ಕರ್ನಾಟಕ

karnataka

ETV Bharat / entertainment

ಮಕ್ಕಳ ದಿನಾಚರಣೆ: ಫೋಟೋ ಹಂಚಿಕೊಂಡ ಅನುಷ್ಕಾ ಶರ್ಮಾ - ANUSHKA SHARMA

ನಟಿ ಅನುಷ್ಕಾ ಶರ್ಮಾ ಮಕ್ಕಳ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.

Anushka Sharma
ಬಾಲಿವುಡ್ ನಟಿ ಅನುಷ್ಕಾ ಶರ್ಮಾ (Photo: IANS)

By ETV Bharat Entertainment Team

Published : Nov 14, 2024, 7:41 PM IST

ಸ್ಟಾರ್ ಕ್ರಿಕೆಟರ್​ ವಿರಾಟ್ ಕೊಹ್ಲಿ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಂದು ಮಕ್ಕಳ ದಿನಾಚರಣೆ ಹಿನ್ನೆಲೆ ಸೋಷಿಯಲ್​ ಮೀಡಿಯಾದಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ. ತಾಯಿಯಾಗಿ ತಮ್ಮ ಜೀವನದ ಬಗ್ಗೆ ಹೆಚ್ಚೇನು ಪೋಸ್ಟ್ ಶೇರ್ ಮಾಡದ ಅನುಷ್ಕಾ ಅವರಿಂದು ಸಿಂಪ್ಲಿ ಸ್ಪೆಷಲ್​ ಎನ್ನುವ ಫೋಟೋ ಪೋಸ್ಟ್ ಮಾಡಿದ್ದಾರೆ. ತಮ್ಮ ಇಬ್ಬರು ಮುದ್ದು ಮಕ್ಕಳಾದ ವಾಮಿಕಾ ಮತ್ತು ಅಕಾಯ್‌ಗಾಗಿ ಚಿಲ್ಡ್ರನ್ ಡೇ ಮೀಲ್​ ತಯಾರಿಸಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಸೆಕ್ಷನ್​​ನಲ್ಲಿ ನೂಡಲ್ಸ್​​ ಬೌಲ್​ ಹಂಚಿಕೊಂಡಿದ್ದಾರೆ. ಸ್ಲರ್ಪ್ ಫಾರ್ಮ್ ನೂಡಲ್ಸ್​ ಆಗಿದ್ದು, ಮಕ್ಕಳಿಗಾಗಿ ಆರೋಗ್ಯಕರ ಮತ್ತು ಪೌಷ್ಠಿಕ ಆಯ್ಕೆಯಲ್ಲಿ ಹೆಸರುವಾಸಿ ಆಗಿರುವ ಬ್ರ್ಯಾಂಡ್ ಇದು. ಫೋಟೋದಲ್ಲಿ, ಚೈಲ್ಡ್​ ಫ್ರೆಂಡ್ಲಿ ಬೌಲ್​​ನೊಂದಿಗೆ ಪ್ರಸ್ತುತಪಡಿಸಲಾದ ನೂಡಲ್ಸ್, ಮುದ್ದಾದ ಅನಿಮಲ್​​ ಕ್ಯಾರೆಕ್ಟರ್​ ಮತ್ತು ಹಾರ್ಟ್​ ಸಿಂಬಲ್​ ಒಳಗೊಂಡಿದೆ. ಇದು ಪ್ರೀತಿ ಮತ್ತು ಕಾಳಜಿಯ ಸ್ಪರ್ಶವನ್ನೊದಗಿಸಿದೆ.

ಇದನ್ನೂ ಓದಿ:ತುಳುನಾಡಿನ ಸಂಪ್ರದಾಯ ಮರೆಯದ ಐಶ್ವರ್ಯಾ ರೈ: ಭಾಷಾಪ್ರೇಮದ ವಿಡಿಯೋ ನೋಡಿ

ಅನುಷ್ಕಾ ಅವರಿಗೆ ತಮ್ಮ ಮಕ್ಕಳೊಂದಿಗಿನ ಪ್ರತೀ ಸಣ್ಣ ಆಚರಣೆ ಕೂಡಾ ಅಮೂಲ್ಯವಾದ್ದು. ಅದನ್ನು ಬಹಳ ಸಂಭ್ರಮಿಸುತ್ತಾರೆ. ಸ್ಟಾರ್​ ನಟಿಯಾದ್ರೂ, ಸಿರಿವಂತೆಯಾಗಿದ್ದರೂ ಕೂಡಾ ತಮ್ಮ ಕುಟುಂಬದ ಸಣ್ಣ ಸಣ್ಣ ಕ್ಷಣವನ್ನು ಆನಂದಿಸುತ್ತಾರೆ. ವಿರಾಟ್​ ಅನುಷ್ಕಾ ಇಬ್ಬರೂ ತಮ್ಮ ಮಕ್ಕಳ ವಿಷಯದಲ್ಲಿ ದೊಡ್ಡ ಮಟ್ಟದ ಪ್ರೈವಸಿ ಬಯಸಿದ್ದಾರೆ, ಆ ಖಾಸಗಿತನವನ್ನು ಕಾಪಾಡಿಕೊಂಡು ಬಂದಿದ್ದಾರೆ. ತಾವು ಸ್ಟಾರ್ ಕಪಲ್​​ ಆಗಿದ್ರು, ಮಕ್ಕಳಿಗೆ ಸಾಮಾನ್ಯ ಬಾಲ್ಯವನ್ನನುಭವಿಸಲು ಬಿಟ್ಟಿದ್ದಾರೆ. ಮಾಧ್ಯಮಗಳಿಂದ ಮಕ್ಕಳ ನೋಟವನ್ನು ದೂರವಿಟ್ಟಿದ್ದಾರೆ. ಅದಾಗ್ಯೂ, ಈ ರೀತಿಯ ಕ್ಷಣಗಳ ಮೂಲಕ ಅನುಷ್ಕಾ ತಾಯಿಯಾಗಿ ತನ್ನ ಪ್ರಯಾಣದ ಒಂದು ಸಣ್ಣ ನೋಟವನ್ನು ಒದಗಿಸುತ್ತಾರೆ.

ಅನುಷ್ಕಾ ಶರ್ಮಾ ಇನ್​​ಸ್ಟಾಗ್ರಾಮ್​ ಸ್ಟೋರಿ (Photo: Anushka Sharma's Instagram Story)

ಇದನ್ನೂ ಓದಿ:ಮೆಗಾ ಪವರ್​​ಸ್ಟಾರ್​​ ರಾಮ್​ಚರಣ್​ಗೆ ಶಾರುಖ್​ ಖಾನ್​​ ಸಪೋರ್ಟ್​​: ನಡೆಯಲಿದೆ ಅದ್ಧೂರಿ 'ಗೇಮ್​ ಚೇಂಜರ್​' ಈವೆಂಟ್​

ಸಖತ್​ ಸಿಂಪ್ಲಿ ಆದ್ರು ಪ್ರೀತಿ ತುಂಬಿದ ಮಕ್ಕಳ ದಿನದ ಕ್ಷಣವನ್ನು ಹಂಚಿಕೊಳ್ಳುವ ಮೂಲಕ, ಅಭಿಮಾನಿಗಳಿಗೆ ಒಂದು ನೋಟವನ್ನು ಒದಗಿಸಿದ್ದಾರೆ. ಈ ಮೂಲಕ ತಮ್ಮ ಮಕ್ಕಳನ್ನು ಸರಳವಾಗಿ ಬೆಳೆಸುತ್ತಾ ಇತರರಿಗೆ ಮಾದರಿಯಾಗಿದ್ದಾರೆ. ವಿಶ್ವಾದ್ಯಂತ ಜನಪ್ರಿಯರಾಗಿರುವ ವಿರುಷ್ಕಾ ದಂಪತಿ ಮಕ್ಕಳನ್ನು ಸೋಷಿಯಲ್​ ಮೀಡಿಯಾ ಪ್ರಪಂಚದಿಂದ ದೂರವಿಟ್ಟಿದ್ದಾರೆ. ಸ್ಟಾರ್ ಕಪಲ್​ನ ಈ ನಡೆ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ.

ABOUT THE AUTHOR

...view details