ನಟಿ ಐಶ್ವರ್ಯಾ ರೈ ಬಚ್ಚನ್ ಇತ್ತೀಚೆಗೆ ನ್ಯೂಯಾರ್ಕ್ ಪ್ರವಾಸ ಕೈಗೊಂಡಿದ್ದರು. ಸಾಗರೋತ್ತರ ಪ್ರದೇಶದಲ್ಲಿ ಗುಣಮಟ್ಟದ ಸಮಯ ಕಳೆದ ಮಾಜಿ ವಿಶ್ವ ಸುಂದರಿ ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಮುಂಬೈಗೆ ವಾಪಸ್ಸಾಗಿದ್ದಾರೆ. ತಾಯಿ ಮಗಳ ಜೋಡಿ ಮುಂಜಾನೆ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಪಾಪರಾಜಿಗಳು ಇವರ ಫೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಡಿವೋರ್ಸ್ ವದಂತಿ ಉಲ್ಭಣ: ನಟ ಅಭಿಷೇಕ್ ಬಚ್ಚನ್ ಜೊತೆ ಹಾಗೂ ಐಶ್ವರ್ಯಾ ನಡುವೆ ಬಿರುಕು ಮೂಡಿವೆ ಎಂಬ ವದಂತಿಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ವಿವಾಹ ಸಮಾರಂಭವೊಂದರಲ್ಲಿ, ಐಶ್ವರ್ಯಾ ಮತ್ತು ಆರಾಧ್ಯ ಬಚ್ಚನ್ ಕುಟುಂಬದೊಂದಿಗೆ ಬಾರದೇ, ಪ್ರತ್ಯೇಕವಾಗಿ ಆಗಮಿಸಿದರು. ಪತಿ ಅಭಿಷೇಕ್ ಅವರು ಅಮಿತಾಭ್ ಬಚ್ಚನ್, ಜಯಾ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ನಂದಾ ಸೇರಿದಂತೆ ತಮ್ಮ ಸಂಪುರ್ಣ ಕುಟುಂಬ ಸದಸ್ಯರೊಂದಿಗೆ ಬಂದಿದ್ದರು. ಅದಾಗ್ಯೂ ಕಾರ್ಯಕ್ರಮದೊಳಗೆ ದಂಪತಿ ಮತ್ತು ಮಗಳು ಒಟ್ಟಿಗೆ ಕಾಣಿಸಿಕೊಂಡಿದ್ದರೂ ಕೂಡ, ಇಬ್ಬರೂ ವಿಚ್ಛೇದನ ಪಡೆಯಲಿದ್ದಾರಾ ಎಂಬ ರೂಮರ್ ಮಾತ್ರ ಹೆಚ್ಚುತ್ತಲೇ ಇದೆ . ಈ ಊಹಾಪೋಹ ಬಹುದಿನಗಳಿಂದ ಇದ್ದು, ತಾರಾ ದಂಪತಿ ಮಾತ್ರ ಮೌನ ಮುಂದುವರಿಸಿದ್ದಾರೆ.
ವಿಚ್ಛೇದನ ವದಂತಿ ಉಲ್ಭಣಗೊಂಡಿದ್ದೇಕೆ? ವಿಚ್ಛೇದನ ಪ್ರಕರಣಗಳ ಕುರಿತ ಪೋಸ್ಟ್ ಒಂದನ್ನು ಇತ್ತೀಚೆಗಷ್ಟೇ ಅಭಿಷೇಕ್ ಲೈಕ್ ಮಾಡಿದ್ದರು. ಹಾಗಾಗಿ ಈ ವದಂತಿಗಳು ಉಲ್ಭಣಗೊಂಡವು. ಈ ಪೋಸ್ಟ್ ಐಶ್ವರ್ಯಾ ಅವರ ಆಪ್ತ ಸ್ನೇಹಿತ ಡಾ. ಝಿರಾಕ್ ಮಾರ್ಕರ್ ಅವರ ಉಲ್ಲೇಖವನ್ನು ಒಳಗೊಂಡಿತ್ತು.