ಹೈದರಾಬಾದ್:ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ತಲೈವಾರ್ 171' ಟೀಸರ್ ಬಿಡುಗಡೆಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಚಿತ್ರ ತಂಡ ಇಂದು ಸಂಜೆ ಇದರ ಟೀಸರ್ ಬಿಡುಗಡೆಗೆ ಸಜ್ಜಾಗಿದೆ. ಈ ಕುರಿತು ಚಿತ್ರತಂಡ ಮಾಹಿತಿ ಹಂಚಿಕೊಂಡಿದ್ದು, ಟೈಟಲ್ ಟೀಸರ್ನ ಈ ಭರವಸೆ ಪ್ರೇಕ್ಷಕರಲ್ಲಿ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ತಮಿಳು ಸಿನಿ ಉದ್ಯಮದಲ್ಲಿ ನಟ ರಜನೀಕಾಂತ್ ಜೊತೆ ಸೇರಿ ಒಂದರ ಹಿಂದೆ ಒಂದು ಹಿಟ್ ಸಿನಿಮಾಗಳನ್ನು ನಿರ್ದೇಶಕ ಲೋಕೇಶ್ ಕನಗರಾಜ್ ನೀಡುತ್ತಿದ್ದಾರೆ. ಈ ಇಬ್ಬರು ಮತ್ತೊಮ್ಮೆ 'ತಲೈವರ್ 171'ನಲ್ಲಿ ಜೊತೆಯಾಗಿರುವುದು ಅಭಿಮಾನಿಗಳಲ್ಲಿ ಹೆಚ್ಚಿಸಿದೆ.
'ತಲೈವರ್ 171' ಟೀಸರ್ ಬಿಡುಗಡೆಗೆ ಮುಂಚಿತವಾಗಿ, ತಯಾರಕರು ಚಿತ್ರದ ಸೂಪರ್‌ಸ್ಟಾರ್‌ನ ಕುತೂಹಲಕಾರಿ ಪೋಸ್ಟರ್ ಅಭಿಮಾನಿಗಳಿಗೆ ಹಬ್ಬದೂಟ ಬಡಿಸಿದೆ. ಪೋಸ್ಟರ್ನಲ್ಲಿ 73 ವರ್ಷದ ರಜನೀಕಾಂತ್ ಅವರ ತಮ್ಮ ಎಂದಿನ ಖದರ್ನಲ್ಲಿ ಕಾಣಿಸಲಿದ್ದಾರೆ ಎಂಬ ಸುಳಿವು ತೊರೆದಿದೆ.
ಎಲ್ಲ ರೀತಿಯ ಸಂಭ್ರಮಾಚರಣೆ ಮಾಡಲು ಪ್ರತಿ ಬಾರಿ ರಜನೀಕಾಂತ್ ಸಿನಿಮಾ ಕಾರಣವಾಗುತ್ತದೆ. ಟೈಟಲ್ ಬಿಡುಗಡೆ ಟ್ರೈಲರ್ ಲಾಂಚ್ ಸಿನಿಮಾ ಬಿಡುಗಡೆಯಾಗುವ ಮಟ್ಟದಲ್ಲಿ ಉತ್ಸಾಹವನ್ನ ಸೃಷ್ಟಿಸಿದೆ. ಟಿಜೆ ಜ್ಞಾನವೇಲ್ ಜೊತೆಗೆ 'ತಲೈವರ್ 170'ರ ಸಿನಿಮಾ ವೆಟ್ಟಿಯನ್ ಚಿತ್ರದ ಯಶಸ್ಸಿನ ನಂತರ, ಸನ್ ಪಿಕ್ಚರ್ಸ್ ಬ್ಯಾನರ್ ಅಡಿ ರಜನೀಕಾಂತ್ ಮತ್ತು ಲೋಕೇಶ್ ಕನಕರಾಜ್ ಒಟ್ಟಾಗಿ ಕೆಲಸ ಮಾಡುವ ಚಿತ್ರಗಳು ಸಾಕಷ್ಟು ಕ್ರೇಜ್ ಹೆಚ್ಚಿಸಿವೆ.