ಕರ್ನಾಟಕ

karnataka

ETV Bharat / entertainment

ಮಲೆನಾಡಿನ 'ಕೆರೆಬೇಟೆ' ಸಿನಿಮಾಗೆ ಮನಸೋತ ಸ್ಯಾಂಡಲ್​​ವುಡ್ ಸ್ಟಾರ್ಸ್

'ಕೆರೆಬೇಟೆ' ಚಿತ್ರತಂಡ ಕನ್ನಡ ತಾರೆಯರಿಗಾಗಿ ಸ್ಪೆಷಲ್ ಶೋ ಹಮ್ಮಿಕೊಂಡಿತ್ತು.

Kerebete special show
ಕೆರೆಬೇಟೆ ಸ್ಪೆಷಲ್​ ಶೋ

By ETV Bharat Karnataka Team

Published : Mar 14, 2024, 3:01 PM IST

ಕೆರೆಬೇಟೆ ಸ್ಪೆಷಲ್​ ಶೋ

ಸ್ಯಾಂಡಲ್​​​ವುಡ್​ನಲ್ಲಿ ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಕಂಟೆಂಟ್ ಆಧಾರಿತ ಚಿತ್ರಗಳು ಸಿನಿಪ್ರಿಯರನ್ನು ಆಕರ್ಷಿಸುತ್ತಿವೆ. ಈ ಸಾಲಿನಲ್ಲಿ ''ಕೆರೆಬೇಟೆ'' ಸಿನಿಮಾವಿದೆ. ಹೌದು, ಈಗಾಗಲೇ ಟೈಟಲ್ ಹಾಗೂ ಟ್ರೇಲರ್​​​ನಿಂದಲೇ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟಿಸಿರೋ 'ಕೆರೆಬೇಟೆ' ಬಿಡುಗಡೆಗೂ ಮುನ್ನ ಸಖತ್ ಸೌಂಡ್ ಮಾಡುತ್ತಿದೆ. ಹಳ್ಳಿ ಸೊಗಡಿನ ಕಥೆ ಆಧರಿಸಿರೋ ಈ ಸಿನಿಮಾದ ಸ್ಪೆಷಲ್ ಶೋ ಅನ್ನು ಚಿತ್ರತಂಡ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳಿಗಾಗಿ ಹಮ್ಮಿಕೊಂಡಿತ್ತು.

ಈ ಪ್ರೀಮಿಯರ್ ಶೋನಲ್ಲಿ ಖ್ಯಾತ ನಿರ್ದೇಶಕರಾದ ಶಶಾಂಕ್, ಎಂ.ಡಿ ಶ್ರೀಧರ್, ಇಂದ್ರಜಿತ್ ಲಂಕೇಶ್, ಪವನ್ ಒಡೆಯರ್, ನಟರಾದ ವಿಕ್ಕಿ, ಚೇತನ್, ನಟಿ ಹರಿಣಿ, ಸಾಹಿತಿ ಕವಿರಾಜ್, ಸೇರಿದಂತೆ ಕನ್ನಡ ಚಿತ್ರರಂಗದ ನಟ, ನಟಿಯರು ಭಾಗಿಯಾಗಿದ್ದರು. ಕೆರೆಬೇಟೆ ಚಿತ್ರದ ಕಥೆ, ಮೇಕಿಂಗ್ ಸ್ಟೈಲ್, ಕ್ಯಾಮರಾ ವರ್ಕ್ ಜೊತೆಗೆ ನಟ‌ ಗೌರಿಶಂಕರ್ ಅಭಿನಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ದೇಶಕರಾದ ಶಶಾಂಕ್ ಹಾಗೂ ಕವಿರಾಜ್ ಮಾತನಾಡಿ, ದುನಿಯಾ ಚಿತ್ರದ ಬಳಿಕ ಅಂತಹ ಮುಗ್ಧ ಲವ್ ಸ್ಟೋರಿಯನ್ನು ಹೊಂದಿರುವ ಸಿನಿಮಾ ಇದು ಎಂದು ತಿಳಿಸಿದರು. ನಿರ್ದೇಶಕ ಪವನ್ ಒಡೆಯರ್ ಮಾತನಾಡಿ, ಕಾಂತಾರ ಚಿತ್ರದ ಬಳಿಕ ಬಂದ ನಮ್ಮ ಸಂಸ್ಕೃತಿಯ ಸಿನಿಮಾ ಎಂದು ತಿಳಿಸಿದರು. ಈ ಚಿತ್ರದಲ್ಲಿ ಗೌರಿ ಶಂಕರ್ ಅಭಿನಯ ಬಹಳ ಚೆನ್ನಾಗಿದೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್ ತಿಳಿಸಿದರು. ಸೆಲೆಬ್ರಿಟಿಗಳು ಈ ಸಿನಿಮಾ ಕನ್ನಡ ಪ್ರೇಕ್ಷಕರ ಮನ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದು ಅಪ್ಪಟ ಹಳ್ಳಿ ಸೊಗಡಿನ ಕಥೆ. ಚಿತ್ರದಲ್ಲಿ ಗೌರಿ ಶಂಕರ್ ರಗಡ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಜ್‌ಗುರು ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಮೊದಲು ಜೋಕಾಲಿ ಮತ್ತು ರಾಜಹಂಸ ಸಿನಿಮಾಗಳಲ್ಲಿ ಹೀರೋ ಆಗಿ ಮಿಂಚಿದ್ದ ಗೌರಿ ಶಂಕರ್ ಈ ಪಾತ್ರಕ್ಕಾಗಿ ಸಾಕಷ್ಟು ಮೇಕ್ ಓವರ್ ಮಾಡಿಕೊಂಡು ಅಭಿನಯಿಸಿದ್ದಾರೆ. ಮೀನು ಹಿಡಿಯುವರು ಹೇಗೆ ಇದ್ದಾರೆ ಎಂಬುದನ್ನು ನೋಡಿ ತಮ್ಮ ನೋಟ ರೂಪಿಸಿಕೊಂಡಿದ್ದಾರೆ. ನಿರ್ದೇಶಕ ರಾಜ್‌ಗುರು ಅವರಿಗಿದು ಮೊದಲ ಸಿನಿಮಾ. ಹಾಗಂತ ಅವರಿಗೆ ಸಿನಿಮಾ ರಂಗ ಹೊಸದೇನಲ್ಲ. ಈ ಮೊದಲು ನಿರ್ದೇಶಕ ಪವನ್ ಒಡೆಯರ್ ಜೊತೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಇದೀಗ ಕೆರೆಬೇಟೆ ಮೂಲಕ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಕೆರೆಬೇಟೆ ಎಂದರೇನು? ಕೆರೆಬೇಟೆ ಎಂದರೆ ಮಲೆನಾಡು ಭಾಗದಲ್ಲಿ ಮೀನು ಬೇಟೆಯಾಡುವ ಒಂದು ಪದ್ಧತಿ. ಮಲೆನಾಡಿನಲ್ಲಿ ವರ್ಷಕೊಮ್ಮೆ ಕೆರೆಬೇಟೆಯಾಡುತ್ತಾರೆ. ಇದು ದೊಡ್ಡ ದೊಡ್ಡ ಕೆರೆಗಳಲ್ಲಿ ನಡೆಯುತ್ತದೆ. ಇದೇ ಈ ಸಿನಿಮಾದ ಮುಖ್ಯ ಎಳೆಯಾಗಿದೆ. ಕೆರೆಬೇಟೆ ಚಿತ್ರಕ್ಕೆ ಗಗನ್ ಬಡೇರಿಯಾ ಸಂಗೀತ ಸಂಯೋಜನೆ ಮಾಡಿದ್ದಾರೆ. 'ಕೆರೆಬೇಟೆ' ಜನಮನ ಸಿನಿಮಾ ಸಂಸ್ಥೆಯ ಹೆಮ್ಮೆಯ ಕಾಣಿಕೆ. ಇದುವರೆಗೂ ನೋಡಿರದ ಒಂದು ಹಳ್ಳಿ ಸೊಗಡಿನ ಕಥೆಯನ್ನು ಕನ್ನಡ ಪ್ರೇಕ್ಷಕರ ಮುಂದೆ ತರುತ್ತಿದ್ದಾರೆ.

ಇದನ್ನೂ ಓದಿ:ಅಶ್ವಿನಿ ಪುನೀತ್​ ರಾಜ್​ಕುಮಾರ್​ 'RCB' ವಿಡಿಯೋ ಅರ್ಥ ಆಯ್ತಾ?

ಗೌರಿ ಶಂಕರ್​ಗೆ ಬಿಂದು ಜೋಡಿಯಾಗಿದ್ದಾರೆ. ಇವರ ಜೊತೆ ನಟ ಸಂಪತ್, ಗೋಪಾಲ್ ದೇಶಪಾಂಡೆ, ನಟಿ ಹರಿಣಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಿದ್ದಾರೆ. ಜೈ ಶಂಕರ್ ಪಟೇಲ್ ಹಾಗೂ ನಾಯಕ ಗೌರಿ ಶಂಕರ್ ಇಬ್ಬರೂ ಸೇರಿ ತಮ್ಮ ಜನಮನ ಸಿನಿಮಾ ಬ್ಯಾನರ್‌ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಕನ್ನಡ ಚಿತ್ರರಂಗದ ತಾರೆಯರು ಮೆಚ್ಚಿಕೊಂಡು ಕೊಂಡಾಡುತ್ತಿರುವ ಕೆರೆಬೇಟೆ ಚಿತ್ರ ಮಾರ್ಚ್‌ 15ರಂದು ಅಂದರೆ ನಾಳೆ ರಾಜ್ಯಾದ್ಯಂತ ಬಿಡುಗಡೆ ಆಗಲಿದೆ.

ಇದನ್ನೂ ಓದಿ:ರಾಷ್ಟ್ರಪ್ರಶಸ್ತಿ ವಿಜೇತ ನಟಿ ಆಲಿಯಾಗೆ ಖ್ಯಾತ ನಿರ್ದೇಶಕ ರಾಜಮೌಳಿ ನೀಡಿದ ಸಲಹೆ ಏನ್​ ಗೊತ್ತಾ?

ABOUT THE AUTHOR

...view details