ಹೈದರಾಬಾದ್:ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಫೈಟರ್' ಸಿನಿಮಾ ಬಿಡುಗಡೆಯಾಗಿ 12ನೇ ದಿನಕ್ಕೆ ದೇಶಿಯಾ ಬಾಕ್ಸ್ ಆಫೀಸ್ನಲ್ಲಿ ಗಳಿಕೆಯ ಪ್ರಮಾಣವನ್ನು ಕಡಿಮೆ ಆಗಿದೆ. ಕಳೆದ ವಾರದಿಂದ ದೇಶಿಯ ಗಲ್ಲಾ ಪೆಟ್ಟಿಗೆಯಲ್ಲಿ ಸದ್ದು ಮಾಡದ ಚಿತ್ರ ಎರಡನೇ ವಾರ ನೀರಸ ಪ್ರದರ್ಶನ ತೋರುತ್ತಿದೆ. ಆದಾಗ್ಯೂ ಚಿತ್ರವೂ ವಾರಾಂತ್ಯದಲ್ಲಿ ಕೊಂಚ ಚೇತರಿಸಿಕೊಂಡಿತು ಎನ್ನುವಾಗಲೇ ಮತ್ತೆ ಸಿಂಗಲ್ ಡಿಜಿಟ್ ಗಳಿಕೆಯತ್ತ ಮುಖ ಮಾಡಿದೆ.
ನಟ ಹೃತಿಕ್ ರೋಶನ್ ಮತ್ತು ದೀಪಿಕಾ ಪಡುಕೋಣೆ ಅಭಿಯನದ ಚಿತ್ರ ಬಿಡುಗಡೆಯಾದ ಮೊದಲ ವಾರದಲ್ಲಿ 146.5 ಕೋಟಿ ಗಳಿಕೆ ಮಾಡಿತ್ತು. 9ನೇ ದಿನ 5.75 ಕೋಟಿ, 10ನೇ ದಿನ 10.5 ಮತ್ತು 11ನೇ ದಿನ 12.5 ಕೋಟಿ ಸಂಪಾದಿಸಿದೆ. ಎರಡನೇ ಸೋಮವಾರ ಚಿತ್ರ ಎಲ್ಲಾ ಭಾಷೆಗಳಲ್ಲಿ 3.35 ಕೋಟಿ ನಿವ್ವಳ ಸಂಪಾದನೆ ಮಾಡಿದೆ. ಇದುವರೆಗೂ ಒಟ್ಟಾರೆಯಾಗಿ 178.60 ಕೋಟಿ ಸಂಪಾದಿಸಿದ್ದು, ಈ ವಾರ ಮುಗಿಯುವುದರೊಳಗೆ 200 ಕೋಟಿ ಗಳಿಸುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಸಿದ್ದಾರ್ಥ್ ಆನಂದ್ ನಿರ್ದೇಶನದ ಈ ಚಿತ್ರ ಜನವರಿ 25ಕ್ಕೆ ಬಿಡುಗಡೆಯಾಗಿತ್ತು. ಅಭಿಮಾನಿಗಳ ವರ್ಗದಿಂದ ಚಿತ್ರದ ಕುರಿತು ಉತ್ತಮ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ವಯಾಕಾಮ್ 18 ಸ್ಟುಡಿಯೋ ಜೊತೆಗೆ ಮಾರ್ಫ್ಲಿಕ್ಸ್ ಪಿಕ್ಚರ್ ಚಿತ್ರವನ್ನು ನಿರ್ಮಾಣ ಮಾಡಿತ್ತು.