ಕರ್ನಾಟಕ

karnataka

ETV Bharat / entertainment

ಟಿ-20 ವಿಶ್ವಕಪ್​​​​ ಪ್ರಚಾರಕ್ಕೆ ಅಶ್ವತ್ಥಾಮನ ಪಾತ್ರದಲ್ಲಿ ಬಂದ ಅಮಿತಾಭ್​​ ಬಚ್ಚನ್: ರೋಮಾಂಚಕ ವಿಡಿಯೋ ನೋಡಿ - Amitabh Bachchan - AMITABH BACHCHAN

ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಕಲ್ಕಿ 2898 ಎಡಿ ಚಿತ್ರದ ಅಶ್ವತ್ಥಾಮನ ಪಾತ್ರದಲ್ಲಿ, ಐಸಿಸಿ ಪುರುಷರ ಟಿ20 ವಿಶ್ವಕಪ್ 2024ರ ಪ್ರಚಾರ ಮಾಡಿದ್ದಾರೆ.

T20 Word Cup
ಟಿ20 ವಿಶ್ವಕಪ್​​​​ ಪ್ರಚಾರ (Star Sports Instagram)

By ETV Bharat Karnataka Team

Published : May 8, 2024, 3:53 PM IST

Updated : May 8, 2024, 4:26 PM IST

ಬಾಲಿವುಡ್ ದಿಗ್ಗಜ ಅಮಿತಾಭ್​​​ ಬಚ್ಚನ್ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಕಲ್ಕಿ 2898 ಎಡಿ'. ಚಿತ್ರದಲ್ಲಿ 'ಅಮರ ಅಶ್ವತ್ಥಾಮ'ನ ಪಾತ್ರಕ್ಕೆ ಜೀವ ತುಂಬಿದ್ದು, ಈ ಒಂದು ನಿರ್ದಿಷ್ಟ ಪಾತ್ರದ ಮೇಲೂ ಸಾಕಷ್ಟು ನಿರೀಕ್ಷೆ, ಕುತೂಹಲವಿದೆ. ಇದೀಗ ತಮ್ಮ ಅಶ್ವತ್ಥಾಮನ ಪಾತ್ರದ ಮೂಲಕ 'ಐಸಿಸಿ ಮೆನ್ಸ್​​ ಟಿ20 ವಿಶ್ವಕಪ್ 2024'ರ ಪ್ರಚಾರ ಮಾಡಿದ್ದಾರೆ.

ಇಂದು (ಮೇ.8, ಬುಧವಾರ) ಸ್ಟಾರ್ ಸ್ಪೋರ್ಟ್ಸ್ ಬಿಗ್ ಬಿ ಪಾತ್ರವನ್ನು ಒಳಗೊಂಡಿರುವ ವಿಡಿಯೋ ಹಂಚಿಕೊಂಡಿದೆ. ಪಂದ್ಯಕ್ಕೂ ಮುನ್ನ ಭಾರತೀಯ ಕ್ರಿಕೆಟ್ ತಂಡಕ್ಕೆ ಸ್ಫೂರ್ತಿ ತುಂಬುವ ದೃಶ್ಯವಿದು. ಹೆಸರಾಂತ ನಟನ ನೋಟ, ಡೈಲಾಗ್ಸ್ ರೋಮಾಂಚನಕಾರಿಯಾಗಿದೆ.

ಸ್ಟಾರ್ ಸ್ಪೋರ್ಟ್ಸ್ ತನ್ನ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದೆ. ಜೊತೆಗೆ, "40 ಸೆಕೆಂಡುಗಳ ರೋಮಾಂಚಕ ವಿಡಿಯೋ. ಟೀಮ್ ಇಂಡಿಯಾದ ಅತಿ ದೊಡ್ಡ ಚೀರ್‌ಲೀಡರ್ ಅಮಿತಾಭ್​ ಬಚ್ಚನ್​ ಅವರನ್ನು ನೋಡಿ. ರೋಹಿತ್​ ಶರ್ಮಾ ಮತ್ತು ಅವರ ತಂಡಕ್ಕೆ ಭಾವೋದ್ರಿಕ್ತ ಸಂದೇಶ. ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾಗಾಗಿನ ಸೂಪರ್​ ಸ್ಟಾರ್​​ನ ಘರ್ಜನೆಗೆ ಮೆಚ್ಚುಗೆ ಇರಲಿ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಜೂನ್​ 2 ರಿಂದ ವಿಶ್ವಕಪ್​​ ವೀಕ್ಷಿಸಲು ಮರೆಯಬೇಡಿ'' ಎಂದು ಬರೆದುಕೊಂಡಿದೆ.

ಇದನ್ನೂ ಓದಿ:'ಪಿಕು'ಗೆ 9 ವರ್ಷ: ಸಿನಿಮಾ ಸೆಟ್​ ಫೋಟೋ ಶೇರ್; ಬಿಗ್​ ಬಿ, ಇರ್ಫಾನ್​​ ಖಾನ್​ ಬಗ್ಗೆ ದೀಪಿಕಾ ಹೇಳಿದ್ದಿಷ್ಟು - Piku

40 ಸೆಕೆಂಡ್‌ಗಳ ವಿಡಿಯೋದಲ್ಲಿ ಅಮಿತಾಭ್ ಬಚ್ಚನ್​​​ ಅದ್ಭುತ ಡೈಲಾಗ್ಸ್​​​ ಹೊಡೆದಿದ್ದಾರೆ. "ಯುದ್ಧ ನಿತ್ಯ ನಡೆಯುತ್ತದೆ. ಆದರೆ, ಮಹಾಯುದ್ಧ ಒಂದು ಕಠಿಣ ಪರೀಕ್ಷೆ ತೆಗೆದುಕೊಳ್ಳುತ್ತದೆ. ಇಲ್ಲಿ ಯುದ್ಧದ ಬೇಗೆ ಆವರಿಸಿರುತ್ತದೆ. ಇಲ್ಲಿ ಸೋತ ಧೈರ್ಯಶಾಲಿಗಳು ಸಹ ತಮ್ಮ ತಲೆ ಎತ್ತಿ ಮುನ್ನುಗ್ಗುತ್ತಾರೆ" ಎಂದು ಹೇಳಿದ್ದು, ಬಹಳ ರೋಮಾಂಚಕವಾಗಿದೆ. ಕಲ್ಕಿ 2898 ಎಡಿ ಥೀಮ್ ಮ್ಯೂಸಿಕ್‌ ಹಿನ್ನೆಲೆಯಲ್ಲಿ ಪ್ಲೇ ಆಗುತ್ತಿದ್ದು, ದೃಶ್ಯ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಸೂರ್ಯಕುಮಾರ್ ಯಾದವ್ ಮತ್ತು ಜಸ್ಪ್ರೀತ್ ಬುಮ್ರಾ ಸೇರಿದಂತೆ ಮೈದಾನದಲ್ಲಿರುವ ಕ್ರಿಕೆಟಿಗರನ್ನು ಒಳಗೊಂಡಿದೆ.

ಇದನ್ನೂ ಓದಿ:'ಸಲಾರ್ 2' ಶೂಟಿಂಗ್​ನಲ್ಲಿ ಪ್ರಶಾಂತ್​​ ನೀಲ್​: ಜೂ. ಎನ್‌ಟಿಆರ್ ಜೊತೆಗಿನ ಚಿತ್ರ ಸೆಟ್ಟೇರೋದು ಯಾವಾಗ? - PRASHANTH NEEL

ಹಿಂದೂ ಪುರಾಣಗಳಿಂದ ಸ್ಫೂರ್ತಿ ಪಡೆದ ಕಲ್ಕಿ 2898 ಎಡಿ ಚಿತ್ರದಲ್ಲಿ ಪ್ರಭಾಸ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಅಮಿತಾಭ್​ ಬಚ್ಚನ್​​, ಕಮಲ್​ ಹಾಸನ್​​, ದಿಶಾ ಪಟಾನಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 27 ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲು ಕಲ್ಕಿ ಸಜ್ಜಾಗಿದೆ. ನಾಗ್ ಅಶ್ವಿನ್ ನಿರ್ದೇಶನದ ಈ ಚಿತ್ರವನ್ನು ವೈಜಯಂತಿ ಮೂವಿಸ್ ಬ್ಯಾನರ್ ಅಡಿ ಸಿ ಅಸ್ವಾನಿ ದತ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಸಂತೋಷ್ ನಾರಾಯಣನ್ ಸಂಗೀತ ಸಂಯೋಜಿಸಿದ್ದಾರೆ.

Last Updated : May 8, 2024, 4:26 PM IST

ABOUT THE AUTHOR

...view details