ಕರ್ನಾಟಕ

karnataka

ETV Bharat / entertainment

'ಜೀವನ ಅಂದುಕೊಂಡಷ್ಟು ಸುಲಭವಲ್ಲ, ಹೇಗೋ ನಡೆಸಿಕೊಂಡು ಹೋಗುತ್ತಿದ್ದೇವೆ': ಅಶ್ವಿನಿ ಪುನೀತ್ ರಾಜಕುಮಾರ್​ - Ashwini Puneeth Rajkumar - ASHWINI PUNEETH RAJKUMAR

ಪಾಸಿಟಿವ್ ಮತ್ತು​ ನೆಗೆಟಿವ್​ ವಿಚಾರಗಳನ್ನು ಸ್ವೀಕರಿಸೋ ವಿಧಾನದ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮಾತನಾಡಿದ್ದಾರೆ.

Ashwini Puneeth Rajkumar
ಅಶ್ವಿನಿ ಪುನೀತ್ ರಾಜ್‍ಕುಮಾರ್

By ETV Bharat Karnataka Team

Published : Apr 6, 2024, 6:50 PM IST

ಅಶ್ವಿನಿ ಪುನೀತ್ ರಾಜ್‍ಕುಮಾರ್

ಕೆಲ ಕಿಡಿಗೇಡಿಗಳು ಗಜಪಡೆ ಎಂಬ ನಕಲಿ ಖಾತೆ ಸೃಷ್ಟಿಸಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದರು. ಆರ್‌ಸಿಬಿ ಸೋಲುಗಳಿಗೆ ಅಶ್ವಿನಿ ಅವರೇ ಕಾರಣ ಎಂಬಂತೆ ಟೀಕಿಸಲಾಗಿತ್ತು. ಇದರ ವಿರುದ್ಧ ಅಪ್ಪು ಅಭಿಮಾನಿ ಆಂಜನೇಯ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕಿಡಿಗೇಡಿಗಳ ವಿರುದ್ಧ ತನಿಖೆ ನಡೆಯುತ್ತಿದೆ. ಘಟನೆ ಬಗ್ಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಕೂಡ ಪ್ರತಿಕ್ರಿಯಿಸಿದ್ದಾರೆ.

ಪಿಆರ್​ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ ಆಶಿಕಾ ರಂಗನಾಥ್ ಅಭಿನಯದ ''O2'' ಸಿನಿಮಾದ ಪತ್ರಿಕಾಗೋಷ್ಠಿಯಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಮೊದಲ ಬಾರಿಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಇದೇ ವೇಳೆ ಪಾಸಿಟಿವ್,​ ನೆಗೆಟಿವ್​ ವಿಚಾರಗಳನ್ನು ಹೇಗೆ ಸ್ವೀಕರಿಸುತ್ತಿದ್ದಾರೆ ಎಂಬುದನ್ನೂ ತಿಳಿಸಿದ್ದಾರೆ.

ಯಾರೋ ಕಿಡಿಗೇಡಿಗಳ ದುಷ್ಕೃತ್ಯದ ಬಗ್ಗೆ ದೊಡ್ಮನೆ ಸೊಸೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಸರಳವಾಗಿ ಮತ್ತು ಪರೋಕ್ಷವಾಗಿ ಉತ್ತರ ಕೊಟ್ಟಿದ್ದಾರೆ. ಪಾಸಿಟಿವ್ ಮತ್ತು ನೆಗೆಟಿವ್ ವಿಚಾರಗಳನ್ನು ಹೇಗೆ ತಗೋತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಆಪ್ಷನ್ ಇಲ್ಲ. ಲೈಫ್ ಗೋಸ್ ಆನ್. ಜೀವನ ಅಂದುಕೊಂಡಷ್ಟು ಸುಲಭವಲ್ಲ, ಹೇಗೋ ನಡೆಸಿಕೊಂಡು ಹೋಗುತ್ತಿದ್ದೇವೆ. ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕೆಂದು ತಿಳಿಸಿದರು.

ಇನ್ನು ದಿ. ಪುನೀತ್ ರಾಜ್​ಕುಮಾರ್ ಫೈನಲ್ ಮಾಡಿದ್ದ ಕಥೆಯೀಗ ರಿಲೀಸ್​​ಗೆ ರೆಡಿ ಇದೆ‌. O2 ಚಿತ್ರದವರೆಗೂ ಅಪ್ಪು ಕಥೆಗಳನ್ನು ಕೇಳಿದ್ರು. ಇನ್ಮುಂದೆ ನನ್ನ ಮತ್ತು ನನ್ನ ಟೀಮ್ ನಿರ್ಧಾರ ಇರಲಿದೆ. O2 ನನ್ನ ಫೇವರೆಟ್ ಜಾನರ್​ನ ಸಿನಿಮಾ. ಇನ್ಮುಂದೆ ಪಿಅರ್​ಕೆ ಪ್ರೊಡಕ್ಷನ್ಸ್ ಅನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ನನ್ನದು ಎಂದು ತಿಳಿಸಿದರು.

ಇದನ್ನೂ ಓದಿ:ಟೀಸರ್​​ಗೂ ಮುನ್ನ ಮತ್ತೊಂದು ಪವರ್​ಫುಲ್ ಪೋಸ್ಟರ್ ಅನಾವರಣಗೊಳಿಸಿದ 'ಪುಷ್ಪ 2' ತಂಡ - Pushpa 2

ಹಾಗೇ ಯುವ ರಾಜ್​ಕುಮಾರ್ ನಟನೆಯ ಚೊಚ್ಚಲ ಚಿತ್ರ 'ಯುವ' ಸ್ವೀಕರಿಸಿರುವ ಪಾಸಿಟಿವ್ ರೆಸ್ಪಾನ್ಸ್ ಬಗ್ಗೆ ಅಶ್ವಿನಿ ಪುನೀತ್ ರಾಜ್‍ಕುಮಾರ್ ಮುಕ್ತವಾಗಿ ಶ್ಲಾಘಿಸಿದರು. ಯುವ ಕಳೆದ ನಾಲ್ಕು ವರ್ಷಗಳಿಂದ ಬಹಳ ಡೆಡಿಕೇಟೆಡ್ ಆಗಿ ಕೆಲಸ ಮಾಡಿದ್ದ. ಚಿತ್ರ ನೋಡಿದವರ್ಯಾರೂ ಕೂಡ ನೆಗೆಟಿವ್ ಮಾತಾಡಿಲ್ಲ. ನಾನು ಯುವನಿಗಾಗಿ ಸಿನಿಮಾ ಮಾಡುತ್ತೇನೆ. ಸಾಕಷ್ಟು ಕಥೆ ಕೇಳುತ್ತಿದ್ದೇನೆ. ಸಮಯ ಕೂಡಿ ಬರಬೇಕಲ್ಲ. ಖಂಡಿತ ಯುವನ ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದರು.

ಇದನ್ನೂ ಓದಿ:ಅಪ್ಪ ಎಂಬ ದೇವರ ಸತ್ಯ ಕಥೆ 'ಅಪ್ಪ ಐ ಲವ್ ಯೂ': ಮುಂದಿನ ಶುಕ್ರವಾರ ತೆರೆಗೆ - Appa I Love You

ಮುಂದಿನ ವರ್ಷ ಅಪ್ಪು ಹುಟ್ಟುಹಬ್ಬಕ್ಕೆ ಅಪ್ಪು ಸಿನಿಮಾವನ್ನು ರೀರಿಲೀಸ್ ಮಾಡುತ್ತೇವೆ. ಪಿ ಅರ್ ಕೆ ಪ್ರೊಡಕ್ಷನ್​​ನಲ್ಲಿ ಮೂಡಿಬಂದಿರುವ O2 ರಿಲೀಸ್​ಗೆ ರೆಡಿ ಇದೆ. ಇದೇ ತಿಂಗಳ 19ಕ್ಕೆ ಅಪ್ಪು ಮೆಚ್ಚಿದ್ದ O2 ರಾಜ್ಯಾದ್ಯಂತ ಬಿಡುಗಡೆ ಆಗುತ್ತಿದೆ. ಆಶಿಕಾ ರಂಗನಾಥ್ ಹಾಗೂ ಪ್ರವೀಣ್ ಅಭಿನಯದ ಚಿತ್ರವನ್ನು ನವ ನಿರ್ದೇಶಕ ರಾಘವ್ ನಾಯಕ್ ನಿರ್ದೇಶಿಸಿದ್ದಾರೆ. ಮೆಡಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯ ಸಿನಿಮಾ ಇದು ಎಂದು ಮಾಹಿತಿ ಹಂಚಿಕೊಂಡರು.

ABOUT THE AUTHOR

...view details