ಹೈದರಾಬಾದ್:ಬಿಡುಗಡೆಗೂ ಮುನ್ನವೇ ಫೈಟರ್ ಸಿನಿಮಾ ಮುಂಗಡ ಟಿಕೆಟ್ ಮಾರಾಟದಿಂದ 2.26 ಕೋಟಿ ರೂ. ಗಳಿಸಿ ದಾಖಲೆ ನಿರ್ಮಿಸಿದೆ. 2ಡಿ ಹಿಂದಿ ಆವೃತ್ತಿಯಿಂದ ಹಿಡಿದು 4DX 3D ಅನುಭವ ಪಡೆಯಲು ಸುಮಾರು 70,072 ಟಿಕೆಟ್ ಗಳನ್ನು ಸಿನಿ ಪ್ರಿಯರು ಖರೀದಿಸಿದ್ದಾರೆ. 2024ರ ಬಹುನಿರೀಕ್ಷಿತ ಚಿತ್ರದಲ್ಲಿ ಡೈನಾಮಿಕ್ ಜೋಡಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಈ ಆಕ್ಷನ್-ಪ್ಯಾಕ್ಡ್ ಥ್ರಿಲ್ಲರ್ ಸಿನಿ ಪ್ರಿಯರ ಕುತೂಹಲ ಹೆಚ್ಚಿಸಿದೆ. ಕೆಲ ದಿನಗಳ ಹಿಂದೆ ‘ಫೈಟರ್’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಿನಿ ಪ್ರಿಯರು ಮೆಚ್ಚಿಕೊಂಡಿದ್ದರು. ಸದ್ಯ ಅಭಿಮಾನಿಗಳು ಸಿನಿಮಾ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
ಫೈಟರ್ ಸಿನಿಮಾದ ಮುಂಗಡ ಟಿಕೆಟ್ ಮಾರಾಟವು ಹೆಚ್ಚಾಗಿದ್ದು, ಮೊದಲ ದಿನವೇ 70,072 ಟಿಕೆಟ್‌ಗಳ ಮಾರಾಟದ ಮೂಲಕ 2.26 ಕೋಟಿ ರೂ. ಗಳಿಸಿದೆ. ಚಿತ್ರಮಂದಿರದಲ್ಲಿ ಸಿನಿ ಪ್ರಿಯರು 2D ಹಿಂದಿ, 3D, IMAX 3D ಸೇರಿದಂತೆ 4DX 3D ಅನುಭವ ಪಡೆಯಲು ಚಿತ್ರತಂಡ ಅವಕಾಶ ಕಲ್ಪಿಸಿದೆ. ಸಿನಿಮಾ ಉದ್ಯಮದ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, 2D ಹಿಂದಿ ಆವೃತ್ತಿಗೆ 28,164 ಟಿಕೆಟ್‌ಗಳು, 3D ಆವೃತ್ತಿ 37,021 ಟಿಕೆಟ್‌ಗಳು, IMAX 3D ಆ್ಯಕ್ಷನ್ 3,945 ಟಿಕೆಟ್‌ಗಳು ಮತ್ತು 4DX 3Dಯ 942 ಟಿಕೆಟ್‌ಗಳು ಮಾರಾಟವಾಗಿವೆ.
ಸಿದ್ಧಾರ್ಥ್ ಆನಂದ್ ಅವರು ನಿರ್ದೇಶಿಸಿರುವ ಫೈಟರ್ ಸಿನಿಮಾದಲ್ಲಿ ಹೃತಿಕ್ ಮತ್ತು ದೀಪಿಕಾ ಮಾತ್ರವಲ್ಲದೆ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್ ಮತ್ತು ಅಜೀಜ್ ಸೇರಿದಂತೆ ಅನೇಕರು ನಟಿಸಿದ್ದಾರೆ. IAF ಅಧಿಕಾರಿಗಳಿಗೆ ಸಂಬಂಧಿಸಿದ ಕಥಾಹಂದರ ಹೊಂದಿರುವ ಈ ಸಿನಿಮಾ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಟ ಅನಿಲ್ ಕಪೂರ್ ವಾಯುಪಡೆಯ ಅಧಿಕಾರಿ (ಐಎಎಫ್) ರಾಕೇಶ್ ಜೈ ಸಿಂಗ್ (ರಾಕಿ) ಪಾತ್ರದಲ್ಲಿ ಮಿಂಚಲಿದ್ದಾರೆ. ವಾಯುಪಡೆಯ ಅಧಿಕಾರಿ ಮಿನಲ್ ರಾಥೋರ್ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡರೆ, ಶ್ಯಾಮ್‌ಶೇರ್ ಪಟಾನಿಯಾ ಪಾತ್ರದಲ್ಲಿ ನಟ ಹೃತಿಕ್ ರೋಷನ್ ಅಭಿನಯಿಸಿದ್ದಾರೆ.
ಪುಲ್ವಾಮಾದಲ್ಲಿ ಭಾರತೀಯ ಪಡೆಗಳ ಮೇಲಿನ ಅತ್ಯಂತ ಭೀಕರ ಭಯೋತ್ಪಾದಕ ದಾಳಿ. ನಂತರದ ಪರಿಣಾಮಗಳು ಮತ್ತು ಬಾಲಾಕೋಟ್ ಮೇಲೆ ಭಾರತದ ಪ್ರತೀಕಾರದ ದಾಳಿ ಸಂಬಂಧಿಸಿದ ವಿಷಯಗಳು ಸಿನಿಮಾದಲ್ಲಿ ಇರಲಿವೆ. ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ನ ಯಶಸ್ಸಿನ ನಂತರ ಸಿದ್ಧಾರ್ಥ್ ಆನಂದ್ ಜೊತೆಗಿನ ಹೃತಿಕ್ ರೋಷನ್ ಅವರ ಮೂರನೇ ಸಿನಿಮಾ ಇದಾಗಿದೆ. 2 ಗಂಟೆ 46 ನಿಮಿಷಗಳ ಈ ಸಿನಿಮಾ ವೈಮಾನಿಕ ಆ್ಯಕ್ಷನ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ನಿಂದ U/A ಪ್ರಮಾಣೀಕರಣವನ್ನು ಪಡೆದುಕೊಂಡಿದೆ.
ಇದನ್ನೂ ಓದಿ:'ಕಾಟೇರ' ಮೂಲಕ 2024 ಶುಭಾರಂಭ: ಮುಂದಿನ ಕನ್ನಡ ಸಿನಿಮಾಗಳ ಮೇಲೆ ಭಾರಿ ನಿರೀಕ್ಷೆ