ಅಪಾರ ಸಂಖ್ಯೆಯ ಅಭಿಮಾನಿಗಳು, ಪ್ರೇಕ್ಷಕರ ಹೃದಯದಲ್ಲಿ ಭದ್ರ ಸ್ಥಾನ ಹೊಂದಿರುವ ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ 'ಪುಷ್ಪ 2: ದಿ ರೂಲ್' ಮೂಲಕ ಮತ್ತೊಮ್ಮೆ ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸಿನಿಮಾ ಸುತ್ತಲಿನ ಸದ್ದು ಸಾಮಾನ್ಯ ಮಟ್ಟದಲ್ಲಂತೂ ಇಲ್ಲ. ಇಂದು ವಿಶ್ವದಾದ್ಯಂತ ಅದ್ಧೂರಿಯಾಗಿ ತೆರೆಗಪ್ಪಳಿಸಿರುವ ಪುಷ್ಪರಾಜನ ಕಥೆ ಭಾರತೀಯ ಚಿತ್ರರಂಗದ ದಾಖಲೆಗಳನ್ನು ಪುಡಿಗಟ್ಟಿ, ಹೊಸ ಅಲೆ ಸೃಷ್ಟಿಸುವ ಭರವಸೆ ನೀಡಿದೆ. ಜಾಗತಿಕವಾಗಿ 12,500 ಸ್ಕ್ರೀನ್‌ಗಳಲ್ಲಿ ಬಿಡುಗಡೆ ಆಗಿರುವ ಪುಷ್ಪ 2 ಬಾಕ್ಸ್ ಆಫೀಸ್ ರೇಸ್‌ನಲ್ಲಿ ಗೇಮ್ ಚೇಂಜರ್ ಆಗೋದು ಸ್ಪಷ್ಟವಾಗಿದೆ. ಮೊದಲ ದಿನದ ಕಲೆಕ್ಷನ್ ಅಂಕಿ-ಅಂಶ ನಾಳೆ ಮುಂಜಾನೆ ಹೊರಬೀಳಲಿದೆ.
ವಿಶ್ವದಾದ್ಯಂತ 250 ಕೋಟಿ ರೂ. ದಾಟಿದ ಮೊದಲ ಚಿತ್ರ:ಬಹುನಿರೀಕ್ಷಿತ ಚಿತ್ರ ಪುಷ್ಪ ಸೀಕ್ವೆಲ್ ತನ್ನ ಮೊದಲ ದಿನ ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿಯುವ ನಿರೀಕ್ಷೆಯಿದೆ. ಸುಕುಮಾರ್ ನಿರ್ದೇಶನದ ಈ ಸಿನಿಮಾ ವಿಶ್ವದಾದ್ಯಂತ ಬರೋಬ್ಬರಿ 270 ಕೋಟಿ ರೂಪಾಯಿ ಗಳಿಸಲಿದೆ ಎಂದು ಇಂಡಸ್ಟ್ರಿ ಮೂಲಗಳು ಭವಿಷ್ಯ ನುಡಿದಿವೆ. ಇತಿಹಾಸದಲ್ಲೇ ಇದೇ ಮೊದಲೆನ್ನಬಹುದು. ಭವಿಷ್ಯ ಸಾಬೀತಾದರೆ, ಅಲ್ಲು ಅರ್ಜುನ್ ಈ ಸಾಧನೆಗೈದ ಮೊದಲ ನಟರಾಗಿ ಹೊರಹೊಮ್ಮಲಿದ್ದಾರೆ. ಮೊದಲ ಭಾಗದ ಯಶಸ್ಸಿನಿಂದ ನಿರ್ಮಿಸಲಾದ ಸೀಕ್ವೆಲ್ ಈಗಾಗಲೇ ಭಾರತದಾದ್ಯಂತದ ಬಹು ಪ್ರದೇಶಗಳಲ್ಲಿ ಪ್ರಾಬಲ್ಯ ಸಾಧಿಸಿದೆ.
ಆರ್ಆರ್ಆರ್ ದಾಖಲೆ ಬ್ರೇಕ್:270 ಕೋಟಿ ರೂಪಾಯಿ ಸಂಪಾದಿಸಲಿದೆ ಎಂಬ ಭವಿಷ್ಯ ಸಾಬೀತಾದರೆ, ಭಾರತೀಯ ಚಿತ್ರರಂಗದ ಬ್ಲಾಕ್ಬಸ್ಟರ್ 'ಆರ್ಆರ್ಆರ್' ಚಿತ್ರದ ಮೊದಲ ದಿನದ ಕಲೆಕ್ಷನ್ ದಾಖಲೆಯನ್ನು ಸಹ ಪುಷ್ಪರಾಜ್ ಬ್ರೇಕ್ ಮಾಡಲಿದ್ದಾನೆ. ವಿಶ್ವದಾದ್ಯಂತ ಮೊದಲ ದಿನ 257 ಕೋಟಿ ರೂ.ನ ವ್ಯವಹಾರ ನಡೆಸಿದ್ದ ಆರ್ಆರ್ಆರ್ ಭಾರತೀಯ ಚಿತ್ರರಂಗದಲ್ಲೇ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಪುಷ್ಪ 2 - ಮೊದಲ ದಿನದ ಕಲೆಕ್ಷನ್ (ಅಂದಾಜು/ಸಾಧ್ಯತೆ) ವಿವರ ಇಲ್ಲಿದೆ:
- ಆಂಧ್ರ ಪ್ರದೇಶ/ತೆಲಂಗಾಣ: 90 ಕೋಟಿ ರೂಪಾಯಿ.
- ಕರ್ನಾಟಕ: 15 ಕೋಟಿ ಕೋಟಿ ರೂಪಾಯಿ.
- ತಮಿಳುನಾಡು: 8 ಕೋಟಿ ರೂಪಾಯಿ.
- ಕೇರಳ: 7 ಕೋಟಿ ರೂಪಾಯಿ.
- ಭಾರತದ ಉಳಿದ ಭಾಗ: 80 ಕೋಟಿ ರೂಪಾಯಿ.
- ಭಾರತದ ಒಟ್ಟು ಕಲೆಕ್ಷನ್: 200 ಕೋಟಿ ರೂಪಾಯಿ.
- ವಿದೇಶದಲ್ಲಿನ ವ್ಯವಹಾರ: 70 ಕೋಟಿ ರೂಪಾಯಿ.
- ವಿಶ್ವದಾದ್ಯಂತದ ಒಟ್ಟು ಕಲೆಕ್ಷನ್ ಸಾಧ್ಯತೆ: 270 ಕೋಟಿ ರೂಪಾಯಿ.
ಇದನ್ನೂ ಓದಿ:ಪುಷ್ಪ-2 ಚಿತ್ರದ ಬೆನಿಫಿಟ್ ಶೋದಲ್ಲಿ ಅಲ್ಲು ಅರ್ಜುನ್: ಕಾಲ್ತುಳಿತದಲ್ಲಿ ಮಹಿಳೆ ಸಾವು