ಕರ್ನಾಟಕ

karnataka

ETV Bharat / entertainment

25M ಇನ್‌ಸ್ಟಾಗ್ರಾಮ್ ಫಾಲೋವರ್ಸ್​ ಸಂಪಾದಿಸಿದ ದಕ್ಷಿಣ ಭಾರತದ ಮೊದಲ ನಟ ಇವರು! - Allu Arjun - ALLU ARJUN

ಸೌತ್ ಸೂಪರ್ ಸ್ಟಾರ್ ಅಲ್ಲು ಅರ್ಜುನ್ 25 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್​​​ ಸಂಪಾದಿಸುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

Allu Arjun
​ಅಲ್ಲು ಅರ್ಜುನ್

By ETV Bharat Karnataka Team

Published : Mar 21, 2024, 2:07 PM IST

2022ರ ಸೂಪರ್​ ಹಿಟ್​ 'ಪುಷ್ಪ: ದಿ ರೈಸ್' ಚಿತ್ರದಲ್ಲಿನ ಅಮೋಘ ಅಭಿನಯನಕ್ಕಾಗಿ ರಾಷ್ಟ್ರ ಪ್ರಶಸ್ತಿ ಗೆದ್ದಿರುವ ನಟ ಅಲ್ಲು ಅರ್ಜುನ್ ಪ್ರಸ್ತುತ ಸದ್ಯ 'ಪುಷ್ಪ 2: ದಿ ರೂಲ್' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ತಮ್ಮ ಅಪಾರ ಜನಪ್ರಿಯತೆ ಮತ್ತು ಅಭಿಮಾನಿ ಬಳಗದಿಂದಾಗಿ ನಟ ಸಾಮಾಜಿಕ ಜಾಲತಾಣದಲ್ಲಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.

ಹೌದು, 25 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್​​​ ಸಂಪಾದಿಸಿದ ದಕ್ಷಿಣ ಚಿತ್ರರಂಗದ ಮೊದಲ ನಟ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜು ಪಾತ್ರರಾಗಿದ್ದಾರೆ. ತಮ್ಮನ್ನು ಮೆಚ್ಚಿಕೊಂಡಿರುವ, ಬೆಂಬಲ ಸೂಚಿಸುತ್ತಿರುವ ಅಭಿಮಾನಿ ಬಳಗಕ್ಕೆ ಅವರು ಧನ್ಯವಾದ ಅರ್ಪಿಸಿದ್ದಾರೆ.

ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ ಅಭಿನಂದನಾ ಪೋಸ್ಟ್ ಶೇರ್ ಮಾಡಿರುವ ನಟ, "25 ಮಿಲಿಯನ್. ಧನ್ಯವಾದಗಳು. ಎಂದೆಂದಿಗೂ ಕೃತಜ್ಞ" ಎಂಬ ಕ್ಯಾಪ್ಶನ್​ ಕೊಟ್ಟಿದ್ದಾರೆ. ಹಿಮಾವೃತವಾದ ಪರ್ವತಗಳ ಹಿನ್ನೆಲೆಯಲ್ಲಿ, ಬ್ಲ್ಯಾಕ್​ ಆ್ಯಂಡ್​ ವೈಟ್​ ಫೋಟೋ ಹಂಚಿಕೊಳ್ಳುವ ಮೂಲಕ ಈ ಮಾಹಿತಿ ನೀಡಿದ್ದಾರೆ. ಬ್ಲ್ಯಾಕ್​ ಡ್ರೆಸ್​ನಲ್ಲಿ ಸೂಪರ್​ ಸ್ಟಾರ್ ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದು, ಫೋಟೋದ ಮೇಲ್ಭಾಗದಲ್ಲಿ 25M (ಮಿಲಿಯನ್) ಎಂದು ದೊಡ್ಡದಾಗಿ ಬರೆಯಲಾಗಿದೆ. ​​ಪುಷ್ಪ ಸ್ಟಾರ್ ಈ ಸುದ್ದಿ ಹಂಚಿಕೊಳ್ಳುತ್ತಿದ್ದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳು ಕಾಮೆಂಟ್​ ಸೆಕ್ಷನ್​ನಲ್ಲಿ ನಟನ ಮೇಲೆ ಪ್ರೀತಿಯ ಧಾರೆಯೆರೆಯುತ್ತಿದ್ದಾರೆ.

ಇದನ್ನೂ ಓದಿ:'ನಮ್‌‌ ಮನ್ಸು, ಒಳ್ಳೆದ್ ಮಾಡಿದ್ರೆ ದೇವ್ರು, ಏನಂತೀರಾ?': ನಾಳೆ ಸಿದ್ಲಿಂಗು ಸೀಕ್ವೆಲ್‌ ಮುಹೂರ್ತ

ABOUT THE AUTHOR

...view details