ಕರ್ನಾಟಕ

karnataka

ETV Bharat / entertainment

ಸೋನಾಕ್ಷಿ ಸಿನ್ಹಾ- ಜಹೀರ್ ಇಕ್ಬಾಲ್ ಅದ್ಧೂರಿ ರಿಸೆಪ್ಷನ್: ನವಜೋಡಿಯ ಸಖತ್ ಡ್ಯಾನ್ಸ್ - Sonakshi Sinha Zaheer Iqbal Dance - SONAKSHI SINHA ZAHEER IQBAL DANCE

ನವವಿವಾಹಿತರಾದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಅದ್ಧೂರಿ ರಿಸೆಪ್ಷನ್ ಕಾರ್ಯಕ್ರಮ ನಡೆಯಿತು. ಮದುವೆ ಮತ್ತು ಆರತಕ್ಷತೆಯ ವಿಡಿಯೋಗಳು ಭಾರಿ ವೈರಲ್​ ಆಗುತ್ತಿವೆ.

SONAKSHI ZAHEER FIRST DANCE  SONAKSHI ZAHEER RECEPTION  BOLLYWOOD  ENTERTAINMENT NEWS
ಒಳಗೆ ಸೋನಾಕ್ಷಿ ಸಿನ್ಹಾ-ಜಹೀರ್ ಇಕ್ಬಾಲ್ ಅದ್ಧೂರಿ ರಿಸೆಪ್ಷನ್ (ANI)

By ETV Bharat Karnataka Team

Published : Jun 24, 2024, 10:48 AM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಮುಂಬೈನಲ್ಲಿ ಭಾನುವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಏಳು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ ನಂತರ ಮುಂಬೈನಲ್ಲಿ ಈ ಜೋಡಿ ತಮ್ಮ ಹತ್ತಿರದ ಸ್ನೇಹಿತರು ಮತ್ತು ಕುಟುಂಬದವರ ಸಮ್ಮುಖದಲ್ಲಿ ವಿವಾಹವಾದರು. ಇದೀಗ ಅವರ ಮದುವೆ ಮತ್ತು ಆರತಕ್ಷತೆಯ ವಿಡಿಯೋಗಳು ಮತ್ತು ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿದೆ. ಮೊದಲ ಡ್ಯಾನ್ಸ್​ನ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಬಾಲಿವುಡ್ ಸೆಲೆಬ್ರಿಟಿಗಳು ಮದುವೆ ಕಾರ್ಯಕ್ರಮದ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ದಬಾಂಗ್ ನಟಿ ತನ್ನ ಮದುವೆಯ ನಂತರ ಕಡುಗೆಂಪು ಬಣ್ಣದ ರೇಷ್ಮೆ ಸೀರೆಯನ್ನು ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ವರನು ಕೆನೆ ಬಣ್ಣದ ಶೇರ್ವಾನಿಯಲ್ಲಿ ಮಿಂಚಿದರು. ಮದುವೆಯ ಆರತಕ್ಷತೆಯಲ್ಲಿ, ಈ ಜೋಡಿ ಉತ್ಸಾಹದಿಂದ ಪತಿ, ಪತ್ನಿಯಾಗಿ ಫೋಟೋಗಳಿಗೆ ಪೋಸ್ ನೀಡಿದರು. ನಟಿ ತನ್ನ ಸೀರೆಯನ್ನು ಚೋಕರ್ - ಶೈಲಿಯ ಹಸಿರು ಮತ್ತು ಚಿನ್ನದ ನೆಕ್ಲೇಸ್, ಮ್ಯಾಚಿಂಗ್ ಡ್ರಾಪ್ ಕಿವಿಯೋಲೆಗಳು ಮತ್ತು ಕೆಂಪು ಬಳೆಗಳನ್ನು ಧರಿಸಿ ಗಮನ ಸೆಳೆದರು.

ಮತ್ತೊಂದೆಡೆ, ಜಹೀರ್ ಬಿಳಿ ಶೆರ್ವಾನಿಯಲ್ಲಿ ಕಾಣಿಕೊಂಡಿರುವುದು ವಿಶೇಷವಾಗಿತ್ತು. ಪತಿ ಜಹೀರ್ ಮತ್ತು ಪತ್ನಿ ಸೋನಾಕ್ಷಿ ಪಕ್ಕದಲ್ಲಿ ಬಂದು ನಿಂತಾಗ ಆರತಕ್ಷತೆಯ ವೇದಿಕೆಗೆ ಮತ್ತಷ್ಟು ಕಳೆ ಬಂದಿತು. ಔಪಚಾರಿಕ ಫೋಟೋ ಶೂಟ್ ನಂತರ, ನವವಿವಾಹಿತರು ಗ್ರೂಪ್​ ಫೋಟೋಕ್ಕೆ ಪೋಸ್​ ನೀಡಿದರು.

ಸಾಯಿರಾ ಬಾನೊ, ರೇಖಾ, ರಿಚಾ ಚಡ್ಡಾ (ಗುಡ್ಡು ಭೈಯಾ ಅಲಿ ಫಜಲ್ ಜೊತೆ) ಮತ್ತು ಸಂಜೀದಾ ಶೇಖ್, ಅದಿತಿ ರಾವ್ ಹೈದರಿ, ಸಿದ್ಧಾರ್ಥ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ದಂಡೇ ಅಲ್ಲಿ ಸೇರಿತ್ತು. ಡಿಜೆ ಗಣೇಶ್ ಸಂಗೀತವು ಕಾರ್ಯಕ್ರಮದ ಮೆರಗನ್ನು ಇಮ್ಮಡಿಗೊಳಿಸಿತು.

ಮುಂಬೈನ ಐಷಾರಾಮಿ ರೆಸ್ಟೋರೆಂಟ್​ನಲ್ಲಿ ಆರತಕ್ಷತೆ: ಸೋನಾಕ್ಷಿ ಮತ್ತು ಜಹೀರ್ ವಿವಾಹದ ಆರತಕ್ಷತೆಯನ್ನು ಮುಂಬೈನ ಐಷಾರಾಮಿ ರೆಸ್ಟೋರೆಂಟ್​ವೊಂದರಲ್ಲಿ ಆಯೋಜಿಸಲಾಗಿತ್ತು. ಈ ಸಮಾರಂಭದಲ್ಲಿ 1000ಕ್ಕೂ ಹೆಚ್ಚಿನ ಅತಿಥಿಗಳು ಭಾಗವಹಿಸಿದ್ದರು. ಬಾಲಿವುಡ್​ನ ಖ್ಯಾತ ನಟರಾದ ಸಲ್ಮಾನ್ ಖಾನ್, ಅಜಯ್ ದೇವಗನ್ ಅಕ್ಷಯ್ ಕುಮಾರ್, ಟಬು ಕೂಡ ಆರತಕ್ಷತೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ:ಮದುವೆ ಫೋಟೋಗಳನ್ನು ಹಂಚಿಕೊಂಡು ಶಿರ್ಷಿಕೆ ನೀಡಿದ ಜಹೀರ್​, ಸೋನಾಕ್ಷಿ ದಂಪತಿ - Zaheer Sonakshi wedding photos

ABOUT THE AUTHOR

...view details