ಕರ್ನಾಟಕ

karnataka

ETV Bharat / entertainment

ಪ್ರೇಕ್ಷಕರ ಮನಗೆಲ್ಲುತ್ತಿದೆ ಕನ್ನಡದ 'ಬಡೇ ಮಿಯಾ ಛೋಟೆ ಮಿಯಾ' ಹಾಡು; ಸಿನಿಮಾ ವೀಕ್ಷಿಸೋ ಕಾತರ - ಟೈಗರ್ ಶ್ರಾಫ್

'ಬಡೇ ಮಿಯಾ ಛೋಟೆ ಮಿಯಾ' ಚಿತ್ರದ ಪ್ರಚಾರವನ್ನು ಚಿತ್ರತಂಡ ಪ್ರಾರಂಭಿಸಿದೆ. ಅದರಲ್ಲೂ ಕನ್ನಡದ ಬಡೇ ವಿಯಾ ಛೋಟೆ ಮಿಯಾ ಹಾಡು ಪ್ರೇಕ್ಷಕರ ಮನ ಗೆಲ್ಲುತ್ತಿದೆ.

Bade Miyan Chote Miyan
ಬಡೇ ಮಿಯಾ ಛೋಟೆ ಮಿಯಾ

By ETV Bharat Karnataka Team

Published : Feb 22, 2024, 10:02 AM IST

ಬಾಲಿವುಡ್‌ನ ಪವರ್ ಪ್ಯಾಕ್ಡ್ ಜೋಡಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಮುಖ್ಯಭೂಮಿಕೆಯ 'ಬಡೇ ಮಿಯಾ ಛೋಟೆ ಮಿಯಾ' ಸಿನಿಮಾದ ಟೈಟಲ್ ಟ್ರ್ಯಾಕ್​​ ಇತ್ತೀಚೆಗೆ ತೆರೆಕಂಡು ಪ್ರೇಕ್ಷಕರ ಮನ ಗೆಲ್ಲುತ್ತಿದೆ. ಬಾಸ್ಕೋ ಹಾಗೂ ಸೀಸರ್ ನೃತ್ಯ ಸಂಯೋಜನೆಯಲ್ಲಿ ಮೂಡಿ ಬಂದಿರುವ ಹಾಡಿಗೆ ಅಕ್ಕಿ-ಶ್ರಾಫ್​ ಭರ್ಜರಿ ಹೆಜ್ಜೆ ಹಾಕಿದ್ದಾರೆ.

ಅನಿರುದ್ಧ್ ರವಿಚಂದರ್ ಮತ್ತು ವಿಶಾಲ್ ಮಿಶ್ರಾ ಧ್ವನಿಯಾಗಿರುವ 'ಬಡೇ ಮಿಯಾ ಛೋಟೆ ಮಿಯಾ' ಟೈಟಲ್ ಟ್ರ್ಯಾಕ್​ಗೆ ವಿಶಾಲ್ ಮಿಶ್ರಾ ಟ್ಯೂನ್ ಹಾಕಿದ್ದಾರೆ. ಡೆಹ್ರಾಡೂನ್​​ನಲ್ಲಿ ಚಿತ್ರೀಕರಿಸಲಾಗಿರುವ ಹಾಡಿಗೆ 100ಕ್ಕೂ ಹೆಚ್ಚು ಡ್ಯಾನ್ಸರ್ಸ್ ಕುಣಿದು ಕುಪ್ಪಳಿಸಿದ್ದಾರೆ. ಪಂಚಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದ್ದು, ಕನ್ನಡದಲ್ಲಿಯೂ ಹಾಡು ಮೂಡಿಬಂದಿದೆ. ಸಂತೋಷ್ ವಿಶ್ವರತ್ನ ಸಾಹಿತ್ಯ ಬರೆದಿದ್ದು, ಅನಿರುದ್ಧ್ ಶಾಸ್ತ್ರಿ, ಅಭಿಷೇಕ್ ಎಂ ಆರ್ ಹಾಗೂ ಋಷಿಕೇಶ ಬಿ ಆರ್ ದನಿಯಾಗಿದ್ದಾರೆ.

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಾಯಕರಾಗಿ ನಟಿಸಿದ್ದು, ಖಳನಾಯಕನಾಗಿ ಪೃಥ್ವಿರಾಜ್ ಸುಕುಮಾರನ್ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ನಟಿಮಣಿಯರಾದ ಸೋನಾಕ್ಷಿ ಸಿನ್ಹಾ, ಮಾನುಷಿ ಛಿಲ್ಲರ್, ಅಲಯಾ ಎಫ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಮುಂಬೈ, ಲಂಡನ್, ಅಬುಧಾಬಿ, ಸ್ಕಾಟ್ಲೆಂಡ್ ಮತ್ತು ಜೋರ್ಡಾನ್ ಸ್ಥಳಗಳಲ್ಲಿ ಸಿನಿಮಾವನ್ನು ಚಿತ್ರೀಕರಿಸಲಾಗಿದೆ. ಹಾಲಿವುಡ್ ರೇಂಜ್​ಗೆ ಬಿಗ್​ ಬಜೆಟ್​ನಲ್ಲಿ ಬಡೇ ಮಿಯಾ ಛೋಟೆ ಮಿಯಾ ಚಿತ್ರವನ್ನು ನಿರ್ಮಿಸಲಾಗಿದೆ. ಅಲಿ ಅಬ್ಬಾಸ್ ಜಾಫರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, ವಶು ಭಗ್ನಾನಿ, ದೀಪಿಕ್ಷಾ ದೇಶ್​​ಮುಖ್, ಜಾಕಿ ಭಗ್ನಾನಿ, ಹಿಮಾಂಶು ಕಿಶನ್ ಮೆಹ್ರಾ, ಅಲಿ ಅಬ್ಬಾಸ್ ಜಾಫರ್ ಬಂಡವಾಳ ಹೂಡಿದ್ದಾರೆ.

ಇದನ್ನೂ ಓದಿ:ದಾಂಪತ್ಯ ಜೀವನಕ್ಕೆ ಕಾಲಿರಿಸಿದ ರಾಕುಲ್ ​ -ಜಾಕಿ: ಸೆಲೆಬ್ರಿಟಿಗಳಿಂದ ಅಭಿನಂದನೆಗಳ ಸಲ್ಲಿಕೆ

ವಶು ಭಗ್ನಾನಿ ಮತ್ತು ಪೂಜಾ ಎಂಟರ್​ಟೈನ್ಮೆಂಟ್ ಎಎಝೆಡ್ ಫಿಲ್ಮ್ಸ್ ಸಹಯೋಗದಡಿ ಚಿತ್ರವನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದೇ ಸಾಲಿನ ಏಪ್ರಿಲ್​, ಈದ್ ಸಂದರ್ಭದಲ್ಲಿ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಚಿತ್ರ ಬಿಡುಗಡೆ ಆಗಲು ಸಜ್ಜಾಗುತ್ತಿದೆ. ಹಿಂದಿ, ಕನ್ನಡ, ತೆಲುಗು, ತಮಿಳು, ಮಲೆಯಾಳಂ ಭಾಷೆಯಲ್ಲಿ ಏಪ್ರಿಲ್​ 9 ರಂದು ಅದ್ಧೂರಿಯಾಗಿ ಈ ಚಿತ್ರ ಥಿಯೇಟರ್​​ ಪ್ರವೇಶಿಸಲಿದೆ.

ಇದನ್ನೂ ಓದಿ:ಶಂಭು ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನ: 'ದೆಹಲಿ ಚಲೋ' ಪ್ರತಿಭಟನೆ: Photos

ಅಕ್ಷಯ್​ ಕುಮಾರ್​ ಸಿನಿಮಾ ಅಂದ ಮೇಲೆ ಪ್ರೇಕ್ಷಕರಲ್ಲಿ ಕುತೂಹಲ ಸಾಕಷ್ಟಿರುತ್ತದೆ. ಟೈಗರ್​ ಶ್ರಾಫ್​ ಕೂಡ ಆ್ಯಕ್ಷನ್​ಗೆ ಹೆಸರುವಾಸಿಯಾಗಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕೊನೆಯದಾಗಿ ತೆರೆಕಂಡ ಅಕ್ಷಯ್​ ಕುಮಾರ್​ ಅಭಿನಯದ ಓ ಮೈ ಗಾಡ್​ 2 ಸಿನಿಮಾ ಯಶಸ್ವಿ ಆಗಿದ್ದು, 'ಬಡೇ ಮಿಯಾ ಛೋಟೆ ಮಿಯಾ' ಎಷ್ಟರ ಮಟ್ಟಿಗೆ ಗೆಲುವು ಕಾಣಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ABOUT THE AUTHOR

...view details