ವಿಭಿನ್ನ ಆಲೋಚನೆಗಳಿಂದಾಗಿ ಕರುನಾಡಿನಲ್ಲಿ ಗುರುತಿಸಿಕೊಂಡಿರುವ ಸ್ಟಾರ್ ನಟ ಎಂದರೆ ಅದು ರಿಯಲ್ ಸ್ಟಾರ್ ಉಪೇಂದ್ರ. ಅಮೋಘ ಅಭಿನಯಕ್ಕೆ ಮಾತ್ರವಲ್ಲ, ವಿಭಿನ್ನ ಶೈಲಿಯ ಕಥೆ ರಚಿಸುವಲ್ಲಿ ಅದನ್ನು ಡಿಫ್ರೆಂಟ್ ಡೈರೆಕ್ಷನ್ ಸ್ಟೈಲ್ನಿಂದ ಪ್ರೇಕ್ಷಕರಿಗೆ ತಲುಪಿಸುವಲ್ಲಿಯೂ ಹೆಸರು ಮಾಡಿದ್ದಾರೆ. ಸದ್ಯ ತಮ್ಮ ಬಹುನಿರೀಕ್ಷಿತ ಚಿತ್ರ 'ಯುಐ' ಯಶಸ್ಸಿನಲೆಯಲ್ಲಿ ತೇಲುತ್ತಿದ್ದಾರೆ.
'ಯುಐ' ಬಾಕ್ಸ್ ಆಫೀಸ್ ಕಲೆಕ್ಷನ್: ಡಿಸೆಂಬರ್ 20ರ ಶುಕ್ರವಾರದಂದು ತೆರೆಕಂಡಿರುವ ರಿಯಲ್ ಸ್ಟಾರ್ ಉಪ್ಪಿ ನಿರ್ದೇಶನದ ಸಿನಿಮಾ 6.95 ಕೋಟಿ ರೂಪಾಯಿಯೊಂದಿಗೆ ಬಾಕ್ಸ್ ಆಫೀಸ್ ಪ್ರಯಾಣ ಪ್ರಾರಂಭಿಸಿತು. ಕಳೆದ 10 ದಿನಗಳಲ್ಲಿ 29.45 ಕೋಟಿ ರೂಪಾಯಿ ಕಲೆಕ್ಷನ್ ಮಾಡುವಲ್ಲಿ ಯಶ ಕಂಡಿದೆ.
ದಿನ | ಇಂಡಿಯಾ ನೆಟ್ ಕಲೆಕ್ಷನ್ |
ಮೊದಲ ದಿನ (ಶುಕ್ರವಾರ) | 6.95 ಕೋಟಿ ರೂಪಾಯಿ. |
ಎರಡನೇ ದಿನ (ಶನಿವಾರ) | 5.6 ಕೋಟಿ ರೂಪಾಯಿ. |
ಮೂರನೇ ದಿನ (ಭಾನುವಾರ) | 5.95 ಕೋಟಿ ರೂಪಾಯಿ. |
ನಾಲ್ಕನೇ ದಿನ (ಸೋಮವಾರ) | 2.3 ಕೋಟಿ ರೂಪಾಯಿ. |
ಐದನೇ ದಿನ (ಮಂಗಳವಾರ) | 2.1 ಕೋಟಿ ರೂಪಾಯಿ. |
ಆರನೇ ದಿನ (ಬುಧವಾರ) | 2.35 ಕೋಟಿ ರೂಪಾಯಿ. |
ಏಳನೇ ದಿನ (ಗುರುವಾರ) | 1.05 ಕೋಟಿ ರೂಪಾಯಿ. |
ಎಂಟನೇ ದಿನ (ಶುಕ್ರವಾರ) | 0.95 ಕೋಟಿ ರೂಪಾಯಿ. |
ಒಂಭತ್ತನೇ ದಿನ (ಶನಿವಾರ) | 1.05 ಕೋಟಿ ರೂಪಾಯಿ. |
ಹತ್ತನೇ ದಿನ (ಭಾನುವಾರ) | 1.15 (ಆರಂಭಿಕ ಅಂದಾಜು) |
ಒಟ್ಟು | 29.45 ಕೋಟಿ ರೂಪಾಯಿ |
(ಡಾಟಾ ಮೂಲ: ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್).
ಬಹುನಿರೀಕ್ಷಿತ ಚಿತ್ರಗಳಾದ ಪುಷ್ಪ 2: ದಿ ರೂಲ್, ಮುಫಾಸಾ: ದಿ ಲಯನ್ ಕಿಂಗ್ ಮತ್ತು ವಿದುತಲೈ 2ನಂತಹ ಬಿಗ್ ಪ್ರಾಜೆಕ್ಟ್ಗಳ ಸ್ಪರ್ಧೆಯ ಹೊರತಾಗಿಯೂ, ಯುಐ ಬಾಕ್ಸ್ ಆಫೀಸ್ನಲ್ಲಿ ಅತ್ಯುತ್ತಮ ಪ್ರಯಾಣ ಪ್ರಾರಂಭಿಸಿತು. ಸ್ಯಾಂಡಲ್ವುಡ್ನ ಮತ್ತೋರ್ವ ಸೂಪರ್ ಸ್ಟಾರ್ ಸುದೀಪ್ ಅವರ ಮ್ಯಾಕ್ಸ್ ಕೂಡಾ ಕಳೆದ ಶುಕ್ರವಾರ ತೆರೆಕಂಡಿದೆ.
ಇದನ್ನೂ ಓದಿ: ವಾರಾಂತ್ಯದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ 'ಮ್ಯಾಕ್ಸ್': ಯಶಸ್ಸಿನ ಅಲೆಯಲ್ಲಿ ಸುದೀಪ್ ತಂಡ; ಹೀಗಿದೆ ಗಳಿಕೆ ಮಾಹಿತಿ!
ಬಾಕ್ಸ್ ಅಫೀಸ್ ಫೈಟ್ ಹೊರತಾಗಿಯೂ, ಎರಡೂ ಕನ್ನಡ ಚಿತ್ರಗಳ ಗಳಿಕೆ ಉತ್ತಮವಾಗಿ ಸಾಗಿದೆ. ಮ್ಯಾಕ್ಸ್ ತೆರೆಕಂಡ ಬಳಿಕ ಯುಐ ಗಳಿಕೆ ಇಳಿಕೆ ಕಾಣಬಹುದು ಎಂದು ಹೆಚ್ಚಿನವರು ಊಹಿಸಿದ್ದರು. ಆದ್ರೆ ಉಪ್ಪಿ ಸಿನಿಮಾ ಪ್ರೇಕ್ಷಕರನ್ನು ತಲುಪುವಲ್ಲಿ ಯಶ ಕಂಡಿದೆ. ತಮ್ಮ ಸಿಗ್ನೇಚರ್ ಸ್ಟೈಲ್ನೊಂದಿಗೆ ಬಂದ ರಿಯಲ್ ಸ್ಟಾರ್ ಸಿನಿಮಾ ಕಳೆದ 10 ದಿನಗಳಲ್ಲಿ 29.45 ಕೋಟಿ ರೂಪಾಯಿಯ ವ್ಯವಹಾರ ನಡೆಸಿದೆ.
ಅಭಿನಯ ಚಕ್ರವರ್ತಿಯ ಮ್ಯಾಕ್ಸ್ ಕಲೆಕ್ಷನ್ ಹೇಗಿದೆ?
ದಿನ | ಕಲೆಕ್ಷನ್ |
ತೆರೆಕಂಡ ದಿನ (ಬುಧವಾರ) | 8.7 ಕೋಟಿ ರೂಪಾಯಿ. |
ಎರಡನೇ ದಿನ (ಗುರುವಾರ) | 3.85 ಕೋಟಿ ರೂಪಾಯಿ. |
ಮೂರನೇ ದಿನ (ಶುಕ್ರವಾರ) | 4.7 ಕೋಟಿ ರೂಪಾಯಿ. |
ನಾಲ್ಕನೇ ದಿನ (ಶನಿವಾರ) | 4.75 ಕೋಟಿ ರೂಪಾಯಿ. |
ಐದನೇ ದಿನ (ಭಾನುವಾರ) | 5.86 ಕೋಟಿ ರೂಪಾಯಿ (ಆರಂಭಿಕ ಅಂದಾಜು). |
ಒಟ್ಟು | 27.86 ಕೋಟಿ ರೂಪಾಯಿ. |
ಇದನ್ನೂ ಓದಿ: 'ಶೀಘ್ರದಲ್ಲೇ ಮ್ಯಾಕ್ಸ್ ವೀಕ್ಷಿಸಲಿದ್ದೇನೆ': ಮ್ಯಾಕ್ಸ್ ಯಶಸ್ಸಿನ ತೂಕ ಹೆಚ್ಚಿಸಿತು ರಾಜಮೌಳಿ ಗುಣಗಾನ, ಕಿಚ್ಚನಿಂದ ಧನ್ಯವಾದ
ಮತ್ತೊಂದೆಡೆ, ಅಭಿನಯ ಚಕ್ರವರ್ತಿ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ ಮ್ಯಾಕ್ಸ್ ಕೂಡಾ ಸಖತ್ ಸದ್ದು ಮಾಡುತ್ತಿದೆ. ಡಿಸೆಂಬರ್ 25ರ ಕ್ರಿಸ್ಮಸ್ ಸಂದರ್ಭ ತೆರೆಕಂಡ ಚಿತ್ರ ಕಳೆದ ಐದು ದಿನಗಳಲ್ಲಿ ಬಾಕ್ಸ್ ಅಫೀಸ್ನಲ್ಲಿ 27.86 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.