ETV Bharat / entertainment

ಸೈಫ್ ಅಲಿ ಖಾನ್ ಬೆನ್ನಿನಿಂದ 2.5 ಇಂಚು ಉದ್ದದ ಚಾಕು ಹೊರಕ್ಕೆ; ಐಸಿಯುನಲ್ಲಿ ನಟ, ವೈದ್ಯರು ಹೇಳಿದ್ದಿಷ್ಟು - SAIF HEALTH UPDATE

ಸೈಫ್ ಅಲಿ ಖಾನ್ ಅವರ ಬೆನ್ನೆಲುಬಿನಿಂದ 2.5 ಇಂಚು ಉದ್ದದ ಚಾಕುವನ್ನು ಹೊರತೆಗೆಯಲಾಗಿದೆ. ಪ್ರಸ್ತುತ, ನಟ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Saif Ali Khan
ನಟ ಸೈಫ್ ಅಲಿ ಖಾನ್ (ETV Bharat)
author img

By ETV Bharat Entertainment Team

Published : Jan 16, 2025, 3:51 PM IST

ಮುಂಬೈ: ಬಾಲಿವುಡ್ ನಟ ಸೈಫ್ ಅಲಿ ಖಾನ್​ಗೆ ದುಷ್ಕರ್ಮಿಯೋರ್ವ 6 ಬಾರಿ ಚಾಕು ಇರಿದಿದ್ದು, ನಟನಿಗೆ ಚಿಕಿತ್ಸೆ ಕೊಡಲಾಗುತ್ತಿದೆ. ಅವರ ಬೆನ್ನುಮೂಳೆಯಲ್ಲಿ ಚಾಕು ಸಿಲುಕಿಕೊಂಡಿದ್ದರಿಂದ ತೀವ್ರ ಗಾಯಗಳಾಗಿವೆ. 2.5 ಇಂಚು ಉದ್ದದ ಬ್ಲೇಡ್ ಅನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ಸೋರಿಕೆಯಾಗುತ್ತಿದ್ದ ಬೆನ್ನುಮೂಳೆಯ ದ್ರವ ಸರಿಪಡಿಸಲಾಗಿದೆ ಎಂಬುದನ್ನು ಲೀಲಾವತಿ ಆಸ್ಪತ್ರೆಯ ವೈದ್ಯರು ದೃಢಪಡಿಸಿದ್ದಾರೆ.

ಸೈಫ್ ಅಲಿ ಖಾನ್ ಆರೋಗ್ಯ ಸಂಪೂರ್ಣ ಸ್ಥಿರ, ಅಪಾಯದಿಂದ ಪಾರು: ಲೀಲಾವತಿ ಆಸ್ಪತ್ರೆಯ ವೈದ್ಯ ನಿತಿನ್ ಡಾಂಗೆ ಅವರ ಪ್ರಕಾರ, ರಿಸ್ಕ್​​ ಫ್ಯಾಕ್ಟರ್ಸ್​ ಕೊನೆಗೊಂಡಿದೆ. ಸೈಫ್ ಅಲಿ ಖಾನ್ ಡೇಂಜರ್​​​ ಕಂಡೀಶನ್​ನಿಂದ ಸುರಕ್ಷಿತವಾಗಿ ಹೊರಬಂದಿದ್ದಾರೆ. ನಟ ಸದ್ಯ ಸಂಪೂರ್ಣ ಸ್ಥಿರವಾಗಿದ್ದಾರೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ದಾಳಿಯ ನಂತರ ನಟನ ಮುಖ ಮತ್ತು ದೇಹದ ಭಾಗಗಳಲ್ಲಿ ಅನೇಕ ಗಾಯಗಳು ಕಂಡು ಬಂದಿವೆ ಎಂದು ಲೀಲಾವತಿ ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ. ಇಂದು ಮುಂಜಾನೆ ಅಥವಾ ಕಳೆದ ಮಧ್ಯರಾತ್ರಿ ಬಾಂದ್ರಾದಲ್ಲಿರುವ ನಿವಾಸದಲ್ಲಿ ಸೈಫ್ ಅಲಿ ಖಾನ್ ಮೇಲೆ ದುಷ್ಕರ್ಮಿ ದಾಳಿ ನಡೆಸಿದ್ದಾರೆ. ನಟನ ಕೈ ಮತ್ತು ಕುತ್ತಿಗೆಯ ಗಂಭೀರ ಗಾಯ ಸೇರಿದಂತೆ ದೇಹದಲ್ಲಿ ಕನಿಷ್ಠ ಆರು ಗಾಯಗಳಾಗಿವೆ.

ಇದನ್ನೂ ಓದಿ: 100 ಹೊಲಿಗೆಗಳಿಂದ ಹಿಡಿದು ಕೆಲ ಶಸ್ತ್ರಚಿಕಿತ್ಸೆಗಳವರೆಗೆ: 5 ಬಾರಿ ಗಾಯಗೊಂಡ ಸೈಫ್ ಅಲಿ ಖಾನ್

"ನಟ ಸೈಫ್ ಅಲಿ ಖಾನ್ ಅವರ ಮೇಲೆ ಅಪರಿಚಿತ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ್ದಾರೆಂಬ ಆರೋಪದ ಮೇಲೆ ಬೆಳಗಿನ ಜಾವ 2 ಗಂಟೆಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಬೆನ್ನುಮೂಳೆಯಲ್ಲಿ ಚಾಕು ಸಿಲುಕಿದ್ದರಿಂದ ಗಾಯಗಳಾಗಿತ್ತು (thoracic spinal cord). ದೇಹದಿಂದ ಚಾಕು ತೆಗೆದುಹಾಕಲು ಮತ್ತು ಬೆನ್ನುಮೂಳೆಯಿಂದ ಸೋರಿಕೆಯಾಗುತ್ತಿದ್ದ ದ್ರವವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಅವರ ಎಡಗೈಯಲ್ಲಾದ ಎರಡು ಗಂಭೀರ ಗಾಯಗಳು ಮತ್ತು ಕುತ್ತಿಗೆಯಲ್ಲಾದ ಗಾಯವನ್ನು ಪ್ಲಾಸ್ಟಿಕ್ ಸರ್ಜರಿ ತಂಡ ಸರಿಪಡಿಸಿದೆ. ಅವರೀಗ ಸಂಪೂರ್ಣವಾಗಿ ಸ್ಥಿರವಾಗಿದ್ದಾರೆ. ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅಪಾಯದಿಂದ ಪಾರಾಗಿದ್ದಾರೆ" ಎಂದು ಡಾ.ಡಾಂಗೆ ಸುದ್ದಿಗಾರರಿಗೆ ತಿಳಿಸಿದರು.

ಐಸಿಯುನಲ್ಲಿ ಸೈಫ್ ಅಲಿ ಖಾನ್‌: ಲೀಲಾವತಿ ಹಾಸ್ಪಿಟಲ್​ನ ಚೀಫ್​​ ಆಪರೇಟಿಂಗ್​​ ಆಫೀಸರ್​​ ಡಾ.ನೀರಜ್ ಉತ್ತಮಣಿ ಅವರು ನಟ ಐಸಿಯುನಲ್ಲಿದ್ದಾರೆ ಮತ್ತು ಅಬ್​​ಸರ್ವೇಶನ್​​​ನಲ್ಲಿದ್ದಾರೆ ಎಂದು ದೃಢಪಡಿಸಿದ್ದಾರೆ. "ಸೈಫ್ ಅವರ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ನರಶಸ್ತ್ರಚಿಕಿತ್ಸೆ ಮತ್ತು ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. 100 ಪರ್ಸೆಂಟ್​​ ಚೇತರಿಕೆಯನ್ನು ನಿರೀಕ್ಷಿಸಿದ್ದೇವೆ" ಎಂದು ತಿಳಿಸಿದರು.

ಪೊಲೀಸ್​ ತನಿಖೆ: ಇಡೀ ಘಟನೆ "ದರೋಡೆ ಪ್ರಯತ್ನ"ದಂತೆ ಕಾಣುತ್ತಿದೆ ಎಂದು ಮುಂಬೈ ಪೊಲೀಸ್ ಝೋನ್​​ 9ರ ಡಿಸಿಪಿ ದೀಕ್ಷಿತ್ ಗೆಡಮ್ ಹೇಳಿದ್ದಾರೆ. ದುಷ್ಕರ್ಮಿ ನಟನ ಮನೆಗೆ ಫೈಯರ್​ ಎಸ್ಕೇಪ್​​ ಸ್ಟೇರ್​​ಕೇಸ್ (ಅಗ್ನಿ ಅವಘಡವಾದಾಗ ತಪ್ಪಿಸಿಕೊಳ್ಳುವ ಮೆಟ್ಟಿಲುಗಳು) ಮೂಲಕ ಪ್ರವೇಶಿಸಿದ್ದನು. "ನಾವು ಆರೋಪಿಗಳನ್ನು ಬಂಧಿಸಲು ಪ್ರಯತ್ನಿಸುತ್ತಿದ್ದೇವೆ. ಹತ್ತು ಡಿಟೆಕ್ಷನ್ ಟೀಮ್ಸ್​​​ ಪ್ರಕರಣದ ತನಿಖೆ ನಡೆಸುತ್ತಿವೆ" ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬಿಗ್ ಬಾಸ್​​: ಧನರಾಜ್​ ಆಚಾರ್​ ಮೋಸದಾಟಕ್ಕೆ ಎಲಿಮಿನೇಷನ್​ ಶಿಕ್ಷೆ?

ಮನೆಕೆಲಸದಾಕೆಯನ್ನು ಕಾಪಾಡಲು ಹೋದಾಗ ನಟನ ಮೇಲೆ ಹಲ್ಲೆ: ಬಾಂದ್ರಾದ ಸತ್ಗುರು ಶರಣ್ ಕಟ್ಟಡದಲ್ಲಿರುವ ಸೈಫ್ ಅಲಿ ಖಾನ್ ಅವರ ನಿವಾಸದಲ್ಲಿ ಈ ಘಟನೆ ನಡೆದಿದೆ. ದುಷ್ಕರ್ಮಿ ಮೊದಲು ನಟನ ಮನೆಕೆಲಸದಾಕೆಯನ್ನು ಎದುರಿಸಿದ್ದಾನೆಂದು ಹೇಳಲಾಗಿದೆ. ಸೈಫ್ ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಬಗೆಹರಿಸಲು ಪ್ರಯತ್ನಿಸಿದರು. ಅದಾಗ್ಯೂ, ಗಲಾಟೆ ಹಿಂಸೆಗೆ ತಿರುಗಿದೆ. ಪರಿಣಾಮವಾಗಿ, ಸೈಫ್ ಗಾಯಗೊಂಡರು ಮತ್ತು ಅವರನ್ನು ಚಿಕಿತ್ಸೆಗಾಗಿ ಲೀಲಾವತಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. (With agency inputs).

ETV Bharat Logo

Copyright © 2025 Ushodaya Enterprises Pvt. Ltd., All Rights Reserved.