಮಾಣ ಹಂತದಲ್ಲಿರುವ 'ದೇವರ' ಕೂಡ ಎರಡು ಭಾಗಗಳಲ್ಲಿ ಮೂಡಿ ಬರುತ್ತಿರುವುದು ನಿಮಗೆ ತಿಳಿದಿರುವ ವಿಚಾರವೇ.
ಎರಡು ಭಾಗಗಳಾಗಿ ಸಿನಿಮಾ ನಿರ್ಮಾಣ ಮಾಡುವ ನಿರ್ಧಾರ ಉದ್ದೇಶಪೂರ್ವಕ ಸ್ಟ್ರ್ಯಾಟಜಿಗಳಲ್ಲಿ ಒಂದು. ಕಥೆಯನ್ನು ಸಮಗ್ರವಾಗಿ ಅನ್ವೇಷಿಸುವ ಸಲುವಾಗಿ ಹೀಗೆ ಮಾಡಲಾಗುತ್ತಿದೆ. ಕೆಜಿಎಫ್ ಕೂಡ ಎರಡು ಭಾಗಗಳಲ್ಲಿ ಮೂಡಿ ಬಂದಿದ್ದು, ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬೋ ಸುತ್ತಲಿನ ನಿರೀಕ್ಷೆ ಹೆಚ್ಚುತ್ತಿದೆ. ದಕ್ಷಿಣ ಚಿತ್ರರಂಗದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್' ಮತ್ತೊಂದು ಸಿನಿಮೀಯ ಚಮತ್ಕಾರಕ್ಕೆ ಸಜ್ಜಾಗಿದೆ.
ಚಿತ್ರತಂಡ ಕಥಾವಸ್ತುವನ್ನು ಬಿಟ್ಟುಕೊಟ್ಟಿಲ್ಲ. ಆದರೆ ತೀವ್ರ ಆ್ಯಕ್ಷನ್ ಸೀಕ್ವೆನ್ಸ್ ಮತ್ತು ಅದ್ಭುತ ನಿರೂಪಣೆಯಿಂದಿರುವ ಕಥೆ ಎಂದು ಚಿತ್ರದ ಸುತ್ತಲಿರುವ ಅಂತೆ- ಕಂತೆಗಳು ಸೂಚಿಸಿವೆ. ಕೆಜಿಎಫ್ ಮತ್ತು ಸಲಾರ್ನಲ್ಲಿ ಪ್ರಶಾಂತ್ ನೀಲ್ ಅವರ ವಿಭಿನ್ನ ನಿರ್ದೇಶನ ಶೈಲಿ ಸಾಬೀತಾಗಿದೆ. ಹಾಗಾಗಿ ಅವರ ಮುಂದಿನ ತೆರೆ ಮೇಲಿನ ಮ್ಯಾಜಿಕ್ಗಾಗಿ ಸಿನಿಪ್ರಿಯರು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.