ನಟ ಡಾಲಿ ಧನಂಜಯ ಕಡೆಯಿಂದ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಿದೆ. ಸಿಹಿ ಸುದ್ದಿನಾ ಅಂದ್ರೆ ಮದುವೆ ಆಗ್ತಿದ್ದಾರಾ ಅಂತ ಅಚ್ಚರಿ ಪಡಬೇಡಿ. ಡಾಲಿ ಪ್ರೊಡಕ್ಷನ್ನಿಂದ ಮತ್ತೊಂದು ಸಿನಿಮಾ ಸೆಟ್ಟೇರುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಖುಷಿಯ ವಿಚಾರ. ಹೌದು, ಧನಂಜಯ ನಿರ್ಮಾಣದ 'ಡಾಲಿ ಪಿಕ್ಚರ್ಸ್'ನ ಐದನೇ ಸಿನಿಮಾ ಸೆಟ್ಟೇರುತ್ತಿದೆ. ಈಗಾಗಲೇ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿರುವ ಡಾಲಿ ಪಿಕ್ಚರ್ಸ್ ಇದೀಗ ಮತ್ತೊಂದು ಹಿಟ್ ನೀಡಲು ಸಜ್ಜಾಗಿದೆ.
'ಟಗರು ಪಲ್ಯ' ಸಕ್ಸಸ್ನಲ್ಲಿರುವ 'ಡಾಲಿ ಪಿಕ್ಚರ್ಸ್' ಇದೀಗ ಮತ್ತೊಂದು ವಿಭಿನ್ನ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರುತ್ತಿದೆ. ಈ ಬಗ್ಗೆ ಡಾಲಿ ಪಿಕ್ಚರ್ಸ್ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. ಆದರೆ ಯಾವ ಸಿನಿಮಾ, ಹೀರೋ ಯಾರು ಎನ್ನುವ ಯಾವುದೇ ಡೀಟೇಲ್ಸ್ಅನ್ನು ಬಿಟ್ಟುಕೊಟ್ಟಿಲ್ಲ.