ಕರ್ನಾಟಕ

karnataka

ETV Bharat / entertainment

ರಿಷಿ ಅಭಿನಯದ 'ರುದ್ರ ಗರುಡ ಪುರಾಣ'ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಾಥ್ - Rudhra Garuda Purana - RUDHRA GARUDA PURANA

ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​​ಕುಮಾರ್ 'ರುದ್ರ ಗರುಡ ಪುರಾಣ' ಚಿತ್ರದ ಫಸ್ಟ್ ಲುಕ್ ಅನಾವರಣಗೊಳಿಸಿದ್ದಾರೆ.

Rudhra Garuda Purana
ರುದ್ರ ಗರುಡ ಪುರಾಣ

By ETV Bharat Karnataka Team

Published : May 2, 2024, 1:48 PM IST

ಆಪರೇಶನ್ ಅಲಮೇಲ್ಲಮ್ಮ, ಕವಲುದಾರಿ‌ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ, ಜನಪ್ರಿಯ ಶೈತಾನ್ ವೆಬ್ ಸೀರಿಸ್ ಮೂಲಕ ಮನೆಮಾತಾಗಿರುವ ನಟ ರಿಷಿ ಅಭಿನಯದ ಮುಂದಿನ ಚಿತ್ರ 'ರುದ್ರ ಗರುಡ ಪುರಾಣ'. ಬಹುನಿರೀಕ್ಷಿತ ಚಿತ್ರದ ಫಸ್ಟ್ ಲುಕ್ ಅನಾವರಣಗೊಂಡಿದೆ. ಅಶ್ವಿನಿ ಪುನೀತ್ ರಾಜ್​​​ಕುಮಾರ್ ಈ ಚಿತ್ರದ ಫಸ್ಟ್ ಲುಕ್ (ಗ್ಲಿಂಪ್ಸ್) ಬಿಡುಗಡೆ ಮಾಡಿ ಇಡೀ ತಂಡಕ್ಕೆ ಆಲ್ ದಿ ಬೆಸ್ಟ್ ತಿಳಿಸಿದ್ದಾರೆ.‌

ರಿಷಿ ಅಭಿನಯಿಸಿದ್ದ 'ಕವಲುದಾರಿ' ಚಿತ್ರ ಪುನೀತ್ ರಾಜ್​​​ಕುಮಾರ್ ಅವರ ಪಿಆರ್​ಕೆ ಪ್ರೊಡಕ್ಷನ್ಸ್​​ನಿಂದ ನಿರ್ಮಾಣವಾಗಿತ್ತು. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಈ 'ರುದ್ರ ಗರುಡ ಪುರಾಣ' ಚಿತ್ರದ ಮೊದಲ ನೋಟ ಅನಾವರಣಗೊಳಿಸಿದ್ದಾರೆ. ಬಿಡುಗಡೆಯಾದ ಕ್ಷಣದಿಂದಲೇ ಫಸ್ಟ್ ಲುಕ್​ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ರಿಷಿ ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ (ತನಿಖಾಧಿಕಾರಿ) ಕಾಣಿಸಿಕೊಂಡಿದ್ದಾರೆ. ಚಿತ್ರದ ಫಸ್ಟ್ ಲುಕ್ ನೋಡಿದ ಕೂಡಲೇ ಚಿತ್ರವನ್ನು ನೋಡಲೇಬೇಕು ಎನ್ನುವ ಉತ್ಸಾಹವನ್ನು ನಿರ್ದೇಶಕರು ಹುಟ್ಟಿ ಹಾಕಿದ್ದಾರೆ. ರಿಷಿ, ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲೂ ಹೆಸರು ಮಾಡಿದ್ದು, ಅಭಿಮಾನಿಗಳನ್ನು ಸಂಪಾದಿಸಿದ್ದಾರೆ‌‌. ಇದೀಗ ರುದ್ರ ಗರುಡ ಪುರಾಣ ಚಿತ್ರ ಬಿಡುಗಡೆಗೆ ಸಿನಿಪ್ರಿಯರು ಎದುರು ನೋಡುತ್ತಿದ್ದಾರೆ.

ಇದನ್ನೂ ಓದಿ:'ವೀರ್' ಆಗಿ ಜೆ.ಕೆ: ಯುವ ನಿರ್ದೇಶಕನ ಜೊತೆ ಕೈ ಜೋಡಿಸಿದ ಕಾರ್ತಿಕ್ ಜಯರಾಮ್ - The Veer

ರಿಷಿಗೆ ನಾಯಕಿಯಾಗಿ ಪ್ರಿಯಾಂಕ ಕುಮಾರ್ ನಟಿಸಿದ್ದಾರೆ. ವಿನೋದ್ ಆಳ್ವ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರಿ, ಕೆ.ಎಸ್ ಶ್ರೀಧರ್, ಅಶ್ವಿನಿ ಗೌಡ, ರಾಮ್ ಪವನ್, ವಂಶಿ, ಆಕರ್ಷ್, ಜೋಸೆಫ್, ಪ್ರಭಾಕರ್, ಗೌತಮ್ ಮೈಸೂರು, ಸ್ನೇಕ್ ಶ್ಯಾಮ್, ರಂಗನಾಥ್ ಭಾರದ್ವಾಜ್, ಕಾಮಿಡಿ ಕಿಲಾಡಿಗಳು ಜಗಪ್ಪ, ಪ್ರಸನ್ನ ಹಂಡ್ರಂಗಿ, ರದ್ವಿ ಸೇರಿದಂತೆ ಮೊದಲಾದವರು ತಾರಾ ಬಳಗದಲ್ಲಿದ್ದಾರೆ.

ಇದನ್ನೂ ಓದಿ:ದಾದಾ ಸಾಹೇಬ್ ಫಾಲ್ಕೆ ಫಿಲ್ಮ್ ಫೆಸ್ಟಿವಲ್​​ನಲ್ಲಿ ಕನ್ನಡದ 'ಕೆಂಡ': ನಿರ್ದೇಶಕ ಸಹದೇವ್ ಕೆಲವಡಿಗೆ ಪ್ರಶಸ್ತಿ - Sahadev Kelavadi

ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಂಬಲ್, ಡಿಯರ್ ವಿಕ್ರಮ್ ಸೇರಿದಂತೆ ಕೆಲ ಚಿತ್ರಗಳನ್ನು ನಿರ್ದೇಶಿಸಿರುವ ಕೆ.ಎಸ್ ನಂದೀಶ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಕಥೆ ಹಾಗೂ ಚಿತ್ರಕಥೆಯನ್ನು ನಿರ್ದೇಶಕರೇ ಬರೆದಿದ್ದಾರೆ. ಸಂಭಾಷಣೆ ರಘು ನಿಡುವಳ್ಳಿ ಅವರದ್ದು. ಕೆಪಿ ಸಂಗೀತ ನಿರ್ದೇಶನ, ಸಂದೀಪ್ ಕುಮಾರ್ ಛಾಯಾಗ್ರಹಣ ಹಾಗೂ ಮನು ಶೇಡ್ಗಾರ್ ಅವರ ಸಂಕಲನ ಈ ಚಿತ್ರಕ್ಕಿದೆ. ಈಗಾಗಲೇ ರುದ್ರ ಗರುಡ ಪುರಾಣ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ‌. ಜುಲೈ ವೇಳೆಗೆ ಬಹುನಿರೀಕ್ಷಿತ ಚಿತ್ರ ತೆರೆಗೆ ಬರಲಿದೆ.

ABOUT THE AUTHOR

...view details