ಕರ್ನಾಟಕ

karnataka

ETV Bharat / entertainment

ಬಿಗ್ ಬಾಸ್ ಒಟಿಟಿ ಸೀಸನ್ 3 ಟೀಸರ್​ ರಿಲೀಸ್​: ಕಾರ್ಯಕ್ರಮ ನಡೆಸಿಕೊಡಲಿದ್ದಾರಾ ಅನಿಲ್​ ಕಪೂರ್? - Bigg Boss OTT - BIGG BOSS OTT

Hindi Bigg Boss: ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3ರ ಟೀಸರ್ ಹೊರಬಿದ್ದಿದೆ.

Anil Kapoor
ಅನಿಲ್​ ಕಪೂರ್ (ANI)

By ETV Bharat Karnataka Team

Published : May 23, 2024, 8:19 AM IST

ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3ರ ಟೀಸರ್ ರಿಲೀಸ್ ಆಗಿದೆ. ಜೂನ್‌ನಲ್ಲಿ ಪಾಪ್ಯುಲರ್​​ ಶೋ ಪ್ರಾರಂಭವಾಗಲಿದೆ. ಹಿಂದಿನ ಎಲ್ಲಾ ಸೀಸನ್‌ಗಳನ್ನೂ ಮರೆಸುವ ಸುಳಿವನ್ನು ಟೀಸರ್ ನೀಡಿದೆ.

ಒಟಿಟಿ ಸೀಸನ್ ಮೇ ತಿಂಗಳಲ್ಲಿ ಶುರುವಾಗಬಹುದೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದರೆ ಸಣ್ಣ ವಿಳಂಬ ಸೀಸನ್​ 3ರ ಮೇಲಿನ ನಿರೀಕ್ಷೆ, ಕುತೂಹಲ ಹೆಚ್ಚಿಸಿತ್ತು. ಇದೀಗ ಜಿಯೋಸಿನಿಮಾ ಟೀಸರ್​​ ಬಿಡುಗಡೆಗೊಳಿಸುವ ಮೂಲಕ ಬಿಗ್​​ ಬಾಸ್​ ಉತ್ಸಾಹಿಗಳ ಕಾಯುವಿಕೆ ಕೊನೆಗೊಳಿಸಿದೆ. ಕಳೆದ ತಿಂಗಳು, ಕಾರ್ಯಕ್ರಮದ ಮುಂಬರುವ ಸೀಸನ್​​ ಬಗ್ಗೆ ಸಣ್ಣ ಸುಳಿವು ನೀಡಿದ್ದು ಬಿಟ್ಟರೆ ಯಾವುದೇ ಅಪ್ಡೇಟ್ಸ್ ಇರಲಿಲ್ಲ.

ಆದ್ರೀಗ ಅನಾವರಣಗೊಂಡಿರುವ ಟೀಸರ್ ಪ್ರೇಕ್ಷಕರಿಗೆ ದೊಡ್ಡ​ ಅಪ್ಡೇಟ್ಸ್ ಒದಗಿಸಿದೆ. ಹಿಂದಿ ಬಿಗ್ ಬಾಸ್ ಒಟಿಟಿ 3 ಜೂನ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಪ್ರಾರಂಭಿಸಲಿದೆ ಎಂಬುದನ್ನು ಖಚಿತಪಡಿಸಿದೆ. "ಯೇ ಸೀಸನ್ ಹೋಗಾ ಖಾಸ್, ಹೋಗಾ ಜಕಾಸ್" ಎಂಬ ಡೈಲಾಗ್​​​​ನೊಂದಿಗೆ ಪ್ರೋಮೋ ಕೊನೆಗೊಂಡಿದೆ. ಅಲ್ಲದೇ ಹಿರಿಯ ನಟ ಅನಿಲ್ ಕಪೂರ್ ಹೆಸರು ಶೋದೊಂದಿಗೆ ಸೇರಿಕೊಂಡಿದೆ. ನಟ ಕಾರ್ಯಕ್ರಮವನ್ನು ಹೋಸ್ಟ್ ಮಾಡಬಹುದು ಎಂಬ ಊಹಾಪೋಹಗಳೆದ್ದಿವೆ. ಸೋಷಿಯಲ್​​ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ನಡೆಯುತ್ತಿದೆ.

ಟೀಸರ್ ವೀಕ್ಷಕರನ್ನು ಈ ಹಿಂದಿನ ಸೀಸನ್​​​ಗಳಿಗೆ ಕರೆದೊಯ್ದಿದೆ. ಹಿಂದಿನ ಸೀಸನ್‌ಗಳ ಕೆಲವು ಸ್ಮರಣೀಯ ಕ್ಷಣಗಳನ್ನು ಟೀಸರ್​ ಒಳಗೊಂಡಿದ್ದು, ಸೀಸನ್​ 3ರ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಬಿಗ್ ಬಾಸ್ ಒಟಿಟಿ 2ರ ಅಭಿಷೇಕ್ ಮಲ್ಹಾನ್ ಮತ್ತು ಅವಿನಾಶ್ ಸಚ್‌ದೇವ್ ನಡುವಿನ ಮಾತಿನ ಚಕಮಕಿಯ ದೃಶ್ಯವನ್ನು ಒಳಗೊಂಡಿದೆ. ಜೊತೆಗೆ ಫೇಮಸ್​ ಪರ್ಸನಾಲಿಟಿ ಶೆಹನಾಜ್ ಗಿಲ್​ ಅವರ "ಸಡ್ಡ ಕುತ್ತ ಕುತ್ತ" ಡೈಲಾಗ್​ ಸಹ ಇದೆ. ಈ ಸೀಸನ್ ಹಿಂದಿನ ಎಲ್ಲಾ ಸೀಸನ್‌ಗಳನ್ನು ಮೀರಿಸಲಿದೆ ಎಂದು ತಯಾರಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಅಭಿಮಾನಿಗಳಿಗೆ ನಿಜವಾಗಿಯೂ ಮರೆಯಲಾಗದ ಅನುಭವವಾಗಲಿದೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ:ನಟ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು; ಅಹಮದಾಬಾದ್‌ ಆಸ್ಪತ್ರೆಗೆ ದಾಖಲು, ಚಿಕಿತ್ಸೆ ಬಳಿಕ ಡಿಸ್ಚಾರ್ಜ್ - Shah Rukh Khan Health

ವರದಿಯ ಪ್ರಕಾರ, ಡೇಟ್ಸ್ ಕೊರತೆ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ಬಿಗ್ ಬಾಸ್ ಒಟಿಟಿ 3 ಅನ್ನು ಹೋಸ್ಟ್ ಮಾಡುತ್ತಿಲ್ಲ. ಬದಲಾಗಿ, ಇತರೆ ಬಾಲಿವುಡ್ ಸೆಲೆಬ್ರಿಟಿಗಳಾದ ಕರಣ್ ಜೋಹರ್, ಸಂಜಯ್ ದತ್ ಮತ್ತು ಅನಿಲ್ ಕಪೂರ್ ಅವರನ್ನು ಸಲ್ಮಾನ್​​​ ಅವರ ರೋಲ್​ಗೆ ಪರಿಗಣಿಸಲಾಗಿದೆ. ಟೀಸರ್‌ನಲ್ಲಿ ಅನಿಲ್ ಕಪೂರ್ ಅವರ ಸಿಗ್ನೇಚರ್ ಡೈಲಾಗ್ ಬಳಸಿರುವುದರಿಂದ ಅವರು ಈ ಸೀಸನ್‌ ಹೋಸ್ಟ್ ಮಾಡಲಿದ್ದಾರೆ ಎಂದು ಬಹುತೇಕರು ನಂಬಿದ್ದಾರೆ.

ಇದನ್ನೂ ಓದಿ:'ಪುಷ್ಪ 2' ಎರಡನೇ ಸಿಂಗಲ್​ ವಿಡಿಯೋಗೆ ಮುಹೂರ್ತ ಫಿಕ್ಸ್​; ಬ್ಲಾಸ್ಟ್​ ಸಾಂಗ್​ನಲ್ಲಿ ನಟಿ ರಶ್ಮಿಕಾ ಮಂದಣ್ಣ - Pushpa 2 Rashmika Mandanna Song

ABOUT THE AUTHOR

...view details