ದೇಶಾದ್ಯಂತ ಇಂದು 78ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆ ಮಾಡಿದೆ. ಸ್ವಾತಂತ್ರ್ಯಕ್ಕಾಗಿ ನಡೆದ ಬಲಿದಾನಗಳನ್ನು ಸ್ಮರಿಸುವ ಕಾರ್ಯ ನಡೆದಿದೆ. ಶಾಲಾ, ಕಾಲೇಜು, ವಿವಿಧ ಸಂಸ್ಥೆಗಳಲ್ಲಿ ಧ್ವಜಾರೋಹಣ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿವೆ. ಸಿನಿಮಾ ಸೆಲೆಬ್ರಿಟಿಗಳೂ ಸಹ ಕನ್ನಡಿಗರು ಸೇರಿದಂತೆ ಭಾರತೀಯರಿಗೆ ತಮ್ಮ ಶುಭಾಶಯ ಕೋರಿದ್ದಾರೆ.
ಕಿಚ್ಚ ಸುದೀಪ್ ಪೋಸ್ಟ್: ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಖ್ಯಾತಿಯ ನಟ ಸುದೀಪ್ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಭಾರತೀಯ ಧ್ವಜದ ನೋಟವನ್ನು ಹಂಚಿಕೊಂಡಿದ್ದು, 'ನನ್ನ ದೇಶ-ನನ್ನ ಹೆಮ್ಮೆ, ನನ್ನ ದೇಶ-ನನ್ನ ಸ್ವಾಭಿಮಾನ'. ಹೋರಾಟಗಳು ನೂರೆಂಟು, ಭಾರತ ಸ್ವಾತಂತ್ರ್ಯಕ್ಕೆ ವರುಷವು ಎಪ್ಪತ್ತೆಂಟು. ಸಮಸ್ತ ಭಾರತೀಯರಿಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು, ಜೈ ಹಿಂದ್ ಎಂದು ಬರೆದುಕೊಂಡಿದ್ದಾರೆ. ಕನ್ನಡ ಕ್ಯಾಪ್ಷನ್ ಜೊತೆಗೆ ಇಂಗ್ಲಿಷ್ನಲ್ಲಿ ಹ್ಯಾಪಿ ಆಗಸ್ಟ್ 15. ಜಗತ್ತಿನಾದ್ಯಂತ ಇರುವ ಪ್ರತೀ ಭಾರತೀಯರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ಎಂದು ಸಹ ಬರೆದುಕೊಂಡಿದ್ದಾರೆ.
ನಟ ರಕ್ಷಿತ್ ಶೆಟ್ಟಿ ಪೋಸ್ಟ್:ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಖ್ಯಾತಿಯ ಜನಪ್ರಿಯ ನಟ ರಕ್ಷಿತ್ ಶೆಟ್ಟಿ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ, 'ಎಲ್ಲರಿಗೂ ಸ್ವಾತಂತ್ರ್ಯ ದಿನದ ಹಾರ್ದಿಕ ಶುಭಾಶಯಗಳು. ಸ್ವಾತಂತ್ರ್ಯದ ಕನಸು ಕಂಡ ಮತ್ತು ಅದನ್ನು ನನಸಾಗಲು ಶ್ರಮಿಸಿದ ಪ್ರತೀ ಧೈರ್ಯಶಾಲಿಗಳನ್ನು ನೆನಪಿಸಿಕೊಳ್ಳುತ್ತಾ, ಸರ್ವರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.
ಪರಂವಃ ಸ್ಟುಡಿಯೋಸ್ ಪೋಸ್ಟ್: ನಟ ರಕ್ಷಿತ್ ಶೆಟ್ಟಿ ಮಾಲೀಕತ್ವದಪರಂವಃ ಸ್ಟುಡಿಯೋಸ್ಇಂಡಿಪೆಂಡೆನ್ಸ್ ಡೇ ಪೋಸ್ಟರ್ ಹಂಚಿಕೊಂಡಿದ್ದು, ಸ್ವಾತಂತ್ರ್ಯದ ಚೈತನ್ಯವು ನಮಗೆ ಉತ್ತಮ, ಉಜ್ವಲ ಭವಿಷ್ಯದತ್ತ ಮಾರ್ಗದರ್ಶನ ನೀಡಲಿ. ಸ್ವಾತಂತ್ರ್ಯ ದಿನದ ಶುಭಾಶಯಗಳು ಎಂದು ಬರೆದುಕೊಂಡಿದೆ.
ಶಿವಣ್ಣ ಪೋಸ್ಟ್:ಸ್ವಾತಂತ್ರ್ಯ ಹೋರಾಟಗಳನ್ನು ನೆನಪಿಸುವ ಪೋಸ್ಟರ್ ಒಂದನ್ನು ತಮ್ಮ ಅಧಿಕೃತ ಟ್ವಿಟರ್ನಲ್ಲಿ ಹಂಚಿಕೊಂಡ ಕರುನಾಡ ಚಕ್ರವರ್ತಿ ಖ್ಯಾತಿಯ ನಟ ಶಿವರಾಜ್ಕುಮಾರ್,'ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು' ಎಂದು ಬರೆದುಕೊಂಡಿದ್ದಾರೆ.