ಕರ್ನಾಟಕ

karnataka

ETV Bharat / entertainment

'ಜಿಂಗೋ' ಆದ ಡಾಲಿ: ವೇದಿಕೆಯಲ್ಲಿ ಅಬ್ಬರಿಸಿದ ಧನಂಜಯ್​​​; ಹೊಸ ಅವತಾರದಲ್ಲಿ ನಟರಾಕ್ಷಸ - JINGO Glimpse - JINGO GLIMPSE

JINGO Birthday Blast: ನಟರಾಕ್ಷಸ ಡಾಲಿ ಧನಂಜಯ್​​​​ ಅಭಿನಯದ 'ಜಿಂಗೋ' ಸಿನಿಮಾ ಘೋಷಣೆಯಾಗಿದ್ದು, ನಾಯಕ ನಟನನ್ನೊಳಗೊಂಡ ಇಂಟ್ರೆಸ್ಟಿಂಗ್​​ ಗ್ಲಿಂಪ್ಸ್ ಕೂಡಾ ಅನಾವರಣಗೊಂಡಿದೆ.

Daali Dhananjay JINGO Movie
'ಜಿಂಗೋ' ಸಿನಿಮಾದಲ್ಲಿ ಡಾಲಿ ಧನಂಜಯ್ (Screen grab, Daali Pictures)

By ETV Bharat Karnataka Team

Published : Aug 23, 2024, 2:04 PM IST

ಸ್ಯಾಂಡಲ್​​​ವುಡ್​ನ ನಟರಾಕ್ಷಸ ಡಾಲಿ ಧನಂಜಯ್​​​​ ಜನ್ಮದಿನ ಹಿನ್ನೆಲೆ ಮುಂದಿನ ಬಹುನಿರೀಕ್ಷಿತ ಚಿತ್ರಗಳ ಪೋಸ್ಟರ್​​​ಗಳು ಅನಾವರಣಗೊಂಡಿವೆ. ಜೊತೆಗೆ ಹೊಸದೊಂದು ಸಿನಿಮಾ ಇಂದು ಅಧಿಕೃತವಾಗಿ ಘೋಷಣೆಯಾಗಿದೆ. ಅದುವೇ 'ಜಿಂಗೋ'. ಇಂದು ಸಿನಿಮಾ ಘೋಷಣೆ ಜೊತೆಗೆ ನಾಯಕ ನಟನನ್ನೊಳಗೊಂಡ ಇಂಟ್ರೆಸ್ಟಿಂಗ್​​ ಗ್ಲಿಂಪ್ಸ್ ಕೂಡಾ ಅನಾವರಣಗೊಂಡಿದೆ.

'ಡೇರ್​ ಡೆವಿಲ್​​ ಮುಸ್ತಫಾ' ತಂಡದ ಹೊಸ ಚಿತ್ರವಿದು. 'ಡೇರ್​ ಡೆವಿಲ್​​ ಮುಸ್ತಫಾ' ನಿರ್ದೇಶಿಸಿದ್ದ ಶಶಾಂಕ್​​ ಸೋಗಲ್​ ಅವರೇ ಈ ಚಿತ್ರಕ್ಕೂ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಡಾಲಿ ಧನಂಜಯ್​​ ಮತ್ತು ಬಿ ನರೇಂದ್ರ ರೆಡ್ಡಿ ಸೇರಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಹ್ಯಾರಿಸ್​ ಅಹಮದ್​​ ಕಥೆ ಬರೆದಿದ್ದು, ರಾಘವೇಂದ್ರ ಮಾಯಕೊಂಡ ಟೈಲಾಗ್ಸ್​​ ಒದಗಿಸಿದ್ದಾರೆ. ಡಾಲಿ ಪಿಕ್ಚರ್ಸ್​ ಮತ್ತು ತ್ರಿಶೂಲ್​​ ವಿಶನರಿ ಸ್ಟುಡಿಯೋಸ್​​​ ಅಡಿ ನಿರ್ಮಾಣಗೊಳ್ಳುತ್ತಿರುವ ಚಿತ್ರಕ್ಕೆ ಯದುನಂದನ್​​ ಎಕ್ಸಿಕ್ಯೂಟಿವ್​ ಪ್ರೊಡ್ಯೂಸರ್​ ಆಗಿ ಕೈ ಜೋಡಿಸಿದ್ದಾರೆ.

ಜಿಂಗೋ ಗ್ಲಿಂಪ್ಸ್​​:'ಜಿಂಗೋ' ಚಿತ್ರದ ನಾಯಕ ನಟನ ಇಂಟ್ರುಡಕ್ಷನ್​​ ವಿಡಿಯೋ ಅನಾವರಣಗೊಂಡಿದೆ. ಪ್ರತೀ ಡೈಲಾಗ್ಸ್​ ಕೂಡಾ ಮೈಜುಂ ಎನ್ನುವಂತಿದೆ. ನಟನ ಎಂಟ್ರಿ ಒಂತೂ ಅದ್ಭುತ. ವೇದಿಕೆಯಲ್ಲಿ ಭಾಷಣ ಮಾಡೋ ಮೂಲಕ ಅಬ್ಬರಿಸಿದ್ದಾರೆ. ಜಿಂಗೋ ಬರ್ತ್​ಡೇ ಬ್ಲ್ಯಾಸ್ಟ್ ಶೀರ್ಷಿಕೆಯ ವಿಡಿಯೋ ಈಗಾಗಲೇ 90 ಸಾವಿರಕ್ಕೂ ಅಧಿಕ ವೀಕ್ಷಣೆಗೊಂಡಿದೆ. ನಟರಾಕ್ಷಸನ ಅಭಿನಯಕ್ಕೆ ಮೆಚ್ಚುಗೆಯ ಮಹಾಪೂರವೇ ಹರಿದುಬರುತ್ತಿದೆ.

ಜಿಂಗೋ ಹಿಂದಿರುವ ಪ್ರೊಡಕ್ಷನ್​ ಹೌಸ್​ಗಳು ಮತ್ತು ನಾಯಕ ನಟ ಧನಂಜಯ್​ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಶೇರ್ ಮಾಡಿದ್ದಾರೆ. ಜೊತೆಗೆ, ''ನರ ನರ ಜಿಂಗೋ, ನರನಾಡಿ ಜಿಂಗೋ! ಜಿಂಗೋ ಬರ್ತ್​ಡೇ ಬ್ಲ್ಯಾಸ್ಟ್ ರಿಲೀಸ್​​​​'' ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗಷ್ಟೇ ಇನ್​ಸ್ಟಾ ಸ್ಟೋರಿಯೊಂದನ್ನು ಹಂಚಿಕೊಂಡಿದ್ದ ಡಾಲಿ ಧನಂಜಯ್​​, ಪ್ರತಿ ವರ್ಷದಂತೆ ನಿಮ್ಮ ಜೊತೆ ಬರ್ತ್​ಡೇ ಸೆಲೆಬ್ರೇಟ್​​ ಮಾಡಿಕೊಳ್ಳುವ ಆಸೆ ಇದೆ. ಆದ್ರೆ ಈ ಬಾರಿ ಕಾರಣಾಂತರಗಳಿಂದ ನಿಮ್ಮೊಂದಿಗೆ ಹುಟ್ಟುಹಬ್ಬ ಸಂಭ್ರಮಿಸಲು ಸಾಧ್ಯವಾಗುತ್ತಿಲ್ಲ. ಎಲ್ಲಿರುತ್ತೀರೋ ಅಲ್ಲಿಂದಲೇ ಹರಸಿ, ಹಾರೈಸಿ ಎಂದು ತಿಳಿಸಿದ್ದರು. ಆದ್ರೆ ನಿರೀಕ್ಷೆಯಂತೆ ನಟನ ಮುಂದಿನ ಬಹುನಿರೀಕ್ಷಿತ ಚಿತ್ರಗಳ ತಂಡದಿಂದ ಅಭಿಮಾನಿಗಳಿಗೆ ಸ್ಪೆಷಲ್​ ಟ್ರೀಟ್​​ ಸಿಕ್ಕಿದೆ.'ಅಣ್ಣ From Mexico' ಮತ್ತು 'ಉತ್ತರಕಾಂಡ' ಚಿತ್ರಗಳ ಇಂಟ್ರೆಸ್ಟಿಂಗ್​ ಪೋಸ್ಟರ್​​ಗಳು ಅನಾವರಣಗೊಂಡಿವೆ.

ಇದನ್ನೂ ಓದಿ:'ಖೇಲ್ ಶುರು ಪಾರ್ಟಿ ಚಾಲು ಹ್ಯಾಪಿ ಬರ್ತಡೇ ಗಬ್ರು ಸತ್ಯ': ಡಾಲಿ ಬರ್ತ್​​ಡೇಗೆ 'ಉತ್ತರಕಾಂಡ' ಗಿಫ್ಟ್ - Daali Dhananjay Birthday

ಶಂಕರ್​ ಗುರು ನಿರ್ದೇಶನದ 'ಅಣ್ಣ From Mexico' ಆ್ಯಕ್ಷನ್​ ಮತ್ತು​ ಫ್ಯಾಮಿಲಿ ಎಂಟರ್​ಟೈನರ್ ಸಿನಿಮಾ. ಸತ್ಯ ರಾಯಲ ಅವರು ದಿ ರಾಯಲ್​​​​ ಸ್ಟುಡಿಯೋಸ್​ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತ ಸಂಯೋಜಿಸುತ್ತಿದ್ದಾರೆ. ​​​​ಇನ್ನೂ ರೋಹಿತ್​​ ಪದಕಿ ನಿರ್ದೇಶನದ ಉತ್ತರಕಾಂಡ ಚಿತ್ರವನ್ನು ಕೆಆರ್​ಜಿ ಸ್ಟುಡಿಯೋಸ್​​​​ನ ಕಾರ್ತಿಕ್​​ ಮತ್ತು ಯೋಗಿ ಜಿ ರಾಜ್ ನಿರ್ಮಾಣ ಮಾಡುತ್ತಿದ್ದಾರೆ. ಅಮಿತ್‌ ತ್ರಿವೇದಿ ಚಿತ್ರಕ್ಕೆ ಸಂಗೀತ ಒದಗಿಸುತ್ತಿದ್ದಾರೆ. ಅಧ್ವೈತ ಗುರುಮೂರ್ತಿ ಅವರ ಛಾಯಾಗ್ರಹಣ ಮತ್ತು ಅನಿಲ್ ಅನಿರುದ್ಧ್ ಅವರ ಸಂಕಲನ ಈ ಚಿತ್ರಕ್ಕಿರಲಿದೆ.

ಇದನ್ನೂ ಓದಿ:'ಅಣ್ಣ From Mexico' ಆದ್ರೂ ಅಪ್ಪಟ ಕನ್ನಡಿಗ: ಡಾಲಿ ಧನಂಜಯ್​​​ ಜನ್ಮದಿನಕ್ಕಿದು ಸ್ಪೆಷಲ್​ ಗಿಫ್ಟ್​​​ - Anna From Mexico

ABOUT THE AUTHOR

...view details