'ಕೆಡಿ' (KD). ಇದು ವಿಭಿನ್ನ ಶೀರ್ಷಿಕೆಯಿಂದಾಗಿ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಸದ್ದು ಮಾಡುತ್ತಿರುವ ಸಿನಿಮಾ. ಈ ಸಾಲಿನ ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ಚಿತ್ರವೂ ಹೌದು. ಸ್ಯಾಂಡಲ್ವುಡ್ನ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ನಿರ್ದೇಶಕ ಪ್ರೇಮ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರದ ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಕಾತರರಾಗಿದ್ದರು. ಕೊನೆಗೂ ಚಿತ್ರತಂಡ ಪೋಸ್ಟ್ ಶೇರ್ ಮಾಡಿ, ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದೆ.
ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟ್: ಬಹುನಿರೀಕ್ಷಿತ ಸಿನಿಮಾದ ಹಿಂದಿರುವ ದಕ್ಷಿಣ ಚಿತ್ರರಂಗದ ಪ್ರಸಿದ್ಧ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ನಿರ್ದೇಶಕ ಪ್ರೇಮ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿದ್ದಾರೆ. ಇದೇ ಜುಲೈ 29ರ ಬೆಳಗ್ಗೆ ಚಿತ್ರಕ್ಕೆ ಸಂಬಂಧಿಸಿದ ಗ್ಲಿಂಪ್ಸ್ ಅನಾವರಣಗೊಳಿಸುವುದಾಗಿ ತಿಳಿಸಿದ್ದು, ಕುತೂಹಲ ಹೆಚ್ಚಿಸಿದೆ.
ಪೋಸ್ಟ್ನ ಕ್ಯಾಪ್ಷನ್ನಲ್ಲಿ ದಿ ಅಲ್ಟಿಮೇಟ್ ಶೋಡೌನ್ ಅವೈಟ್ಸ್. ಲಾರ್ಡ್ ಆಫ್ ಡೆವಿಲ್ಸ್ ಡೆಮಾಕ್ರಸಿ, 'ಧಕ್ ದೇವ' ಜುಲೈ 29ರಂದು ಬೆಳಗ್ಗೆ 10 ಗಂಟೆ 5 ನಿಮಿಷಕ್ಕೆ ಕೆಡಿಯ ವಿಂಟೇಜ್ ಯುದ್ಧಭೂಮಿಗೆ ದಾರಿ ಮಾಡಿಕೊಳ್ಳಲಿದ್ದಾನೆ. ಇದೇ 2024ರಲ್ಲಿ ವಿಶ್ವಾದ್ಯಂತ ಚಿತ್ರಮಂದಿರಗಳನ್ನು ವಶಪಡಿಸಿಕೊಳ್ಳಲು ಕೆಡಿ ರೆಡಿಯಾಗಿದ್ದಾನೆ. ಲವ್ ಯೂ ಆಲ್ ಎಂದು ಬರೆದುಕೊಂಡಿದ್ದಾರೆ.
ಸೋಮವಾರ ಸಿಗಲಿದೆ ಸಿನಿಮಾದ ಅಪ್ಡೇಟ್ಸ್: ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಕಡಿಮೆಯಾಗಿದೆ. ಸೂಪರ್ ಸ್ಟಾರ್ಗಳ ಸಿನಿಮಾಗಳು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸಂಕಷ್ಟದಲ್ಲಿವೆ. ಸ್ಯಾಂಡಲ್ವುಡ್ ಅಭಿವೃದ್ಧಿಯಾಗಬೇಕಿದೆ ಎಂಬ ಮಾತು ಕೇಳಿಬರುತ್ತಿರುವ ಈ ಸಂದರ್ಭ 'ಕೆಡಿ' ಚಿತ್ರತಂಡ ಪ್ರೇಕ್ಷಕರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಸಿನಿಮಾದ ಅಪ್ಡೇಟ್ಸ್ಗಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾತರರಾಗಿದ್ದರು. ಫೈನಲಿ ಇಂದು ಸಿನಿಮಾ ಪ್ರೊಡಕ್ಷನ್ ಬ್ಯಾನರ್ ಪೋಸ್ಟ್ ಶೇರ್ ಮಾಡುವ ಮೂಲಕ ಸಿನಿಪ್ರಿಯ ಮೊಗದಲ್ಲಿ ನಗು ತರಿಸಿದೆ. ಸೋಮವಾರ ಬೆಳಗ್ಗೆ 'ಕೆಡಿ' ಚಿತ್ರದ ಅಪ್ಡೇಟ್ ನಿಮ್ಮ ಮುಂದೆ ಬರಲಿದೆ.
ಇದನ್ನೂ ಓದಿ:ಲಂಡನ್‌ನಲ್ಲಿ ಅಂಬಾನಿ ಗ್ರ್ಯಾಂಡ್ ಪ್ರೋಗ್ರಾಮ್: ಸೆಪ್ಟೆಂಬರ್ವರೆಗೆ ಸೆವೆನ್ ಸ್ಟಾರ್ ಹೋಟೆಲ್ ರಿಸರ್ವೇಶನ್ - Anant Radhika
ಇನ್ನೂ ಕೆ.ವಿ.ಎನ್ ಪ್ರೊಡಕ್ಷನ್ ಸಂಸ್ಥೆಯಡಿ ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಧ್ರುವ ಸರ್ಜಾ ಹಾಗೂ ಪ್ರೇಮ್ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಕೆಡಿ'ಗೆ ಅರ್ಜುನ್ ಜನ್ಯ ಸಂಗೀತವಿದೆ. ಕನ್ನಡ ಅಲ್ಲದೇ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆ ಸೇರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿದ್ದು, ಭಾರತೀಯ ಚಿತ್ರರಂಗದ ಬಹುಬೇಡಿಕೆ ತಾರೆಯರು ಬಣ್ಣ ಹಚ್ಚಿದ್ದಾರೆ. ಮೂಲತಃ ಮಂಗಳೂರಿನವರಾದ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ಈ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದಾರೆ. ಬಾಲಿವುಡ್ನ ಖಳನಾಯಕ ಸಂಜಯ್ ದತ್ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ, ಮತ್ತೋರ್ವ ಬಾಲಿವುಡ್ ಬ್ಯೂಟಿ, ಕೆನಡಿಯನ್ ಸುಂದರಿ ನೋರಾ ಫತೇಹಿ ಚಿತ್ರದ ಭರ್ಜರಿ ಹಾಡೊಂದಕ್ಕೆ ಸೊಂಟ ಬಳುಕಿಸಿದ್ದಾರೆ ಎಂದು ನಂಬಲಾಗಿದೆ.
ಇದನ್ನೂ ಓದಿ:ಬುಡಕಟ್ಟು ಜನಾಂಗದವರೊಂದಿಗೆ ಕುಣಿದು ಸಂಭ್ರಮಿಸಿದ ದುನಿಯಾ ವಿಜಯ್: ವಿಡಿಯೋ - Bheema Promotion