'ಪಠಾಣ್' ಸಿನಿಮಾ ಖ್ಯಾತಿಯ ನಿರ್ದೇಶಕ ಸಿದ್ಧಾರ್ಥ್ ಆನಂದ್ ಆ್ಯಕ್ಷನ್ ಕಟ್ ಹೇಳಿರುವ ವೈಮಾನಿಕ ಆ್ಯಕ್ಷನ್ ಸಿನಿಮಾ 'ಫೈಟರ್' ಗುರುವಾರ ತೆರೆ ಕಂಡಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ಮೊದಲ ಬಾರಿಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯಿಸಿರುವ ಸಿನಿಮಾ ಬಾಕ್ಸ್ ಆಫೀಸ್ ಪ್ರಯಾಣ ಅತ್ಯುತ್ತಮವಾಗಿದೆ. ಶುಕ್ರವಾರದ ಗಣರಾಜ್ಯೋತ್ಸವ ರಜೆಯ ಲಾಭ ಪಡೆದ ಸಿನಿಮಾದ ಕಲೆಕ್ಷನ್ ಏರಿಕೆ ಕಂಡಿತು. ಆದಾಗ್ಯೂ ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ವರದಿ ಪ್ರಕಾರ, ಹಿಂದಿನ ಎರಡು ದಿನಗಳಿಗೆ ಹೋಲಿಸಿದರೆ ಶನಿವಾರದ ವ್ಯವಹಾರದಲ್ಲಿ ಕೊಂಚ ಕುಸಿತವಾಗಿದೆ.
ಆರಂಭದ ಎರಡು ದಿನಗಳ ಕಲೆಕ್ಷನ್ಗೆ ಹೋಲಿಸಿದರೆ, ಶನಿವಾರದ ಗಳಿಕೆಯಲ್ಲಿ ಶೇ.29.11ರಷ್ಟು ಇಳಿಕೆಯಾಗಿದೆ. 3ನೇ ದಿನ, ಶನಿವಾರ ಭಾರತದಲ್ಲಿ 28 ಕೋಟಿ ರೂಪಾಯಿ ಗಳಿಸಿದೆ. ತೆರೆಕಂಡ ಮೊದಲ ದಿನ 22.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ, ಗಣರಾಜ್ಯೋತ್ಸವದಂದು 39.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಶನಿವಾರ ಶೇ.29.58ರಷ್ಟು ಆಕ್ಯುಪೆನ್ಸಿ ದರದ ಹೊರತಾಗಿಯೂ ಒಟ್ಟಾರೆ ದೇಶೀಯ ಬಾಕ್ಸ್ ಆಫೀಸ್ ಗಳಿಕೆ ಸರಿಸುಮಾರು 90 ಕೋಟಿ ರೂ. ಆಗಿದೆ. ಫೈಟರ್ ಹಲವು ಅಡೆತಡೆಗಳನ್ನು ಎದುರಿಸಿದೆ. ತೆರೆಕಂಡ ಮೊದಲ ದಿನ ಸಕಾರಾತ್ಮಕ ವಿಮರ್ಷೆ ವ್ಯಕ್ತವಾದರೂ ಗಲ್ಫ್ ದೇಶಗಳಲ್ಲಿ ಸಿನಿಮಾಗೆ ನಿಷೇಧವಿರುವ ಹಿನ್ನೆಲೆಯಲ್ಲಿ ಪ್ರೇಕ್ಷಕರ ಮೇಲೆ ಪ್ರಭಾವ ಬೀರಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ:ಪೃಥ್ವಿ ಅಂಬಾರ್-ಮಿಲನ ನಾಗರಾಜ್ ಸ್ಕ್ರೀನ್ ಶೇರ್: 'ಫಾರ್ ರಿಜಿಸ್ಟ್ರೇಷನ್' ರಿಲೀಸ್ ಡೇಟ್ ಅನೌನ್ಸ್