ಕರ್ನಾಟಕ

karnataka

ETV Bharat / entertainment

ಮಾರ್ಟಿನ್​​ ಬಗ್ಗೆ ಅಪಪ್ರಚಾರ: 'ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ' ಎಂದ ಧ್ರುವ ಸರ್ಜಾ

'ಮಾರ್ಟಿನ್' ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಮೀಟ್​ ಹಮ್ಮಿಕೊಂಡಿತ್ತು. ಈ ವೇಳೆ ನಾಯಕ ನಟ ಧ್ರುವ ಸರ್ಜಾ ಟೀಕಾಕಾರರಿಗೆ ಪರೋಕ್ಷವಾಗಿ ಟಾಂಗ್​ ಕೊಟ್ಟರು.

Actor Dhruva Sarja
'ಮಾರ್ಟಿನ್' ಸಕ್ಸಸ್ ಮೀಟ್ (ETV Bharat)

By ETV Bharat Entertainment Team

Published : Oct 15, 2024, 5:35 PM IST

'ಮಾರ್ಟಿನ್'. ಸ್ಯಾಂಡಲ್​​ವುಡ್​ನ ಆ್ಯ​​​ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯ ಬಿಗ್​ ಬಜೆಟ್​​ ಸಿನಿಮಾ. ಕಳೆದ ವಾರ ಆಯುಧ ಪೂಜೆಯಂದು ವಿಶ್ವದಾದ್ಯಂತ ತೆರೆ ಕಂಡು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ. ಕರ್ನಾಟಕದಲ್ಲಿ 300ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಮಾರ್ಟಿನ್ ಸಿನಿ ಪ್ರೇಕ್ಷಕರ ಮಿಶ್ರ ಪ್ರತಿಕ್ರಿಯೆ ನಡುವೆ ಬಾಕ್ಸ್ ಆಫೀಸ್‌ನಲ್ಲಿ ಎರಡು ದಿನಕ್ಕೆ 14 ಕೋಟಿ ರೂ. ಕಲೆಕ್ಷನ್‌ ಮಾಡಿದೆ. ಈ ಮಾಹಿತಿಯನ್ನು ಸ್ವತಃ ಚಿತ್ರತಂಡ ಹಂಚಿಕೊಂಡಿತ್ತು.

ಸದ್ಯ ಮಾರ್ಟಿನ್ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡ ಕೇಕ್ ಕಟ್ ಮಾಡುವ ಮೂಲಕ ಸಂಭ್ರಮಾಚರಿಸಿದೆ. ಸಕ್ಸಸ್ ಮೀಟ್​ನಲ್ಲಿ ನಾಯಕ ನಟ ಧ್ರುವ ಸರ್ಜಾ, ನಿರ್ದೇಶಕ ಎ.ಪಿ.ಅರ್ಜುನ್, ನಟಿ ವೈಭವಿ ಶಾಂಡಿಲ್ಯಾ, ಕ್ಯಾಮರಾಮ್ಯಾನ್ ಸತ್ಯ ಹೆಗ್ಡೆ ಸೇರಿದಂತೆ ಇಡೀ ತಂಡ ಭಾಗಿಯಾಗಿದ್ದರು.

ಆ್ಯ​​​ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (ETV Bharat)

ಮಾರ್ಟಿನ್ ಅಂದುಕೊಂಡಂತೆ ಸಿನಿಪ್ರೇಕ್ಷಕರನ್ನು ಎಂಟರ್ಟೈನ್ ಮಾಡಿಲ್ಲ ಎಂಬ ಕಾಮೆಂಟ್​ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್​ ವೈರಲ್ ಆಗುತ್ತಿವೆ. ಈ ಬಗ್ಗೆ ಮಾತನಾಡುವ ಮುನ್ನ ಧ್ರುವ ಸರ್ಜಾ, ಮೊದಲು ಈ ಸಕ್ಸಸ್​ಗೆ ಕಾರಣೀಕರ್ತರಾದ ಚಿತ್ರದ ಎಲ್ಲಾ ಟೆಕ್ನಿಶೀಯನ್ಸ್​​ಗೆ ಹಾಗೂ ಈ ಚಿತ್ರದ ಕಥೆ ಮಾಡಿದ ನಮ್ಮ ಮಾವ ಅರ್ಜುನ್ ಸರ್ಜಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ಕೆಲ ಸ್ಟಾರ್ ನಟರ ಅಭಿಮಾನಿಗಳು ನಿಮ್ಮ ಸಿನಿಮಾವನ್ನು ನೆಗೆಟಿವ್ ಆಗಿ ಸೋಷಿಯಲ್ ಮೀಡಿಯಾದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ ಎಂಬ ಮಾತಿಗೆ ಉತ್ತರಿಸಿದ ಧ್ರುವ, ನನ್ನ ಸಿನಿಮಾ ಬಗ್ಗೆ ಮಾತನಾಡಿ. ಯಾವ ಹೀರೋ ಬಗ್ಗೆಯೂ ನಾನು ಮಾತನಾಡೋಲ್ಲ. ಆ ಪ್ರಶ್ನೆ ಬೇಡ ಅಂದ್ರು. ಬಳಿಕ, ಬಹಳ ಸಮಯ ವ್ಯಯಿಸಿ, ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಬಂದು ನನ್ನ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳುತ್ತಾರೆ (ಅಪಪ್ರಚಾರಕ್ಕೆ) ಅಂದ್ರೆ ಆ ಹೀರೋಗಿಂತ ನನ್ನನ್ನೇ ಜಾಸ್ತಿ ಇಷ್ಟಪಡ್ತಾರೆ ಎಂದರ್ಥ. ಈ ಬಗ್ಗೆ ನನಗೆ ಬಹಳ ಖುಷಿಯಾಗಿದೆ ಎಂದು ಸ್ಯಾಂಡಲ್​ವುಡ್​​ ಸ್ಟಾರ್​ ನಟರೋರ್ವರ ಅಭಿಮಾನಿಗಳಿಗೆ ಟಾಂಗ್ ಕೊಟ್ಟರು.

ಒಂದು ಸಿನಿಮಾ ಬಗ್ಗೆ ಪತ್ರಿಕೆಗಳು ಹಾಗೂ ಚಾನಲ್​ಗಳು ವಿಮರ್ಶೆ ಮಾಡೋದು ಸಹಜ. ಈಗ ಸಿನಿಮಾ ನೋಡಿದ ಪ್ರತಿಯೊಬ್ಬರೂ ವಿಮರ್ಶೆ ಮಾಡುತ್ತಾರೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಟ, ಒಂದು ಸಿನಿಮಾ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅನ್ನೋದನ್ನು ಡಿಸೈಡ್ ಮಾಡೋದು ಪ್ರೇಕ್ಷಕರು. ಸಿನಿಮಾ ನೋಡಿ ಬಂದವರು ಮಿಶ್ರ ಪ್ರತಿಕ್ರಿಯೆ ಕೊಡ್ತಾರೆ. ಅದ್ರಲ್ಲಿ ಕೆಲ ನೆಗೆಟಿವ್ ಕಾಮೆಂಟ್​ಗಳನ್ನು ಸಹ ನಾನು ತೆಗೆದುಕೊಂಡಿದ್ದೇನೆ. ಆದ್ರೆ ಬೇಕಂತಲೇ ನೆಗೆಟಿವ್​ ಕಾಮೆಂಟ್​​ ಕೊಡೋರ ಬಗ್ಗೆ ಜಾಸ್ತಿ ತಲೆಕೆಡಿಸಿಕೊಂಡಿಲ್ಲ ಎಂದು ನಗುತ್ತಲೇ ಉತ್ತರಿಸಿದರು.

ಆ್ಯ​​​ಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (ETV Bharat)

ಇದನ್ನೂ ಓದಿ:ಪ್ರಮೋದ್​ ಶೆಟ್ಟಿಯೀಗ 'ಜಲಂಧರ': ನಾಯಕ ನಟನಾಗಿ ಮತ್ತೆ ಅದೃಷ್ಟ ಪರೀಕ್ಷೆಗಳಿದ 'ಲಾಫಿಂಗ್ ಬುದ್ಧ'

ದ್ವಿಪಾತ್ರದಲ್ಲಿ ಅಭಿನಯಿಸಿರುವ ಬಗ್ಗೆ ಮಾತನಾಡಿ, ನನಗೆ ಕೆಲ ಸನ್ನಿವೇಶಗಳು ಚಾಲೆಂಜಿಂಗ್ ಆಗಿತ್ತು. ದ್ವಿಪಾತ್ರ ಮಾಡಬೇಕೆಂದಾಗ ಬಾಡಿ ಲಾಂಗ್ವೇಜ್ ಬಹಳ ಮುಖ್ಯ. ಈ ಪಾತ್ರ ಮಾಡಬೇಕಾದ್ರೆ ಸಾಕಷ್ಟು ಕಲಿತೆ ಎಂದು ತಿಳಿಸಿದರು.

ಇದನ್ನೂ ಓದಿ:ಚೈತ್ರಾ ಕುಂದಾಪುರ ಪ್ರಕರಣಗಳ ಲೆಕ್ಕ ಕೊಟ್ಟ ಜಗದೀಶ್​: '50 ಅಲ್ಲ 100 ಕೇಸ್​ ಹಾಕಿಸಿಕೊಳ್ತೀನಿ' ಎಂದ ಲೇಡಿ ಸ್ಪರ್ಧಿ

ಮಾರ್ಟಿನ್ ಸಿನಿಮಾದಿಂದ ಸಾಕಷ್ಟು ಪಾಠ ಕಲಿತಿದ್ದೇನೆ. ಇನ್ನು ವರ್ಷಕ್ಕೆ ಎರಡರಿಂದ ಮೂರು ಸಿನಿಮಾ ಮಾಡುತ್ತೇನೆ. ನನ್ನ ಅಭಿಮಾನಿಗಳಿಗೆ ನಿರಾಸೆ ಮಾಡಲ್ಲ ಎಂದು ಭರವಸೆ ನೀಡಿದರು. ಮಾರ್ಟಿನ್ ಸಿನಿಮಾ 100 ಕೋಟಿ ರೂ. ಕಲೆಕ್ಷನ್‌ ಬಗ್ಗೆ ಮಾತನಾಡಿದ ಧ್ರುವ ಸರ್ಜಾ, ನೂರು ಕೋಟಿ ಕಲೆಕ್ಷನ್‌ ಆಗಲು ಒಂದು ವಾರ ಆದ್ರೂ ಬೇಕು ಅಂತಾ ನಗುತ್ತಾ ಉತ್ತರಿಸಿದರು. ಮಾರ್ಟಿನ್ ಪಾರ್ಟ್ 2 ಬರುತ್ತಾ ಎಂಬ ಪ್ರಶ್ನೆಗೆ, ಒಳ್ಳೆ ದುಡ್ಡು ಹಾಕೋ ನಿರ್ಮಾಪಕ ಸಿಕ್ಕರೆ ನೋಡೋಣ ಅಂತಾ ಉತ್ತರಿಸಿದರು.

ABOUT THE AUTHOR

...view details