ಪುನೀತ್ ರಾಜ್‍ಕುಮಾರ್ ಅಗಲಿಕೆಯ ನಂತರ ರಾಘವೇಂದ್ರ ರಾಜ್ಕುಮಾರ್ ಅವರ ಕಿರಿಯ ಮಗ ಯುವ ರಾಜ್ಕುಮಾರ್ ಅವರನ್ನು ಪವರ್ ಸ್ಟಾರ್ ಅವರಂತೆಯೇ ಬೆಳೆಸಬೇಕು ಎಂಬ ಉದ್ದೇಶ ಅಭಿಮಾನಿಗಳದ್ದು. ಯುವನಲ್ಲಿ ಹೆಚ್ಚಿನವರು ಅಪ್ಪುನನ್ನು ಕಾಣಲು ಶುರು ಮಾಡಿದ್ದಾರೆ. ಅದರಂತೆ ಯುವ ರಾಜ್ಕುಮಾರ್ ನಟನೆಯ ಚೊಚ್ಚಲ ಚಿತ್ರದ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬದಂತೆ ಆಚರಿಸಿ, ಸಿನಿಮಾ ಒಂದು ಮಟ್ಟಿಗೆ ಸಕ್ಸಸ್ ಆಗಿತ್ತು.
ಮಾರ್ಚ್ 29ಕ್ಕೆ ತೆರೆಕಂಡ 'ಯುವ' ಸಿನಿಮಾದಲ್ಲಿ ಯುವ ರಾಜ್ಕುಮಾರ್ ಪ್ರೀತಿಸುವ ಹುಡುಗನಾಗಿ, ಅಭಿಮಾನಿಗಳ ಮಾಸ್ ನಟನಾಗಿ, ಜವಾಬ್ದಾರಿಯುತ ಮಗನ ಪಾತ್ರದಲ್ಲಿ ನಟಿಸಿ ಅಭಿಮಾನಿಗಳ ಮನಸ್ಸು ಗೆದ್ದಿದ್ದರು. ಪುನೀತ್ ರಾಜ್‌ಕುಮಾರ್ ಅವತಾರದಲ್ಲಿಯೇ ಜೂ.ಪವರ್‌ಸ್ಟಾರ್ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದರು. ಈ ಸಿನಿಮಾ ಸಕ್ಸಸ್ ಆದ ಬೆನ್ನಲ್ಲೇ ಯುವ ರಾಜ್ಕುಮಾರ್ ಅವರ ವಿಚ್ಚೇದನಕ್ಕೆ ಸಂಬಂಧಿಸಿದ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟಿಗೆ ಸದ್ದು ಮಾಡಿತು.
ಯುವ ಅವರ ವೈಯಕ್ತಿಕ ಬದುಕಿನ ಏರಿಳಿತಗಳು ಅವರ ಸಿನಿಮಾ ಕೆರಿಯರ್ ಮೇಲೆ ಎಫೆಕ್ಟ್ ಆಗುತ್ತೆ ಅನ್ನೋದು ಗಾಂಧಿನಗರದ ಕೆಲ ನಿರ್ಮಾಪಕರ ಮಾತು. ಈ ಬಗ್ಗೆ ಯುವ ಆಪ್ತರೊಬ್ಬರು ಹೇಳುವ ಹಾಗೆ, 'ಯುವ' ಚಿತ್ರ ಬಿಡುಗಯಾದ ಬಳಿಕ ಯುವನ ಜೊತೆ ಮತ್ತೆ ಹೊಂಬಾಳೆ ಫಿಲ್ಮ್ ಹಾಗೂ ಹೊಸ ನಿರ್ಮಾಪಕರು ಸಿನಿಮಾ ಮಾಡುವುದಾಗಿ ಮುಂದೆ ಬಂದಿದ್ದರು. ಆದ್ರೀಗ ಪರ್ಸನಲ್ ವಿಚಾರ ಬಗೆಹರಿದ ಮೇಲೆ ಸಿನಿಮಾ ಮಾಡುವುದಾಗಿ ಕೆಲ ನಿರ್ಮಾಪಕರು ಹಿಂದೆ ಸರಿದಿದ್ದಾರೆ.