ಕರ್ನಾಟಕ

karnataka

ETV Bharat / entertainment

"ನಿನಗಾಗಿ" ಮತ್ತೆ ಬಂದ ದಿವ್ಯಾ ಉರುಡುಗ - Divya Uruduga ninagaagi serial - DIVYA URUDUGA NINAGAAGI SERIAL

ಬಿಗ್​​ಬಾಸ್​ ಖ್ಯಾತಿ, ಕಿರುತೆರೆ ನಟಿ ದಿವ್ಯಾ ಉರುಡುಗ ಹೊಸ ಧಾರಾವಾಹಿ ಮೂಲಕ ಮತ್ತೆ ನಿಮ್ಮ ಮನೆಗೆ ಬರಲಿದ್ದಾಳೆ.

ದಿವ್ಯಾ ಉರುಡುಗ, ನಾಯಕ ರಿತ್ವಿಕ್ ಮಠದ್​
ದಿವ್ಯಾ ಉರುಡುಗ, ನಾಯಕ ರಿತ್ವಿಕ್ ಮಠದ್​ (ETV Bharat)

By ETV Bharat Karnataka Team

Published : May 20, 2024, 2:39 PM IST

ಕನ್ನಡ ಕಿರುತೆರೆ ಲೋಕದಲ್ಲಿ ಕಲರ್ಸ್​​ ಕನ್ನಡ ವಾಹಿನಿ ವಿಭಿನ್ನ ಬಗೆಯ ಸೀರಿಯಲ್​ಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದೆ. ಇದೀಗ ಮತ್ತೊಂದು ಹೊಸ ಕಥೆ ಮೂಲಕ ಕಿರುತೆರೆ ಪ್ರೇಕ್ಷಕರ ಎದುರು ಬರ್ತಿದೆ.

"ನಿನಗಾಗಿ" ಧಾರಾವಾಹಿ ತಂಡ (ETV Bharat)

ಬೇರೆ ಬೇರೆ ವ್ಯಕ್ತಿತ್ವದ ಇಬ್ಬರು ವ್ಯಕ್ತಿಗಳು ಒಟ್ಟಿಗೆ ಸಾಗುವ ಮನ ಮಿಡಿಯ ಧಾರಾವಾಹಿ 'ನಿನನಾಗಿ'.ಇತ್ತೀಚೆಗೆ ಬೆಂಗಳೂರಿನ ಅಕ್ಷಯ್​​ ಸ್ಟುಡಿಯೋದಲ್ಲಿ ಸುದ್ದಿಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ನಿರ್ದೇಶಕ ಸಂಪಥ್ವಿ ಮಾತನಾಡಿ, "ತುಂಬಾ ಉತ್ಸಾಹಿತನಾಗಿದ್ದೇನೆ. ಏಕೆಂದರೆ ಹೆಮ್ಮೆಯಿಂದ ಹೇಳುತ್ತೇನೆ, ಒಂದೊಳ್ಳೆ ಪ್ರಾಜೆಕ್ಟ್ ತೆಗೆದುಕೊಂಡು ಬಂದಿದ್ದೇನೆ. ನಿನಗಾಗಿ ಶೋ ಬಂದ‌ ಮೇಲೆ ತುಂಬಾ ಸ್ಕೋರ್ ಮಾಡಲಿದೆ. ಏಕೆಂದರೆ ನನ್ನ ಬೆಂಬಲವಾಗಿ ನಿಂತಿರುವವರು ಜೈ ಮಾತಾ ಕಂಬೈನ್ಸ್​ನ ಅಶ್ವಿನಿ‌ ಮೇಡಂ. ಇಡೀ‌ ಕಲರ್ಸ್ ತಂಡ. ಪ್ರತಿಯೊಬ್ಬರಿಗೂ ಸಪೋರ್ಟಿವ್ ಇದೆ. ನಾಯಕ ಒಂದು ಪಡೆಯಾದರೆ, ನಾಯಕಿ ಕೂಡ ಒಂದು ಪಡೆ. ಇವರೆಲ್ಲಾ ಬಲ ತಂದುಕೊಡುತ್ತಿದ್ದಾರೆ. ಪ್ರೋಮೋ ನೋಡಿ ಇಷ್ಟಪಟ್ಟಿದ್ದೀರಾ. ನಾನು ಈ ಹಿಂದೆ ನಮ್ಮನೆ ಯುವರಾಣಿ ಸೀರಿಯಲ್ ಮಾಡಿದ್ದೇನೆ. ಈ ಬಾರಿ ಒಂದು ಹೊಸ ಕಥೆ ಹೇಳಲು ಬರುತ್ತಿದ್ದೇವೆ" ಎಂದರು.

"ನಿನಗಾಗಿ" ಧಾರಾವಾಹಿಯ ನಾಯಕ, ನಾಯಕಿ (ETV Bharat)

ನಾಯಕ ರಿತ್ವಿಕ್ ಮಠದ್​ ಮಾತನಾಡಿ, "ಶಿವರಾಮ್​ ಮಾಸ್‌ನಲ್ಲಿ‌ ನೋಡಿದ್ದೀರಾ. ಆದರೆ ಆ ಮಾಸ್ ಜೀವನ್‌ನಲ್ಲಿ ಇರುವುದಿಲ್ಲ. ತುಂಬಾ ಸರಳ ವ್ಯಕ್ತಿ.‌ ಒಬ್ಬ ಮಗುವಿನ ತಂದೆ. ದುಡ್ಡಿನ ಹಿಂದೆ ಹೋಗುವ ಮನುಷ್ಯ ಅಲ್ಲ. ಆ ರೀತಿ ಪಾತ್ರ ಮಾಡುತ್ತಿದ್ದೇನೆ" ಎಂದು ಮಾಹಿತಿ ನೀಡಿದರು.

ನಾಯಕಿ ದಿವ್ಯಾ ಉರುಡುಗ ಮಾತನಾಡಿ, "ನನಗೆ ಹೆಮ್ಮೆ ಅನಿಸುತ್ತದೆ. ಪ್ರತಿ ವಿಷಯದಲ್ಲಿಯೂ ಯೂನಿಕ್ ಆಗಿ ಮಾಡುತ್ತಿದ್ದೇವೆ. ರಚ್ಚು ಎಂಬ ಮುದ್ದಾದ ಹುಡುಗಿ ಪಾತ್ರ ಮಾಡುತ್ತಿದ್ದೇನೆ. ರಚ್ಚು ಎಂಬ ಸೂಪರ್ ಸ್ಟಾರ್ ಸಿಂಪಲ್ ಆಗಿ ಲೈಫ್ ಲೀಡ್ ಮಾಡುವ ಕನಸು ಕಾಣುತ್ತಾ ಇರುತ್ತಾಳೆ. ಅಮ್ಮನ ಮಾತೇ ವೇದ ವಾಕ್ಯ.‌ ಆ ರೀತಿ ಪಾತ್ರ ನನ್ನದು. ಅವಳ ವೈಯಕ್ತಿಕ ಜೀವನ, ಅವಳ ಆಸೆ ನೆರವೇರುತ್ತಾ? ಅನ್ನೋದನ್ನು ನೀವು ನೋಡ್ಬೇಕು.‌ ಒಂದೊಳ್ಳೆ ತಂಡದ ಜೊತೆ ಕೆಲಸ‌ ಮಾಡುತ್ತಿರುವ ಖುಷಿ ಇದೆ. ಸಿನಿಮಾ ರೀತಿಯೇ ಸೀರಿಯಲ್ ಶೂಟ್ ಮಾಡಲಾಗುತ್ತಿದೆ" ಎಂದರು.

ದಿವ್ಯಾ ಉರುಡುಗ ಇದೀಗ ಮತ್ತೆ ಕಿರುತೆರೆಗೆ ಕಮ್​ಬ್ಯಾಕ್ ಮಾಡಿದ್ದಾರೆ.‌ ರಚನಾ ಪಾತ್ರದಲ್ಲಿ ದಿವ್ಯಾ ನಟಿಸುತ್ತಿದ್ದಾರೆ. ನಿನಗಾಗಿ ಧಾರಾವಾಹಿಯ ಕಥೆ ಸೂಪರ್ ಸ್ಟಾರ್​ ರಚನಾ ಸುತ್ತ ಸುತ್ತಲಿದೆ. ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಆಗಿರುವ ರಚನಾಗೆ ಕೋಟ್ಯಂತರ ಅಭಿಮಾನಿಗಳ ಪ್ರೀತಿ, ಆಶೀರ್ವಾದ ಇದೆ. ಆದರೆ, ಅದ್ಯಾಕೋ ರಚನಾಗೆ ಅಮ್ಮನ ಪ್ರೀತಿ ಇಲ್ಲ. ಸೂಪರ್ ಸ್ಟಾರ್ ಆಗಿದ್ದರೂ, ಅಮ್ಮನ ಪ್ರೀತಿ ಕಾಣದ ನಟಿಯ ಕಥೆ ‘ನಿನಗಾಗಿ’.

ಈ ಧಾರಾವಾಹಿಯಲ್ಲಿ ಕಥಾನಾಯಕನಾಗಿ ರಿತ್ವಿಕ್ ಮಠದ್ ಅಭಿನಯಿಸುತ್ತಿದ್ದಾರೆ. ತಾರಾಗಣದಲ್ಲಿ ಪ್ರಿಯಾಂಕ ಕಾಮತ್, ಕಿಶನ್ ಬೆಳಗಲಿ, ವಿಜಯ್ ಕೌಂಡಿನ್ಯ, ಸಿರಿ ಸಿಂಚನ ಮುಂತಾದವರಿದ್ದಾರೆ. ನಮ್ಮನೆ ಯುವರಾಣಿಯನ್ನು ನಿರ್ದೇಶಿಸಿದ್ದ ಸಂಪೃಥ್ವಿ ನಿನಗಾಗಿಯ ಸೂತ್ರಧಾರಿ. ಭಾಗ್ಯಲಕ್ಷ್ಮಿ, ನಮ್ಮನೆ ಯುವರಾಣಿ, ಕನ್ನಡತಿಯಂಥ ಸುಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸಿದ ಜೈ ಮಾತಾ ಕಂಬೈನ್ಸ್​ ನಿನಗಾಗಿಯ ನಿರ್ಮಾಣದ ಹೊಣೆ ಹೊತ್ತಿದೆ. ಇದೇ 27ನೇ ತಾರೀಖಿನಿಂದ ಶುರುವಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ ನಿನಗಾಗಿ ಸೀರಿಯಲ್ ಪ್ರಸಾರವಾಗಲಿದೆ.

ಇದನ್ನೂ ಓದಿ:ಕಲ್ಕಿ 2898 AD ಚಿತ್ರದ 5ನೇ ಸೂಪರ್ ಸ್ಟಾರ್ 'ಬುಜ್ಜಿ' ರಿವೀಲ್​ಗೆ ಡೇಟ್ ಫಿಕ್ಸ್ - Kalki 2898 AD

ABOUT THE AUTHOR

...view details