ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11ರಲ್ಲಿ ದೊಡ್ಡ ಗಲಾಟೆ ನಡೆದೇ ಬಿಟ್ಟಿದೆ. ಭವ್ಯಾ ಅವರ ವಿಷಯದಿಂದ ಆರಂಭವಾಯಿತಾದರೂ ಫೈಟ್ ಆಗಿದ್ದು ಮಾತ್ರ ಚೈತ್ರಾ ಕುಂದಾಪುರ ಹಾಗೂ ರಜತ್ ಕಿಶನ್ ನಡುವೆ. ಈ ಬಾರಿ ಗಲಾಟೆಯ ತೀವ್ರತೆ ಕೊಂಚ ಹೆಚ್ಚೇ ಎನ್ನಬಹುದು. ಇನ್ನೇನು ಕೈ ಕೈ ಮಿಲಾಯಿಸಿಕೊಳ್ತಾರೆ ಅನ್ನುವಷ್ಟರ ಮಟ್ಟಿಗೆ ಹೋಗಿದೆ. ಪರಿಣಾಮ ಸಂಪೂರ್ಣ ಸಂಚಿಕೆಯಲ್ಲಿ ಸ್ಪಷ್ಟವಾಗಲಿದೆ.
ದೊಡ್ಡ ಗಲಾಟೆಯ ಒಂದು ಚಿಕ್ಕ ನೋಟ ಬಿಗ್ ಬಾಸ್ ಅನಾವರಣಗೊಳಿಸಿರುವ ಪ್ರೋಮೋದಲ್ಲಿ ಕಾಣಬಹುದಾಗಿದೆ. 'ಒಂದು ಸತ್ಯ ಮನೆಯನ್ನು ರಣರಂಗವಾಗಿಸ್ತಾ? ವಾರದ ಕಥೆ ಕಿಚ್ಚನ ಜೊತೆ, ಇಂದು ರಾತ್ರಿ 9ಕ್ಕೆ ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಕಾಣಬಹುದಾಗಿದೆ. ಇವೆಲ್ಲವೂ ನಡೆದಿದ್ದು ಅಭಿನಯ ಚಕ್ರವರ್ತಿ ಸುದೀಪ್ ಎದುರೇ ಅನ್ನೋದು ಮಾತ್ರ ಶಾಕಿಂಗ್. ಭವ್ಯಾ ಕ್ಯಾಪ್ಟನ್ಸಿ ವಿಷಯವನ್ನು ಪ್ರಸ್ತಾಪಿಸಿ, ಬ್ರೇಕ್ ಕೊಟ್ಟ ಬಳಿಕ ಇಬ್ಬರೂ ಜಗಳಕ್ಕಿಳಿದಿದ್ದಾರೆ. ಸನ್ನಿವೇಶವನ್ನು ಸುದೀಪ್ ಕ್ಯಾಮರಾ ಮೂಲಕ ಗಮನಿಸಿದ್ದಾರೆ. ಹಾಗಾಗಿ ಕಿಚ್ಚ ಯಾವ ಕ್ರಮ ಕೈಗೊಳ್ಳಲಿದ್ದಾರೆ ಅನ್ನೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.
ಪ್ರೋಮೋ ಆರಂಭದಲ್ಲಿ, ಕ್ಯಾಪ್ಟನ್ಸಿಗೆ ಬರೋಣ, ಅಭಿನಂದನೆಗಳು ಭವ್ಯಾ ಅವರೇ ಎಂದು ಸುದೀಪ್ ವಿಶ್ ಮಾಡಿದ್ದಾರೆ. ಸಂಪೂರ್ಣ ವಿಷಯವನ್ನರಿತಿದ್ದ ಸುದೀಪ್ ಅವರ ಮೊಗದಲ್ಲಿದ್ದ ನಗು ಎಂದಿಗಿಂತ ಭಿನ್ನವಾಗಿತ್ತು. ನಂತರ, ಎಲ್ಲಿಂದ ಬಿದ್ದಿತ್ತು ಬಾಲ್ ಭವ್ಯಾ ಅವರೇ ಎಂದು ಸುದೀಪ್ ಪ್ರಶ್ನಿಸಿದ್ದಾರೆ. ನಂತರ, ಅದು 9ರಿಂದ ಬಿದ್ದಿದ್ದಲ್ಲ ಅನ್ನೋದು ರಜತ್ ಅವರಿಗೆ ಗೊತ್ತಿದೆ ಎಂದು ಕಿಚ್ಚ ತಿಳಿಸಿದ್ದಾರೆ. ಭವ್ಯಾ ಸುಮ್ಮನೆ ಇರಿ ಎಂದು ತಿಳಿಸಿದ್ರು ಅಂತಾ ಎಲ್ಲರ ಸಮ್ಮುಖದಲ್ಲಿ ರಜತ್ ಸತ್ಯ ಒಪ್ಪಿಕೊಂಡಿದ್ದಾರೆ.