ಕರ್ನಾಟಕ

karnataka

ETV Bharat / entertainment

ಹಾಸನದ ಫಾರಂ ಹೌಸ್​ನಲ್ಲಿ ನಡೆಯಲಿದೆ ನಿರ್ಮಾಪಕ ಸೌಂದರ್ಯ ಜಗದೀಶ್ ಅಂತ್ಯಕ್ರಿಯೆ - Soundarya Jagadish - SOUNDARYA JAGADISH

ಭಾನುವಾರ ಸಾವನ್ನಪ್ಪಿರುವ ನಿರ್ಮಾಪಕ ಸೌಂದರ್ಯ ಜಗದೀಶ್​ ಅಂತಿಮ ದರ್ಶನ ಮುಗಿದಿದ್ದು, ಹಾಸನ ಹೈವೇಯಲ್ಲಿರುವ ಜಗದೀಶ್​ ಅವರ ಫಾರ್ಮ್ ಹೌಸ್​ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಸೌಂದರ್ಯ ಜಗದೀಶ್ ಅಂತ್ಯ ಸಂಸ್ಕಾರ
ಸೌಂದರ್ಯ ಜಗದೀಶ್ ಅಂತ್ಯ ಸಂಸ್ಕಾರ

By ETV Bharat Karnataka Team

Published : Apr 15, 2024, 12:32 PM IST

ನಿರ್ಮಾಪಕ ಸೌಂದರ್ಯ ಜಗದೀಶ್​ ಅಂತಿಮ ದರ್ಶನದ ನಂತರ ಅಂತಿಮ ಕಾರ್ಯಕ್ಕೆ ಸಕಲ ಸಿದ್ಧತೆ ನಡೆದಿದೆ. ಹಾಸನ ಹೈವೇಯಲ್ಲಿರುವ ಜಗದೀಶ್​ ಅವರ ಫಾರ್ಮ್ ಹೌಸ್​ನಲ್ಲಿ ಅಂತ್ಯಕ್ರಿಯೆಗೆ ಸಕಲ ಸಿದ್ಧತೆಗಳು ನಡೆದಿವೆ. ಈಗಾಗಲೇ ಸೌಂದರ್ಯ ಜಗದೀಶ್ ಪಾರ್ಥಿವ ಶರೀರವನ್ನು ಹಾಸನದ ಕಡೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಮಧ್ಯಾಹ್ನದ ನಂತರ ಅಂತ್ಯಕ್ರಿಯೆ ನಡೆಯಲಿದ್ದು, ಪುತ್ರ ಸ್ನೇಹಿತ್​ ಅಂತಿಮ ವಿಧಿವಿಧಾನ ಮಾಡಲಿದ್ದಾರೆ.

ಸೌಂದರ್ಯ ಜಗದೀಶ್​ ಉದ್ಯಮಿಯಾಗಿ, ನಿರ್ಮಾಪಕನಾಗಿ ದೊಡ್ಡ ಹೆಸರುಗಳಿಸಿದ್ದರು. ನಿರ್ಮಾಪಕ ಅನ್ನುವುದಕ್ಕಿಂತ ಆಚೆಗೆ ತಮ್ಮ ವ್ಯಕ್ತಿತ್ವದಿಂದ ಎಲ್ಲರ ಮನಸ್ಸು ಗೆದ್ದಿದ್ದರು. ಹೀಗಾಗಿ ಜಗದೀಶ್​ಗೆ ಗೆಳೆಯರ ಬಳಗ ತುಂಬಾ ದೊಡ್ಡದು. ಚಿತ್ರರಂಗದ ಯಾವುದೇ ಕಾರ್ಯಕ್ರಮವಾದರೂ ಅಲ್ಲಿ ಜಗದೀಶ್​ ಹಾಜರಿದ್ದೇ ಇರುತ್ತಿದ್ದರು. ತಮ್ಮ ಕುಟುಂಬ ಎಂದರೇ ಅವರಿಗೆ ಎಲ್ಲಿಲ್ಲದ ಪ್ರೀತಿ. ಪತ್ನಿ, ಮಕ್ಕಳನ್ನು ಬಿಟ್ಟು ಇರುತ್ತಿರಲಿಲ್ಲ. ಈ ಕಾರಣಕ್ಕಾಗಿಯೇ ಸೌಂದರ್ಯ ಜಗದೀಶ್ ಆತ್ಮಹತ್ಯೆ ಸುದ್ದಿಯನ್ನು ಯಾರೂ ನಂಬಿರಲಿಲ್ಲ.

ಸಾವಿನ ಸುದ್ದಿ ತಿಳಿದ ಬಳಿಕ ಸಾಕಷ್ಟು ಆಪ್ತರು, ಕಲಾವಿದರು ಜಗದೀಶ್ ನಿವಾಸದತ್ತ ದೌಡಾಯಿಸಿ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವನ ಹೇಳುತ್ತಿದ್ದಾರೆ. ಅದರಲ್ಲೂ ನಟ ದರ್ಶನ್​ ಮತ್ತು ನಟ ಉಪೇಂದ್ರ ಕುಟುಂಬಕ್ಕೆ ಜಗದೀಶ್​ ತುಂಬಾ ಆಪ್ತರಾಗಿದ್ದರು. ಗೆಳೆಯನ ಸಾವಿನ ಸುದ್ದಿಯಿಂದ ಮನನೊಂದಿರುವ ದರ್ಶನ್, ಉಪೇಂದ್ರ ಕುಟುಂಬಕ್ಕೆ ಸಾಂತ್ವನ ಹೇಳಿ, ಧೈರ್ಯ ತುಂಬುತ್ತಿದ್ದಾರೆ.

ಇದನ್ನೂ ಓದಿ:ಸ್ಯಾಂಡಲ್​ವುಡ್ ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ - Soundarya Jagadish suicide

ABOUT THE AUTHOR

...view details