ಹೈದರಾಬಾದ್: ಬಾಲಿವುಡ್ ನಟಿ ಮಲೈಕಾ ಅರೋರಾ ಮತ್ತು ಅವರ ಸಹೋದರಿ ಅಮೃತಾ ಅರೋರಾ ಅವರು ತಮ್ಮ ತಂದೆ ಅನಿಲ್ ಮೆಹ್ತಾ ಅವರಿಗಾಗಿ ಸೋಮವಾರ ಗುರುದ್ವಾರದಲ್ಲಿ ಪ್ರಾರ್ಥನಾ ಸಭೆ ಹಮ್ಮಿಕೊಂಡಿದ್ದರು. ಈ ಪ್ರೇಯರ್ ಮೀಟ್ಗೆ ಬಾಲಿವುಡ್ನ ಬಹುತೇಕರು ಸಾಕ್ಷಿಯಾಗಿದ್ದು, ಫೋಟೋ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮಲೈಕಾ ಅವರ ಗೆಳೆಯ ಅರ್ಜುನ್ ಕಪೂರ್ (ಮಾಜಿ ರೂಮರ್ ಬಾಯ್ಫ್ರೆಂಡ್), ಆಪ್ತ ಸ್ನೇಹಿತೆ ಮತ್ತು ನಟಿ ಕರೀನಾ ಕಪೂರ್ ಖಾನ್ ಮತ್ತು ಅದಿತಿ ಗೋವಿತ್ರಿಕರ್ ಅವರಂತಹ ಸಿನಿ ಗಣ್ಯರು ಈ ಕಠಿಣ ಸಮಯದಲ್ಲಿ ಅರೋರಾ ಕುಟುಂಬಕ್ಕೆ ಬೆಂಬಲ ನೀಡಿದ್ದಾರೆ. ಮಲತಂದೆ ಅನಿಲ್ ಮೆಹ್ತಾ ಸೆಪ್ಟೆಂಬರ್ 11 ರಂದು ಆತ್ಮಹತ್ಯೆಗೆ ಶರಣಾದರು. ಈ ಘಟನೆ ಅವರ ಕುಟುಂಬದ ಮೇಲೆ ತೀವ್ರ ಪ್ರಭಾವ ಬೀರಿದೆ.
ಮಲೈಕಾ ಅರೋರಾ ತಂದೆಯ ಪ್ರಾರ್ಥನಾ ಸಭೆಯಲ್ಲಿ ಸೆಲೆಬ್ರಿಟಿಗಳು (Video source: ANI) ಗುರುದ್ವಾರದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿವೆ. ಈ ಕಠಿಣ ಸಂದರ್ಭ ಅರೋರಾ ಕುಟುಂಬಕ್ಕೆ ಸಿನಿ ಸ್ನೇಹಿತರು ತಮ್ಮ ಅಗಾಧ ಬೆಂಬಲ ನೀಡಿದ್ದಾರೆ. ನಟ ಅರ್ಜುನ್ ಕಪೂರ್ ಬ್ಲ್ಯಾಕ್ ಡೆನಿಮ್, ಸಾದಾ ಬಿಳಿ ಶರ್ಟ್ ನಲ್ಲಿ ಕಾಣಿಸಿಕೊಂಡರು. ನಟ ಕ್ಯಾಪ್ ತೊಟ್ಟು ತಮ್ಮ ನೋಟ ಬೀರಿದರು. ಅವರಲ್ಲದೇ ಗೌರವ್ ಕಪೂರ್ ಮತ್ತು ರಿತೇಶ್ ಸಿಧ್ವಾನಿ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕರೀನಾ ಮತ್ತು ಮಲೈಕಾ ಇಬ್ಬರೂ ಬಿಳಿ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.
ಬಾಲಿವುಡ್ನಲ್ಲಿ ನಟಿ, ರೂಪದರ್ಶಿ, ಫಿಟ್ನೆಸ್ ಐಕಾನ್ ಆಗಿ ಗುರುತಿಸಿಕೊಂಡಿರುವ ಮಲೈಕಾ ಅರೋರಾ ಅವರ ಮಲತಂದೆ ಇತ್ತೀಚಿಗೆ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ದುರ್ಘಟನೆ ಸಂದರ್ಭ ಮಗಳು ಮಲೈಕಾ ಮನೆಯಲ್ಲಿರಲಿಲ್ಲ, ಕೆಲಸದ ನಿಮಿತ್ತ ಪುಣೆಯಲ್ಲಿದ್ದರು. ವಿಷಯ ತಿಳಿದ ಕೂಡಲೇ ಮಗಳು ಮಲೈಕಾ ಮುಂಬೈನ ನಿವಾಸಕ್ಕೆ ಆಗಮಿಸಿದ್ದರು. ಅವರಿಗೂ ಮುನ್ನ ಮಾಜಿ ಪತಿ ಅರ್ಬಾಜ್ ಖಾನ್ ಕುಟುಂಬ, ರೂಮರ್ ಬಾಯ್ಫ್ರೆಂಡ್ (ಮಾಜಿ) ಅರ್ಜುನ್ ಕಪೂರ್ ಸೇರಿದಂತೆ ಬಾಲಿವುಡ್ನ ಹಲವರು ನಟಿಯ ಅಪಾರ್ಟ್ಮೆಂಟ್ ತಲುಪಿದ್ದರು.
ಇದನ್ನೂ ಓದಿ:ಬಿಗ್ ಬಾಸ್ ಸೀಸನ್ 11: ಈ ಬಾರಿ ಒಂದು ದಿನ ಮೊದಲೇ ಕೆಲವು ಸ್ಪರ್ಧಿಗಳ ಹೆಸರು ಘೋಷಣೆ - Kannada Big Boss Season 11
ಸೈಫ್ ಅಲಿ ಖಾನ್, ಕರೀನಾ ಕಪೂರ್ ಖಾನ್, ಅನನ್ಯಾ ಪಾಂಡೆ, ಚಂಕಿ ಪಾಂಡೆ, ಮಾಜಿ ಪತಿ ಅರ್ಬಾಜ್ ಖಾನ್ (ಸಲ್ಮಾನ್ ಖಾನ್ ಸಹೋದರ) ಕುಟುಂಬಸ್ಥರು ಕೂಡಾ ಭೇಟಿ ಕೊಟ್ಟಿದ್ದಾರೆ. ಪಾಪರಾಜಿಗಳು ಶೇರ್ ಮಾಡಿದ್ದ ವಿಡಿಯೋಗಳಲ್ಲಿ ಸಲೀಮ್ ಖಾನ್, ಸಲ್ಮಾ ಖಾನ್, ಸೊಹೈಲ್ ಖಾನ್, ನಿರ್ವಾಣ್ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ:ತೆಲುಗು ರಾಜ್ಯಗಳಲ್ಲಿ ಪ್ರವಾಹ: ಸಿಎಂ ಭೇಟಿಯಾಗಿ 50ಲಕ್ಷ ರೂ. ದೇಣಿಗೆ ನೀಡಿದ ಸೂಪರ್ಸ್ಟಾರ್ ಮಹೇಶ್ ಬಾಬು - Mahesh Babu Philanthropic Activity