ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ಪ್ರತಿಷ್ಠಿತ 'ಕೇನ್ಸ್ ಫಿಲ್ಮ್ ಫೆಸ್ಟಿವಲ್'ಗೆ ಪಾದಾರ್ಪಣೆ ಮಾಡುವ ಖುಷಿಯಲ್ಲಿದ್ದಾರೆ. ತಮ್ಮ ಚೊಚ್ಚಲ ಪ್ರಯತ್ನಕ್ಕಾಗಿ ಸಾಕಷ್ಟು ಉತ್ಸುಕರಾಗಿದ್ದು, ಅವರ ಅಭಿಮಾನಿಗಳಿಗೂ ಸಾಕಷ್ಟು ನಿರೀಕ್ಷೆ ಇದೆ. ಸೌಂದರ್ಯ ಮತ್ತು ಫಿಟ್ನೆಸ್ಗೆ ಹೆಸರುವಾಸಿಯಾಗಿರುವ ಕಿಯಾರಾ ತಮ್ಮ ಮೋಹಕ ನೋಟ ಬೀರಲು ನ್ಯೂಯಾರ್ಕ್‌ಗೆ ಪ್ರಯಾಣಿಸಿದ್ದಾರೆ. ಬುಧವಾರ ಮಧ್ಯರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ನಟಿ ಕಾಣಿಸಿಕೊಂಡಿದ್ದು, ಏರ್ಪೋರ್ಟ್ ಲುಕ್ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಪಾಪರಾಜಿಗಳು ತಡರಾತ್ರಿ ಕಿಯಾರಾ ಅವರ ವಿಡಿಯೋವನ್ನು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ 'ಶೆರ್ಷಾ' ನಟಿ ಮೊದಲು ತಮ್ಮ ಮಿನುಗುವ ಕಾರಿನಿಂದ ಇಳಿಯುವುದನ್ನು ಕಾಣಬಹುದು. ಈ ಸಂದರ್ಭದಲ್ಲಿ ಕ್ರೀಮ್ ಕಲರ್ ಓವರ್ಕೋಟ್, ಪ್ಯಾಂಟ್, ಸ್ವೆಟ್ಟಾಪ್ನಲ್ಲಿ ಸುಂದರವಾಗಿ ಕಾಣಿಸಿಕೊಂಡರು. ಯೆಲ್ಲೋ ಪರ್ಸ್, ಮಿನಿಮಮ್ ಮೇಕ್ಅಪ್, ಬ್ರೌನ್ ಸನ್ಗ್ಲಾಸ್ ಮತ್ತು ಬನ್ ಹೇರ್ಸ್ಟೈಲ್ನೊಂದಿಗೆ ತಮ್ಮ ನೋಟ ಬೀರಿದರು. ವಿಮಾನ ನಿಲ್ದಾಣ ಪ್ರವೇಶಿಸುವ ಮೊದಲು ನಟಿ ನಗು ನಗುತ್ತಾ ಪಾಪರಾಜಿಗಳ ಕ್ಯಾಮರಾಗಳಿಗೆ ಪೋಸ್ ಕೊಟ್ಟರು.
'ಕೇನ್ಸ್ ಫಿಲ್ಮ್ ಫೆಸ್ಟಿವಲ್' ಪ್ರಪಂಚದ ಗಮನ ಸೆಳೆಯುವ ಕಾರ್ಯಕ್ರಮ. ತಾರೆಗಳು ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುತ್ತಾ ತಮ್ಮ ಸೌಂದರ್ಯ ಪ್ರದರ್ಶಿಸುತ್ತಾರೆ. ಆದರೆ ಕಿಯಾರಾ ಅಡ್ವಾಣಿ ಏರ್ಪೋರ್ಟ್ನಲ್ಲೇ ಧೂಳೆಬ್ಬಿಸಿದ್ದಾರೆ. ಲೇಡಿ ಬಾಸ್ ಲುಕ್ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಇಲ್ಲಿಯೇ ಹೀಗೆ, ಇನ್ನು ನ್ಯೂಯಾರ್ಕ್ನ ಕೇನ್ಸ್ ಈವೆಂಟ್ನಲ್ಲಿ ಹೇಗೆ? ಅಂತಿದ್ದಾರೆ ಫ್ಯಾನ್ಸ್. ಒಟ್ಟಾರೆ, ಚೆಂದುಳ್ಳಿ ಚೆಲುವೆಯ ಏರ್ಪೋರ್ಟ್ ಲುಕ್ ಅಭಿಮಾನಿಗಳ ಗಮನ ಸೆಳೆದಿದೆ.