ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ 'ಬಘೀರ' ಅಕ್ಟೋಬರ್ 31ರಂದು ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಸ್ಯಾಂಡಲ್ವುಡ್ನ ಬಹುಬೇಡಿಕೆ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚೆಂದುಳ್ಳಿ ಚೆಲುವೆ ರುಕ್ಮಿಣಿ ವಸಂತ್ ತೆರೆಕಂಡ ಚಿತ್ರ ಸಿನಿಪ್ರಿಯರಿಂದ ಉತ್ತಮ ಪ್ರತಿಕ್ರಿಯೆ ಸ್ವೀಕರಿಸಿದ್ದಲ್ಲದೇ, ಬಾಕ್ಸ್ ಆಫೀಸ್ನಲ್ಲೂ ಉತ್ತಮ ಗಳಿಕೆ ಮಾಡಿತ್ತು. ಸದ್ಯ ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲೂ ಟ್ರೆಂಡಿಂಗ್‌ನಲ್ಲಿದೆ.
ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಸಿನಿಮಾ ಒಟಿಟಿಯಲ್ಲೂ ಭಾರಿ ಯಶಸ್ಸು ಕಂಡಿದೆ. 300 ದಿನಗಳಿಗಿಂತಲೂ ಹೆಚ್ಚು ಸಮಯದಿಂದ ಟ್ರೆಂಡ್‌ನಲ್ಲಿದೆ, ಇನ್ನೂ ಟ್ರೆಂಡಿಂಗ್‌ನಲ್ಲಿದೆ. ಇದೀಗ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಬಘೀರ ಹಾಟ್‌ಸ್ಟಾರ್‌ನಲ್ಲಿ #1 ಸ್ಥಾನವನ್ನು ಪಡೆದುಕೊಂಡಿದೆ. ಡಾ.ಸೂರಿ ನಿರ್ದೇಶನ ಈ ಸಿನಿಮಾ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶ ಕಂಡಿದೆ. ಪವರ್ಫುಲ್ ವಿಎಫ್ಎಕ್ಸ್, ಆಸಕ್ತಿದಾಯಕ ಕಥೆ ಮತ್ತು ಉತ್ತಮ ಹಿನ್ನೆಲೆ ಸಂಗೀತದೊಂದಿಗೆ ಆ್ಯಕ್ಷನ್-ಪ್ಯಾಕ್ಡ್ ಮನರಂಜನೆಯನ್ನು ಒದಗಿಸುತ್ತಿದೆ. ಇದೀಗ ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲೂ ಟ್ರೆಂಡಿಂಗ್ನಲ್ಲಿದ್ದು ಸಖತ್ ಸದ್ದು ಮಾಡುತ್ತಿದೆ.
ಹೌದು, ಡಿಸ್ನಿ ಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಟಾಪ್ 10 ಹಿಂದಿ ಸಿನಿಮಾಗಳ ಪೈಕಿ 'ಬಘೀರ' #1 ಟ್ರೆಂಡಿಂಗ್‌ನಲ್ಲಿದೆ. ಒಟಿಟಿ ಪ್ಲ್ಯಾಟ್ಫಾರ್ಮ್ನಲ್ಲಿ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಕನ್ನಡ ಸಿನಿಮಾದ ಹಿಂದಿ ಆವೃತ್ತಿಯನ್ನು ಆನಂದಿಸುತ್ತಿದ್ದಾರೆ. ಈ ವಿಚಾರವನ್ನು ಚಿತ್ರದ ಹಿಂದಿರುವ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.