ಭಾರತೀಯ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 13ರ ಫೈನಲಿಸ್ಟ್ ಮಹಿರಾ ಶರ್ಮಾ ಸಖತ್ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ತಮ್ಮ ಪ್ರಾಜೆಕ್ಟ್ಗಳಿಂದಾಗಿ ಅಲ್ಲ, ಬದಲಾಗಿ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವು ಅಂತೆಕಂತೆಗಳು ಉದ್ಭವಿಸಿದೆ. ಮಾಧ್ಯಮ ವರದಿಗಳ ಪ್ರಕಾರ, ಮಹಿರಾ ಶರ್ಮಾ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಸಿರಾಜ್ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸಿರಾಜ್, ನಟಿಯ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಅವರ ಫೋಟೋ ಲೈಕ್ ಮಾಡಿದ ಹಿನ್ನೆಲೆ ಊಹಾಪೋಹಗಳೆದ್ದವು. 2024ರ ನವೆಂಬರ್ನಲ್ಲಿ ವದಂತಿಗಳು ಹರಡಲು ಶುರುವಾಗಿದ್ದು, ಈ ರೂಮರ್ ಆಗಾಗ್ಗೆ ಸದ್ದು ಮಾಡುತ್ತಲೇ ಇರುತ್ತದೆ.
ಜೋಡಿಗೆ ಬಹಳ ಹತ್ತಿರವಿರುವ ಮೂಲ ಹೇಳಿದ್ದೇನು? ಕೆಲ ವರದಿಗಳ ಪ್ರಕಾರ, ಇಬ್ಬರೂ ಪ್ರೀತಿಯಲ್ಲಿದ್ದಾರೆ. ಆದರೆ, ತಮ್ಮ ಸಂಬಂಧವನ್ನು ಸದ್ಯಕ್ಕೆ ಖಾಸಗಿಯಾಗಿಡಲು ಬಯಸಿದ್ದಾರೆ. ಜೋಡಿಗೆ ಬಹಳ ಹತ್ತಿರವಿರುವ ಮೂಲವೊಂದು ಈ ಸಂಬಂಧವನ್ನು ನ್ಯೂಸ್ ಪೋರ್ಟಲ್ಗೆ ದೃಢಪಡಿಸಿದ್ದು, ಕಳೆದ ಕೆಲ ತಿಂಗಳುಗಳಿಂದ ಇಬ್ಬರೂ ಪರಸ್ಪರ ತಿಳಿದುಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಸಂಬಂಧದ ಸುತ್ತ ಹಲವು ವದಂತಿಗಳಿದ್ದರೂ, ಮಹಿರಾ ಮತ್ತು ಸಿರಾಜ್ ಇಬ್ಬರೂ ಮೌನ ಮುಂದುವರಿಸಿದ್ದಾರೆ. ಗಾಳಿ ಸುದ್ದಿಗೆ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ. ಅಧಿಕೃತ ಘೋಷಣೆ ಆಗೋವರೆಗೂ ವದಂತಿ ವದಂತಿಯಷ್ಟೇ!.
ಮಹಿರಾ ಶರ್ಮಾ ಯಾರು? 'ನಾಗಿನ್'ನಲ್ಲಿನ ಪಾತ್ರಕ್ಕೆ ಹೆಸರುವಾಸಿಯಾಗಿರುವ ಮಹಿರಾ ಶರ್ಮಾ ಅವರು ನಟ - ಮಾಡೆಲ್ ಪರಾಸ್ ಛಬ್ರಾ ಅವರೊಂದಿಗೆ ಡೇಟಿಂಗ್ನಲ್ಲಿದ್ದಾರೆ ಎಂದು ಈ ಹಿಂದೆ ವರದಿ ಆಗಿತ್ತು. ಇಬ್ಬರೂ ಕಿರುತೆರೆ ಲೋಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ 13ರಲ್ಲಿ ಪರಿಚಿತರಾದರು. ಅದಾಗ್ಯೂ, ಕೆಲ ಕಾರಣಗಳಿಂದ ಇಬ್ಬರೂ 2023ರಲ್ಲಿ ಬೇರೆಯಾದರು ಎಂದು ಕೆಲ ವರದಿಗಳು ತಿಳಿಸಿವೆ.