ಕರ್ನಾಟಕ

karnataka

ETV Bharat / entertainment

ಬ್ರೇಕಪ್​ ವದಂತಿ: ಕುತೂಹಲ ಹುಟ್ಟಿಸಿದ ಅರ್ಜುನ್​ ಕಪೂರ್​ ಇನ್​ಸ್ಟಾಗ್ರಾಂ ಸ್ಟೋರಿ - Arjun Kapoor Instagram Story

ಮಲೈಕಾ ಅರೋರಾ ಪ್ರತಿನಿಧಿ ಬ್ರೇಕಪ್​ ವದಂತಿ ತಳ್ಳಿ ಹಾಕಿದ ಬೆನ್ನಲ್ಲೇ ಇದೀಗ ಅರ್ಜನ್​ ಕಪೂರ್​ ಇನ್​ಸ್ಟಾಗ್ರಾಂ ಸ್ಟೋರಿ ಅಭಿಮಾನಿಗಳ ಕುತೂಹಲ ಕೆರಳಿಸಿದೆ.

Malaika Arora, Arjun Kapoor
ಮಲೈಕಾ ಅರೋರಾ, ಅರ್ಜುನ್​ ಕಪೂರ್​ (ANI/ETV Bharat)

By ETV Bharat Karnataka Team

Published : Jun 1, 2024, 4:27 PM IST

ಬಾಲಿವುಡ್​ ನಟ ಅರ್ಜುನ್​ ಕಪೂರ್​ ಹಾಗೂ ನಟಿ ಮಲೈಕಾ ಅರೋರಾ ನಡುವಿನ ಬ್ರೇಕಪ್​ ಸುದ್ದಿ ಸದ್ದು ಮಾಡುತ್ತಿರುವ ನಡುವೆಯೇ ಇದೀಗ ಅರ್ಜುನ್​ ಕಪೂರ್​ ಅವರ 'ಭೂತ ಹಾಗೂ ಭವಿಷ್ಯದ' ಕುರಿತ ಸೋಶಿಯಲ್​ ಮೀಡಿಯಾ ಸ್ಟೋರಿ ಅಚ್ಚರಿ ಮೂಡಿಸಿದೆ. ಮಲೈಕಾ ಅರೋರಾ ಅವರ ಪ್ರತಿನಿಧಿ ವೆಬ್ಲಾಯ್ಡ್​ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಬ್ರೇಕಪ್​ ವದಂತಿಗಳಿಗೆ ತಳ್ಳಿ ಹಾಕಿದ ಒಂದು ದಿನದ ಬೆನ್ನಲ್ಲೇ ಅರ್ಜುನ್​ ಸಾಮಾಜಿಕ ಜಾಲತಾಣದಲ್ಲಿ ಅಚ್ಚರಿ ಮೂಡಿಸುವಂತೆ ಸ್ಟೋರಿ ಹಾಕಿದ್ದಾರೆ.

ಅರ್ಜುನ್​ ಕಪೂರ್​ ಇನ್​ಸ್ಟಾಗ್ರಾಂ ಸ್ಟೋರಿ (Arjun Kapoor IG Story)

ತಮ್ಮ ಇನ್​ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿರುವ ಅರ್ಜುನ್​ ಕಪೂರ್​, "ನಮಗೆ ಜೀವನದಲ್ಲಿ ಎರಡು ಆಯ್ಕೆಗಳಿವೆ. ನಾವು ನಮ್ಮ ಭೂತಕಾಲದ ಜೊತೆಗೆ ಅಂಟಿಕೊಳ್ಳಬಹುದು ಅಥವಾ ಭವಿಷ್ಯದ ಸಾಧ್ಯತೆಗಳ ಪರಿಶೋಧಕರಾಗಬಹುದು." ಎಂದು ಬರೆದಕೊಂಡಿದ್ದಾರೆ. ಈ ಪೋಸ್ಟ್​ ಇದೀಗ ನೆಟ್ಟಿಗರಲ್ಲಿ ಮತ್ತೆ ಕುತೂಹಲ ಕೆರಳಿಸುವಂತೆ ಮಾಡಿದೆ. 2018ರಲ್ಲಿ ಮಲೈಕಾ ಅವರ 45ನೇ ಹುಟ್ಟುಹಬ್ಬದಂದು ಇಬ್ಬರೂ ತಾವು ರಿಲೇಶನ್​ಶಿಪ್​ನಲ್ಲಿ ಇರುವುದಾಗಿ ದೃಢಪಡಿಸಿಕೊಂಡಿದ್ದರು.

ಬ್ರೇಕಪ್ ವದಂತಿ ಹಬ್ಬತ್ತಿದ್ದಂತೆ, ಈ ಬಗ್ಗೆ ಪ್ರಶ್ನಿಸಿದಾಗ ಮಲೈಕಾ ಅವರ ಪ್ರತಿನಿಧಿ ಇದನ್ನು ಸಂಪೂರ್ಣವಾಗಿ ನಿರಾಕರಿಸಿದ್ದು, "ಇಲ್ಲ, ಎಲ್ಲವೂ ವದಂತಿ ಎಂದು ದೃಢಪಡಿಸಿದ್ದರು. ಮಲೈಕಾ ಅವರು ಈ ಹಿಂದೆ ಅರ್ಬಾಜ್​ ಖಾನ್​ ಅವರನ್ನು ಮದುವೆಯಾಗಿದ್ದರು. ಮಾತ್ರವಲ್ಲದೇ ಅವರಿಬ್ಬರಿಗೆ ಅರ್ಹಾನ್​ ಖಾನ್​ ಎಂಬ ಮಗನೂ ಇದ್ದಾನೆ.

ಮಲೈಕಾ ಹಾಗೂ ಅರ್ಜುನ್ ಅವರು ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. ಆದರೂ ಇನ್ನೂ ಒಬ್ಬರನ್ನೊಬ್ಬರು ಹೆಚ್ಚು ಗೌರವಿಸುತ್ತಾರೆ. ಇಂತಹ ಸೂಕ್ಷ್ಮ ಸಮಯದಲ್ಲಿ ಗೌಪ್ಯತೆಯನ್ನು ನಿರೀಕ್ಷಿಸುತ್ತಾರೆ. ಇಬ್ಬರೂ ತಮ್ಮ ಗೌರವಯುತ ರಿಲೇಶನ್​ಶಿಪ್​ ಅನ್ನು ಇದೀಗ ಸೌಹಾರ್ದಯುತವಾಗಿ ಕೊನೆಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

ಸಿನಿಮಾಗಳನ್ನು ನೋಡುವುದಾದರೆ, ಅರ್ಜುನ್​ ಕಪೂರ್​ ಅವರು, ಅಜಯ್ ದೇವಗನ್​, ಕರೀನಾ ಕಪೂರ್​, ದೀಪಿಕಾ ಪಡುಕೋಣೆ, ಅಕ್ಷಯ್​ ಕುಮಾರ್​, ಟೈಗರ್​ ಶ್ರಾಫ್​ ಹಾಗೂ ರಣವೀರ್​ ಸಿಂಗ್​ ತಾರಾಗಣದಲ್ಲಿರುವ ರೋಹಿತ್​ ಶೆಟ್ಟಿ ನಿರ್ದೇಶನದ ಮುಂಬರುವ ಚಿತ್ರ ಸಿಂಗಮ್​ ಎಗೇನ್​ನಲ್ಲಿ ವಿಲನ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅರ್ಜುನ್​​ ಜೊತೆ ಬ್ರೇಕ್​​ಅಪ್ ವದಂತಿ: ಪ್ರೀತಿ, ಬೆಂಬಲದ ಬಗ್ಗೆ ಮಾತನಾಡಿದ ಮಲೈಕಾ ಅರೋರಾ - Malaika Arjun

ABOUT THE AUTHOR

...view details