ಕರ್ನಾಟಕ

karnataka

ETV Bharat / entertainment

'ಜನ ನೋಡ್ತಾರೆ ಈ ನಿಯತ್ತನ್ನು': ಕಿಚ್ಚನ ಚಪ್ಪಾಳೆ ಪಡೆದ ಹನುಮಂತು ವಿರುದ್ಧ ಸಿಡಿದೆದ್ದ ಚೈತ್ರಾ, ಗೌತಮಿ - BIGG BOSS KANNADA 11

ಈವರೆಗೆ ಬಹಳ ತಾಳ್ಮೆಯಿಂದ ಗುರುತಿಸಿಕೊಂಡಿದ್ದ ಗೌತಮಿ ಅವರು ಟಾಸ್ಕ್​ವೊಂದರ​ ನಿರ್ಧಾರದ ಕುರಿತಂತೆ ಅಸಮಾಧಾನಗೊಂಡಿದ್ದಾರೆ. ಮತ್ತೊಂದೆಡೆ ಚೈತ್ರಾ ಕುಂದಾಪುರ ಹನುಮಂತು ನಿಯತ್ತಿನ ಬಗ್ಗೆ ಪ್ರಶ್ನೆ ಎತ್ತಿದ್ದಾರೆ.

bigg boss kannada 11
ಬಿಗ್​ ಬಾಸ್​ ಕನ್ನಡ ಸೀಸನ್​ 11 (Bigg Boss Team)

By ETV Bharat Entertainment Team

Published : Nov 5, 2024, 1:43 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ''ಬಿಗ್​ ಬಾಸ್​ ಸೀಸನ್​ 11''ರ ಆರನೇ ವಾರದ ಆಟ ಸಾಗಿದೆ. ಎಂದಿನಂತೆ ಸ್ಪರ್ಧಿಗಳಿಗೆ ಟಾಸ್ಕ್ ಕೊಡಲಾಗಿದೆ. ಆದ್ರೆ ಮುಗ್ಧನಾಗಿ ಗುರುತಿಸಿಕೊಂಡಿರುವ ​​ಹನುಮಂತು ಅವರಿಗೆ ಈ ಟಾಸ್ಕ್​​ನ ತೀರ್ಪು ಮುಳುವಾಗುವಂತೆ ತೋರಿದೆ. ಹನುಮಂತು ವಿರುದ್ಧ ಚೈತ್ರಾ ಕುಂದಾಪುರ ಹಾಗೂ ಗೌತಮಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ನಿಯತ್ತಿನ ಆಟ ಆಡಿದ್ದಕ್ಕೆ ಈ ಸೀಸನ್​ನಲ್ಲಿ ಕಿಚ್ಚನ ಚಪ್ಪಾಳೆಯನ್ನು ಹನುಮಂತು ಅವರು ಸ್ವೀಕರಿಸಿದ್ದರು. ಇದೀಗ ಅವರ ನಿಯತ್ತಿಗೇನೆ ಸಹ ಸ್ಪರ್ಧಿಗಳಿಂದ ಪ್ರಶ್ನೆ ಎದುರಾಗಿದೆ.

''ಬಂಡಾಯ ಎದ್ರು ಚೈತ್ರಾ, ಹನುಮಂತುಗೆ ತಡೆಯೋಕ್ಕಾಗುತ್ತಾ ಈ ಹೊಡೆತ?'' ಬಿಗ್ ಬಾಸ್ ಕನ್ನಡ ಸೀಸನ್ 11. ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ನೊಂದಿಗೆ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ. ಬಿ ಪಾಸಿಟಿವ್​ ಎಂದು ಹೆಚ್ಚಾಗಿ ಪ್ರಬುದ್ಧತೆಯಿಂದಲೇ ಪರಿಸ್ಥಿತಿಯನ್ನು ನಿಭಾಯಿಸುವ ಗೌತಮಿ ಅವರೂ ಕೂಡಾ ತಮ್ಮ ತಾಳ್ಮೆ ಕಳೆದುಕೊಂಡಿದ್ದಾರೆ. ಉಳಿದಂತೆ ಚೈತ್ರಾ ಕುಂದಾಪುರ ಎಂದಿನಂತೆ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:'ಬಿಗ್​ ಬಾಸ್​ ನನ್ನಮ್ಮನ ಅಚ್ಚುಮೆಚ್ಚಿನ ಕಾರ್ಯಕ್ರಮ': ಸುದೀಪ್​​ ಭಾವುಕ, ಧೈರ್ಯ ತುಂಬಿದ ಸರ್ವರಿಗೂ ಧನ್ಯವಾದ

ಬಿಗ್​​ ಬಾಸ್​ ಮನೆಯಲ್ಲಿ ಟಾಸ್ಕ್​​​ ಕೊಡಲಾಗಿದೆ. ಮಾತು ಕೊಡ್ತೀರಾ ಎಂದು ಮಂಜು ಶಿಶಿರ್​ ಬಳಿ ಕೇಳಿದ್ದಾರೆ. ಪಕ್ಕಾ ಎಂದು ಇಬ್ಬರೂ ಪರಸ್ಪರ ಏನೋ ಒಪ್ಪಂದ ಮಾಡಿಕೊಂಡಿದ್ದಾರೆ. ಗೆಲ್ಲುವ ತಂಡ ಒಂದು ತಂಡವನ್ನು ಆಟದಿಂದ ಹೊರಗಿಡಬೇಕು ಎಂದು ಸೂಚಿಸಲಾಗಿದೆ. ಅದರಂತೆ ಚೈತ್ರಾ ಕುಂದಾಪುರ ಹಾಗೂ ಗೌತಮಿ ಅವರನ್ನು ಆಟದಿಂದ ಹೊರಗಿಟ್ಟಿರುವಂತೆ ತೋರಿದೆ. ಚೈತ್ರಾ ಮಾತನಾಡಿ, ಸೂಪರ್​ ಹನುಮಂತಣ್ಣ, ನಿಮ್ಮ ಆಟದಲ್ಲೇ ಈ ನಿಯತ್ತನ್ನು ನೋಡಬೇಕಿತ್ತು ನಾನು. ವೋಟ್​ ಹಾಕೋ ಜನಕ್ಕೆ ಯಾವ ನಿಯತ್ತಿನ ಬಗ್ಗೆ ಉತ್ತರ ಕೊಡ್ತೀರಿ ಎಂಬುದನ್ನು ನೋಡಬೇಕಿದೆ. ಜನ ನೋಡ್ತಾರೆ ಈ ನಿಯತ್ತನ್ನು ಎಂದು ಕಿಡಿಕಾರಿದ್ದಾರೆ. ಬಾ ಗುರು ನೋಡೇ ಬಿಡೋಣ, ಈವರೆಗೆ ಸುಮ್ಮನಿದ್ವಿ ಎಂದು ಗೌತಮಿ ಸಹ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ:ಬಿಗ್​ ಬಾಸ್​​ನಿಂದ ಮಾನಸಾ ಔಟ್​: ಮುಖವಾಡ ಕಳಚಿತು ವಿಡಿಯೋ; ಬೆನ್ನಿಂದೆ ಮಾತನಾಡಿದ್ದೆಲ್ಲವೂ ಸ್ಪರ್ಧಿಗಳ ಮುಂದೆ

ಕಳೆದ ದಿನ ಸ್ಪರ್ಧಿಗಳು ಇತರರ ಬಗ್ಗೆ ಬೆನ್ನಿಂದೆ ಮಾತನಾಡಿದ ವಿಡಿಯೋವನ್ನು ಎಲ್ಲರ ಸಮ್ಮುಖದಲ್ಲಿ ಪ್ಲೇ ಮಾಡಲಾಗಿದೆ. ಇದು ಸ್ಪರ್ಧಿಗಳ ಮನಸ್ತಾಪಗಳಿಗೆ ತುಪ್ಪ ಸುರಿದಂತಿದೆ. ಮುಂದಿನ ದಿನಗಳಲ್ಲಿ ಈ ಕೋಪತಾಪಗಳು ಹೀಗೆ ಮುಂದುವರಿಯುತ್ತಾ ಅಥವಾ ಮನಸ್ತಾಪಗಳಿಗೆ ಫುಲ್​ ಸ್ಟಾಪ್​ ಇಡ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಸದ್ಯ ಇಂದಿನ ಸಂಚಿಕೆ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಪ್ರೇಕ್ಷಕರು ಕಾತರರಾಗಿದ್ದಾರೆ. ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ.

ABOUT THE AUTHOR

...view details