ಕರ್ನಾಟಕ

karnataka

ETV Bharat / entertainment

'ಅವನಲ್ಲ ಅವಳು': ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು; ಒಮ್ಮೆ ನೋಡಿಬಿಡಿ - GENDER TRANSITION CELEBRITIES LIST

ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರ ಆರ್ಯನ್​​ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು ಎಂಬುದನ್ನು ತಿಳಿದುಕೊಳ್ಳಿ.

Gender transition celebrities list
ಲಿಂಗ ಬದಲಿಸಿಕೊಂಡ ಸಿನಿ ಸೆಲೆಬ್ರಿಟಿಗಳಿವರು (Instagram/IANS)

By ETV Bharat Entertainment Team

Published : Nov 11, 2024, 6:57 PM IST

ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಪುತ್ರ ಆರ್ಯನ್​​ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ಹಾರ್ಮೋನ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ತಮ್ಮ ಗುರುತನ್ನು 'ಟ್ರಾನ್ಸ್‌ಪರ್ಸನ್' ಎಂದು ಬಹಿರಂಗಪಡಿಸಿದ್ದಾರೆ.

ಹೌದು, ಇತ್ತೀಚೆಗಷ್ಟೇ ಭಾರತೀಯ ತಂಡದ ಮಾಜಿ ಕ್ರಿಕೆಟಿಗ ಸಂಜಯ್ ಬಂಗಾರ್ ಅವರ ಮಗ ಆರ್ಯನ್ ತಮ್ಮ ಲಿಂಗ ಬದಲಾವಣೆ ಮಾಡಿಕೊಂಡಿದ್ದು, ಸೋಷಿಯಲ್​ ಮೀಡಿಯಾ ಪೋಸ್ಟ್​ ಮೂಲಕ ಸಂಚಲನ ಸೃಷ್ಟಿಸಿದ್ದಾರೆ. ಆರ್ಯನ್ ಹಾರ್ಮೋನ್ ರಿಪ್ಲೇಸ್ಮೆಂಟ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. 'ಆರ್ಯನ್​​' ನಿಂದ 'ಅನಾಯಾ' ಆಗಿ ಬದಲಾಗಿದ್ದಾರೆ. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಗಣ್ಯರು ತಮ್ಮ ಲಿಂಗ ಬದಲಾಯಿಸಿಕೊಂಡಿದ್ದಾರೆ. ಸಿನಿಮಾ ಕ್ಷೇತ್ರ ಇದರಿಂದ ಹೊರತಲ್ಲ. ಲಿಂಗ ಬದಲಿಸಿಕೊಂಡಿರುವ ಸಿನಿ ಗಣ್ಯರ ಹೆಸರು ಇಲ್ಲಿದೆ.

ಸಯೇಶಾ ಶಿಂಧೆ (ಸ್ವಪ್ನಿಲ್ ಶಿಂಧೆ):ಈ ಹಿಂದೆ ಸ್ವಪ್ನಿಲ್ ಶಿಂಧೆ ಎಂದು ಗುರುತಿಸಿಕೊಂಡಿದ್ದ ಫ್ಯಾಷನ್ ಡಿಸೈನರ್ 2021ರಲ್ಲಿ ಸಯೇಶಾ ಶಿಂಧೆ ಆಗಿ ಬದಲಾದರು. 2021ರಲ್ಲಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸಯೇಶಾ ಶಿಂಧೆ ಅತ್ಯುತ್ತಮ ಫ್ಯಾಷನ್ ಡಿಸೈನರ್. ಅವರು ತಮ್ಮ ಉತ್ತಮ ಕೆಲಸದಿಂದಾಗಿ ಫ್ಯಾಷನ್ ಉದ್ಯಮದಲ್ಲಿ ಹೆಸರು ಗಳಿಸಿದ್ದಾರೆ.

ಬಾಬಿ ಡಾರ್ಲಿಂಗ್ (ಪಂಕಜ್ ಶರ್ಮಾ):ತಾಲ್, ಮೈನೇ ದಿಲ್ ತುಜ್ಕೋ ದಿಯಾ, ಕ್ಯಾ ಕೂಲ್ ಹೇ ಹಮ್ ಸೇರಿದಂತೆ ಮೊದಲಾದ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಬಾಬಿ ಡಾರ್ಲಿಂಗ್ ಕೂಡಾ ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡಿದ್ದಾರೆ. ಪಂಕಜ್ ಶರ್ಮಾ ಆಗಿ ಜನಿಸಿದ ಬಾಬಿ ಡಾರ್ಲಿಂಗ್ 2010ರಲ್ಲಿ ತಮ್ಮ ಲಿಂಗ ಬದಲಾಯಿಸಿಕೊಂಡರು. ಚಿಕ್ಕವಯಸ್ಸಿನಲ್ಲಿ ಲಿಂಗ ಬದಲಾವಣೆಯಿಂದಾಗಿ ಸಾಕಷ್ಟು ವಿರೋಧ ಎದುರಿಸಬೇಕಾಯಿತು.

ಗೌರಿ ಅರೋರಾ (ಗೌರವ್​ ಅರೋರಾ): ಗೌರವ್ ಅರೋರಾ ಆಗಿ ಜನಿಸಿದ ಗೌರಿ ಅರೋರಾ 2016ರಲ್ಲಿ ಲಿಂಗ ಬದಲಾವಣೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ವಿಷಯವನ್ನು ಅದೇ ವರ್ಷ ಘೋಷಿಸಿದರು. ಸ್ಪ್ಲಿಟ್ಸ್​​ವಿಲ್ಲಾ ಸೀಸನ್ 8ರಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು.

ನಿಕ್ಕಿ ಚಾವ್ಲಾ:ಭಾರತದ ಮೊದಲ ಟ್ರಾನ್ಸ್​​ಜೆಂಡರ್​ ಮಾಡೆಲ್ ನಿಕ್ಕಿ ಚಾವ್ಲಾ 2009ರಲ್ಲಿ ಟ್ರಾನ್ಸ್ ವುಮನ್ ಎಂದು ಗುರುತಿಸಿಕೊಂಡರು. ಅನೇಕ ಅಂತಾರಾಷ್ಟ್ರೀಯ ರ‍್ಯಾಂಪ್​​ ಶೋಗಳು ಮತ್ತು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ಗಜಲ್ ಧಲಿವಾಲ್: ಕಥೆಗಾರರು ಮತ್ತು ಕಲಾವಿದರಾಗಿ ಗುರುತಿಸಿಕೊಂಡಿರುವ ಗಜಲ್ ಧಲಿವಾಲ್ ಅವರು ತಮ್ಮ 20ನೇ ವಯಸ್ಸಿನಲ್ಲಿ ಲಿಂಗ ಪರಿವರ್ತನೆಗೊಳಗಾದರು. ಗಜಲ್, ಎಕ್​ ಲಡ್ಕಿ ಕೊ ದೇಖಾ ತೊ ಐಸಾ ಲಗಾ ಮತ್ತು ಲಿಪ್ಸ್ಟಿಕ್ ಅಂಡರ್ ಮೈ ಬುರ್ಖಾದ ಚಿತ್ರಕ್ಕೆ ಡೈಲಾಗ್ಸ್​​ ಒದಗಿಸಿದ್ದಾರೆ. ಇವರು ಎಲ್​​ಜಿಬಿಟಿಕ್ಯೂ ಸಮುದಾಯದ ಕಾರ್ಯಕರ್ತೆಯೂ ಹೌದು. ಅಮೀರ್ ಖಾನ್ ಅವರ ಟಾಕ್ ಶೋ ಸತ್ಯಮೇವ ಜಯತೆಯಲ್ಲಿಯೂ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ:ದೊಡ್ಮನೆ ಶಕ್ತಿ ಪಾರ್ವತಮ್ಮ ಹಾದಿಯಲ್ಲಿ ಸೊಸೆ ಗೀತಾ ಶಿವರಾಜ್​ಕುಮಾರ್: ಸಿನಿಮಾ ಫೈನಲ್ ಮಾಡೋದು ಇವರೇ

ಅಂಜಲಿ ಅಮೀರ್: ಸಿನಿಮಾಗಳ ಲೀಡ್​ ರೋಲ್​ನಲ್ಲಿ ನಟಿಸಿದ ಮೊದಲ ಟ್ರಾನ್ಸ್​​ಜೆಂಡರ್​​ ಅಂಜಲಿ ಅಮೀರ್​​ ಅವರು ಜಮ್ಶೀರ್ ಆಗಿ ಜನಿಸಿದರು. 1995 ನವೆಂಬರ್​​ 4ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಜನಿಸಿದ ಅವರು ಪೆರಾನ್ಬು (2018), ದಿ ಸ್ಪಾಯಿಲ್ಸ್​​ (2024) ಮತ್ತು ಸುಜಾಲ್ - ದಿ ವೋರ್ಟೆಕ್ಸ್ (2022) ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

ABOUT THE AUTHOR

...view details