ETV Bharat / bharat

ಅಪ್ರಾಪ್ತ ಕ್ರೀಡಾಪಟು ಮೇಲೆ 62 ಮಂದಿಯಿಂದ ಅತ್ಯಾಚಾರ; ಬಂಧಿತರ ಸಂಖ್ಯೆ 13ಕ್ಕೇರಿಕೆ, ಪೊಲೀಸರು ಹೇಳಿದ್ದೇನು? - RAPE ON MINOR GIRL

ಕೇರಳದಲ್ಲಿ ಕಂಡುಕೇಳರಿಯದ ಅತ್ಯಾಚಾರ ಕೇಸ್​ ದಾಖಲಾಗಿದ್ದು, 62 ಮಂದಿ 5 ವರ್ಷದಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ಸಂತ್ರಸ್ತೆ ದೂರು ನೀಡಿದ್ದಾರೆ. ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 13ಕ್ಕೆ ಏರಿದೆ.

ಅಪ್ತಾಪ್ತೆ ಮೇಲೆ 5 ವರ್ಷದಿಂದ 62 ಮಂದಿ ಅತ್ಯಾಚಾರ ಆರೋಪ
ಅಪ್ತಾಪ್ತೆ ಮೇಲೆ 5 ವರ್ಷದಿಂದ 62 ಮಂದಿ ಅತ್ಯಾಚಾರ ಆರೋಪ (ETV Bharat)
author img

By PTI

Published : Jan 12, 2025, 5:57 PM IST

ಪತ್ತನಂತಿಟ್ಟ (ಕೇರಳ) : ಕೇರಳದಲ್ಲಿ ಬೆಳಕಿಗೆ ಬಂದಿರುವ ಭಯಾನಕ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಪೊಲೀಸರು ಮತ್ತೆ 7 ಜನ ಆರೋಪಿಗಳನ್ನು ಬಂಧಿಸಿದ್ದಾರೆ. ತನ್ನ ಮೇಲೆ 62 ಮಂದಿ ಕಳೆದ 5 ವರ್ಷದಿಂದ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಅಪ್ರಾಪ್ತೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಅಪ್ರಾಪ್ತ ಸೇರಿ 13 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ಅಥ್ಲೀಟ್​ ಆಗಿರುವ ದಲಿತ ಸಮುದಾಯಕ್ಕೆ ಸೇರಿದ ಅಪ್ರಾಪ್ತೆಯು, ತನ್ನನ್ನು ಕ್ರೀಡಾ ತರಬೇತುದಾರರು, ಸಹ ಕ್ರೀಡಾಳುಗಳು, ಸಹಪಾಠಿಗಳು ದುರುಪಯೋಗಪಡಿಸಿಕೊಂಡಿದ್ದಾರೆ. ತಾನು 13ನೇ ವಯಸ್ಸಿನಿಂದಲೂ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪ್ರಕರಣದಲ್ಲಿ ಶುಕ್ರವಾರ (ಜನವರಿ 10) 6 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಶನಿವಾರ ಮತ್ತೆ 7 ಮಂದಿಯನ್ನು ಬಂಧಿಸಿದ್ದಾರೆ.

ಪುರಾವೆಗಳು ಸಿಕ್ಕಿವೆ : ದೂರುದಾರೆಗೆ ಈಗ 18 ವರ್ಷ. ಆಕೆ ಅಪ್ರಾಪ್ತೆಯಾಗಿದ್ದಾಗ 62 ಮಂದಿಯಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಾಗಿ ದೂರು ನೀಡಿದ್ದಾರೆ. ತನ್ನ ಅಥ್ಲೀಟ್​​ ತರಬೇತುದಾರರು, ಸಹ ಕ್ರೀಡಾಪಟುಗಳು ಮತ್ತು ಸಹಪಾಠಿಗಳು ತನ್ನನ್ನು ಶೋಷಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪುರಾವೆಗಳೂ ಸಿಕ್ಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಥ್ಲೀಟ್ ಮೇಲೆ ಶಾಲೆ ಮತ್ತು ಕ್ರೀಡಾ ತರಬೇತಿ ಶಿಬಿರಗಳಲ್ಲಿ ದೌರ್ಜನ್ಯ ನಡೆಸಲಾಗಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಪತ್ತನಂತಿಟ್ಟ ಪಟ್ಟಣದ ಅಚಂಕೊಟ್ಟುಮಲ, ಚುಟ್ಟಿಪ್ಪರ ಮುಂತಾದ ಸಾರ್ವಜನಿಕ ಸ್ಥಳಗಳು ಮತ್ತು ಆಕೆಯ ಶಾಲೆ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಪಾದಿತ ಘಟನೆಗಳು ನಡೆದಿರುವ ಬಗ್ಗೆ ಮಾಹಿತಿ ಇದೆ ಎಂದು ಪೊಲೀಸರು ಹೇಳಿದ್ದಾರೆ.

ಓದಿ: ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ 67 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ

ಐದು ಕಡೆ ಎಫ್​​ಐಆರ್​​ ದಾಖಲು : ಪತ್ತನಂತಿಟ್ಟ ಪೊಲೀಸ್ ಉಪ ವರಿಷ್ಠಾಧಿಕಾರಿ (ಎಸ್​​ಪಿ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಪತ್ತನಂತಿಟ್ಟ ಜಿಲ್ಲೆಯ ಎರಡು ಪೊಲೀಸ್ ಠಾಣೆಗಳಲ್ಲಿ ಐದು ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ. ಇಲ್ಲಿಯವರೆಗೆ ಒಬ್ಬ ಅಪ್ರಾಪ್ತ ಸೇರಿದಂತೆ 13 ಜನರನ್ನು ಬಂಧಿಸಲಾಗಿದೆ. ಇದರಲ್ಲಿ ಹಲವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆ. ಆರೋಪಿಗಳ ವಿರುದ್ಧ ಎಸ್​​ಸಿ- ಎಸ್​ಟಿ (ದೌರ್ಜನ್ಯ ತಡೆ) ಕಾಯ್ದೆ, ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದೂರುದಾರ ಸಂತ್ರಸ್ತೆಯ ಹೇಳಿಕೆ ಪ್ರಕಾರ, ತನ್ನ ಮೇಲೆ 13 ವರ್ಷದವಳಿದ್ದಾಗ ನೆರೆಹೊರೆಯವರಿಂದ ಹಿಡಿದು ಕ್ರೀಡಾ ತರಬೇತುದಾರರವರೆಗೂ 62 ವ್ಯಕ್ತಿಗಳು ದೌರ್ಜನ್ಯ ಎಸಗಿದ್ದಾರೆ. ಬಂಧನದಲ್ಲಿರುವ ಆರೋಪಿಗಳಲ್ಲಿ ಕೆಲವರು ಸ್ನೇಹಿತರಾಗಿದ್ದಾರೆ ಎಂದು ತಿಳಿಸಿದ್ದಾರೆ. ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ. ಶಂಕಿತರೊಂದಿಗೆ ಸಂವಹನ ನಡೆಸಲು ಆಕೆ ತನ್ನ ತಂದೆಯ ಮೊಬೈಲ್ ಫೋನ್ ಬಳಸಿದ್ದಾಳೆ. ಫೋನ್ ವಿವರಗಳು ಮತ್ತು ಡೈರಿಯಲ್ಲಿನ ಮಾಹಿತಿ ಪ್ರಕಾರ, 40 ಜನರನ್ನು ಗುರುತಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದು ಅಸಾಮಾನ್ಯ ಪ್ರಕರಣ : ಇದೊಂದು ಅಸಾಮಾನ್ಯ ಪ್ರಕರಣವಾಗಿದೆ. ಎಲ್ಲ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು. ಸೂಕ್ತ ತನಿಖೆ ನಡೆಸಿ ಮೂರು ದಿನಗಳಲ್ಲಿ ವರದಿ ನೀಡಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗವು (NCW) ಕೇರಳ ಪೊಲೀಸರಿಗೆ ಸೂಚನೆ ನೀಡಿದೆ. ಕೇರಳ ರಾಜ್ಯ ಮಹಿಳಾ ಆಯೋಗ (ಕೆಡಬ್ಲ್ಯೂಸಿ) ಸಹ ಪ್ರಕರಣ ದಾಖಲಿಸಿಕೊಂಡಿದೆ. ದೂರುದಾರೆಯನ್ನು ಸದ್ಯ ಮನಶಾಸ್ತ್ರಜ್ಞರ ಬಳಿ ಸಮಾಲೋಚನೆಗೆ ಕಳುಹಿಸಲಾಗಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ 60ಕ್ಕೂ ಹೆಚ್ಚು ಜನರಿಂದ ಲೈಂಗಿಕ ದೌರ್ಜನ್ಯ : 6 ಜನರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.