ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್ ಸೀಸನ್ 11' ಹತ್ತನೇ ವಾರದ ಆಟ ಮುಂದುವರಿಸಿದೆ. ದಿನ ಕಳೆದಂತೆ ಆಟದ ಮಜಲುಗಳು ಬದಲಾಗುತ್ತಿವೆ. ಸ್ನೇಹಿತರು ಎದುರಾಳಿಗಳಾಗುತ್ತಿದ್ದಾರೆ. ವಾದ ವಿವಾದ, ತಿರುಗೇಟು, ಜಗಳ, ಮನಸ್ತಾಪಗಳು ಹೆಚ್ಚುತ್ತಿವೆ. ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಫಿನಾಲೆ ಹತ್ತಿರುವಾಗುತ್ತಿರುವ ಹಿನ್ನೆಲೆ ಆಟ ಮತ್ತಷ್ಟು ಗಂಭೀರವಾಗುತ್ತಿವೆ. ನಾಮಿನೇಷನ್ ಪ್ರಕ್ರಿಯೆ ಸ್ಪರ್ಧಿಗಳ ನಡುವಿನ ಮನಸ್ತಾಪವನ್ನು ಮತ್ತಷ್ಟು ಹೆಚ್ಚಿಸಲಿದೆ ಅನ್ನೋದು ಇಂದು ಬಿಡುಗಡೆ ಆಗಿರುವ ಪ್ರೋಮೋ ತಿಳಿಸಿದೆ.
ಈ ವಾಗ್ವಾದ ದೊಡ್ಡ ಜಗಳ ನಡೆಯುವ ಸೂಚನೆಯಾ?:'ಮಂಜು - ಐಶ್ವರ್ಯ ನಡುವೆ ನಾಮಿನೇಷನ್ ವಾರ್' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಬಿಗ್ ಬಾಸ್ ಪ್ರೋಮೋ ಅನಾವರಣಗೊಂಡಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸುವ ಪ್ರೇಕ್ಷಕರ ಕಾತರ ಹೆಚ್ಚಾಗಿದೆ. ಉಗ್ರಂ ಮಂಜು ಮತ್ತು ಐಶ್ವರ್ಯಾ ನಡುವೆ 'ಬೆನ್ನಿಗೆ ಚೂರಿ'ಯ ಬಗ್ಗೆ ವಾದ ವಿವಾದ ನಡೆದಿದೆ. ಈ ವಾಗ್ವಾದ ದೊಡ್ಡ ಜಗಳ ನಡೆಯುವ ಸೂಚನೆ ಕೊಟ್ಟಿದೆ.
ಕೊಂಚ ಭಿನ್ನ ಈ ಬಾರಿಯ ನಾಮಿನೇಷನ್- ಏನದು?
ಅತಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ 'ಬಿಗ್ ಬಾಸ್' ಕಾರ್ಯಕ್ರಮ ಗೆಲ್ಲಬೇಕೆಂಬ ಹಂಬಲ ಪ್ರತೀ ಸ್ಪರ್ಧಿಗಳಲ್ಲೂ ಇದೆ. ನಾನೇ ಗೆಲ್ಲಬೇಕೆಂಬ ಛಲ ಬಹುತೇಕರಲ್ಲಿ ಎದ್ದು ಕಾಣುತ್ತಿದೆ. ಅದರಂತೆ ನಾಮಿನೇಷನ್ ಪ್ರಕ್ರಿಯೆ ಕೂಡಾ ಸೀರಿಯಸ್ ಆಗುತ್ತಿದೆ. ಏಕೆಂದರೆ ಸ್ಪರ್ಧಿಗಳ ಸಂಖ್ಯೆ ಕಡಿಮೆ ಆದಂತೆ ಯಾರ ಹೆಸರು ತೆಗೆದುಕೊಳ್ಳಬೇಕು, ಅವರಿಗೆ ಏನು ಕಾರಣ ಒದಗಿಸೋದೆಂಬುದು ಪ್ರತೀ ಸ್ಪರ್ಧಿಗಳಿಗಿರುವ ಸವಾಲು. ಈ ವಾರದ ನಾಮಿನೇಷನ್ ಪ್ರಕ್ರಿಯೆ ಕೊಂಚ ವಿಭಿನ್ನವಾಗಿ ನಡೆದಿದೆ.
ಪ್ರೋಮೋ ನೋಡಿದ ವೀಕ್ಷಕರಲ್ಲಿ ಹೆಚ್ಚಿದ ಕುತೂಹಲ:ಈ ವಾರ ಬೆನ್ನಿಗೆ ಚೂರಿ ಹಾಕಿ ನಾಮಿನೇಷನ್ ಮಾಡಬೇಕಾಗಿದೆ. ಇದು ಬಿಗ್ ಬಾಸ್ ಕೊಟ್ಟಿರುವ ಆದೇಶ. ಇದಕ್ಕೆ ಸಂಬಂಧಿಸಿದಂತೆ ಕಳೆದ ವಾರ ಕ್ಯಾಪ್ಟನ್ ಅಗಿದ್ದ ಉಗ್ರಂ ಮಂಜು ಹಾಗೂ ಐಶ್ವರ್ಯಾ ನಡುವೆ ಬಿಗ್ ಟಾಕ್ ವಾರ್ ನಡೆದಿದೆ. ಇಬ್ಬರೂ ಪರಸ್ಪರ ಕೊಟ್ಟುಕೊಂಡಿರುವ ಕಾರಣಗಳು ಆಶ್ಚರ್ಯಕರವಾಗಿದೆ. ಇದು ಸಹ ಸ್ಪರ್ಧಿಗಳಿಗೂ ಶಾಕ್ ಆಗಿದೆ. ಪ್ರೋಮೋ ನೋಡಿದ ವೀಕ್ಷಕರು ಮುಂದೇನಾಗಬಹುದು ಎಂಬ ಕುತೂಹಲ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಮುಂಬೈನಲ್ಲಿ ಯಶ್: ರಾಕಿಭಾಯ್ನ ವಾಕಿಂಗ್ ಸ್ಟೈಲ್ಗೆ ಫ್ಯಾನ್ಸ್ ಫಿದಾ; ವಿಡಿಯೋ ನೋಡಿ
ಪ್ರತೀ ಸ್ಪರ್ಧಿಗಳ ಬೆನ್ನಿಗೆ ಒಂದು ಬೆಂಡಿನ ತುಂಡನ್ನು ಕಟ್ಟಲಾಗಿದೆ. ಅವರನ್ನು ನಾಮಿನೇಷನ್ ಮಾಡಲು ಇಚ್ಛಿಸುವವರು ಬೆನ್ನಿಗೆ (ಬೆಂಡಿಗೆ) ಚೂರಿ ಹಾಕಬೇಕು. ಅದರಂತೆ ಈ ಬಾರಿ ಉಗ್ರಂ ಮಂಜು ಬೆನ್ನಿಗೆ ಸಾಕಷ್ಟು ಚೂರಿ ಬಿದ್ದಿರುವುದನ್ನು ಕಾಣಬಹುದು. ಆದರೆ ಐಶ್ವರ್ಯಾ ಅವರ ಬೆನ್ನಿನಲ್ಲಿ ಒಂದೇ ಒಂದು ಚೂರಿ ಇದೆ. ಇವರಿಬ್ಬರ ಮಾತುಗಳು ಮನೆ ಮಂದಿಗೆ ಚುರುಕು ಮುಟ್ಟಿಸಿದೆ. ಈ ವಾರದ ಕ್ಯಾಪ್ಟನ್ ಆಗಿರುವ ಧನರಾಜ್ ಆಚಾರ್ ಅವರನ್ನು ಬಿಟ್ಟು ಉಳಿದವರು ಈ ನಾಮಿನೇಷನ್ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ.
ಇದನ್ನೂ ಓದಿ:'ಪುಷ್ಪ 3' ಕನ್ಫರ್ಮ್: ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಜೊತೆ ವಿಜಯ್ ದೇವರಕೊಂಡ?
ಮಂಜಣ್ಣ vs ಐಶ್ವರ್ಯ:ಮಂಜಣ್ಣ ಅವರ ಹೆಸರು ತೆಗೆದುಕೊಂಡ ಐಶ್ವರ್ಯಾ, ಮಂಜಣ್ಣ ಅವರು ಮಹಾರಾಜ ಆಗಿದ್ದ ಸಂದರ್ಭ ಸದಸ್ಯರ ಮೇಲೆ ಫಿಸಿಕಲ್ ಆಗಿ ಅಟ್ಯಾಕ್ ಮಾಡಕ್ಕೆ ಹೋಗ್ತಾರೆ ಎಂದು ತಿಳಿಸುತ್ತಿದ್ದಂತೆ ಮಂಜು ಅಸಮಾಧಾನಗೊಂಡಿದ್ದಾರೆ. ನಮ್ಮ ಸಿಂಹಾಸನ ಕಾಪಾಡಿಕೊಳ್ಳೋದು ತಪ್ಪಾ ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಬಂದ್ಬಿಟ್ಟು ಬರೀ ಕತ್ತಿ ಚುಚ್ಚೋದಲ್ಲ ಹಿಂದಿಂದೆ ಎಂದು ತಿಳಿಸಿದ್ದಾರೆ. ಮಂಜಣ್ಣ ಚುಚ್ಚೋ ತರ ಮಾತಾಡ್ತಾರೆ ಅದಕ್ಕೆ ನಾನ್ ಚುಚ್ಚಿದ್ದೀನಿ ಇವತ್ತು ಎಂದು ಐಶ್ವರ್ಯಾ ತಿಳಿಸಿದ್ದಾರೆ. ಮಾತಾಡೋ ಮಾತುಗಳಿಂದ ನಿಮಗೇನೆ ನಾಚಿಕೆ ಆಗಬೇಕು ಎಂದು ಮಂಜು ತಿಳಿಸುತ್ತಿದ್ದಂತೆ ಅಯ್ಯೋ ನಾಚಿಕೆ ಆಗುತ್ತಿದೆ ಎಂದು ವ್ಯಂಗ್ಯವಾಗಿ ಐಶ್ವರ್ಯಾ ತಿರುಗೇಟು ಕೊಟ್ಟಿದ್ದಾರೆ. ಮಾನಸಿಕವಾಗಿ ಕುಗ್ಗಿಸೋಕೆ ನೋಡಿದ್ರೆ, ಕುಗ್ಗೋ ಅಂಥ ಮಗಳೇ ಅಲ್ಲಾ ನಾನು. ಕುಗ್ಗಿಸಿ, ಅದೇನೇನು ಮಾತಾಡ್ತೀರೋ ಮಾತಾಡಿ ನಾನು ನೋಡೇ ಬಿಡ್ತೀನಿ ಎಂದು ತಿಳಿಸಿದ್ದಾರೆ.