ಕರ್ನಾಟಕ

karnataka

ETV Bharat / entertainment

ಕೈಗೆ ಬ್ಯಾಂಡೇಜ್​​ ಸುತ್ತಿಕೊಂಡೇ ರೆಡ್​ ಕಾರ್ಪೆಟ್​​ ಮೇಲೆ ಐಶ್ವರ್ಯಾ ಮಿಂಚು: ರೈ ಆತ್ಮವಿಶ್ವಾಸಕ್ಕೆ ಜೈ ಎಂದ ಫ್ಯಾನ್ಸ್‌ - Aishwarya Rai At Cannes - AISHWARYA RAI AT CANNES

ಕೇನ್ಸ್ ಈವೆಂಟ್​ನಿಂದ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್ ಅವರ ಆಕರ್ಷಕ​​ ಫೋಟೋಗಳು ಹೊರಬಿದ್ದಿವೆ.

Aishwarya Rai Bachchan
ಐಶ್ವರ್ಯಾ ರೈ ಬಚ್ಚನ್ (Instagram)

By ETV Bharat Karnataka Team

Published : May 17, 2024, 7:25 AM IST

ಸಾಗರೋತ್ತರ ಪ್ರದೇಶದಲ್ಲಿ ಪ್ರತಿಷ್ಠಿತ 'ಕೇನ್ಸ್​​ ಚಲನಚಿತ್ರೋತ್ಸವ 2024' ನಡೆಯುತ್ತಿದೆ. ಈಗಾಗಲೇ ಕೆಲವು ನಟಿಮಣಿಯರು ಈ ವೇದಿಕೆಯಲ್ಲಿ ತಮ್ಮ ಸೌಂದರ್ಯ ಪ್ರದರ್ಶಿಸಿದ್ದಾರೆ. ಕೋಟ್ಯಂತರ ಅಭಿಮಾನಿಗಳು ಇದೇ ವೇದಿಕೆಯಲ್ಲಿ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ನೋಟ ಕಣ್ತುಂಬಿಕೊಳ್ಳಲು ಕಾತರರಾಗಿದ್ದರು. ಅಂತೂ ಇಂತೂ, ನೆಟ್ಟಿಗರು ಕುತೂಹಲದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. ಸಾಮಾಜಿಕ ಜಾಲತಾಣದಲ್ಲೀಗ ಐಶ್ವರ್ಯಾ ರೈ ಬಚ್ಚನ್​​​ ಅವರ ಫೋಟೋಗಳದ್ದೇ ಸದ್ದು.

ಐಶ್ವರ್ಯಾ ಕೇನ್ಸ್ ಚಲನಚಿತ್ರೋತ್ಸವದ ಮೆರುಗು ಹೆಚ್ಚಿಸಿದ್ದಾರೆ. ವಿಭಿನ್ನ ಫ್ಯಾಶನ್​ ಸೆನ್ಸ್​ನಿಂದ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ನಟಿಯ ನೋಟಕ್ಕಾಗಿ ಕಾಯುವವರ ಸಂಖ್ಯೆಯೂ ದೊಡ್ಡದಿದೆ. ಇದೀಗ ಕೇನ್ಸ್‌ ಈವೆಂಟ್​ನಿಂದ ಸ್ಟಾರ್ ನಟಿಯ ಸುಂದರ ಫೋಟೋಗಳನ್ನು ಬಹಿರಂಗಪಡಿಸಲಾಗಿದೆ.

ಮನರಂಜನಾ ಕ್ಷೇತ್ರದಲ್ಲಿ ತನ್ನದೇ ಆದ ಸ್ಥಾನಮಾನ ಹೊಂದಿರುವ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಮಾಜಿ ವಿಶ್ವಸುಂದರಿ ಬುಧವಾರ ತಡರಾತ್ರಿ ಮಗಳು ಆರಾಧ್ಯ ಜೊತೆ ಮುಂಬೈ ಅಂತಾರಾಷ್ಟ್ರೀಯ​ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು. ಗಾಯವಾದ ಬಲಗೈಗೆ ಆರ್ಮ್ ಸ್ಲಿಂಗ್​ ಧರಿಸಿದ್ದರು. ನಟಿಯ ಕೈಗೆ ಪೆಟ್ಟಾಗಿರುವುದು ಖಚಿತವಾಗಿತ್ತು. ಈ ಸ್ಥಿತಿಯಲ್ಲಿ ಹೇಗೆ ಫ್ಯಾಶನ್​ ಈವೆಂಟ್‌ನಲ್ಲಿ ಭಾಗಿಯಾಗುತ್ತಾರೆ ಎಂದು ಹಲವರು ಚಿಂತಿತರಾಗಿದ್ದರು. ಪಾಪರಾಜಿಗಳು ಏರ್​​ಪೋರ್ಟ್‌ನಿಂದ ಹಂಚಿಕೊಂಡ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​​ ಆಗಿ, ಐಶ್ವರ್ಯಾಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದರು. ಆದ್ರೀಗ ನಟಿ ರೆಡ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿರುವ ಫೋಟೋಗಳು ಹೊರಬಿದ್ದಿದೆ. ಐಶ್ವರ್ಯಾ ಮತ್ತು ಆರಾಧ್ಯಗೆ ಕೇನ್ಸ್‌ನಲ್ಲಿ ಆತ್ಮೀಯ ಸ್ವಾಗತ ಕೋರಲಾಗಿದೆ.

ಇದನ್ನೂ ಓದಿ:ಐಶ್ವರ್ಯಾ ರೈ ಕೈಗೆ ಗಾಯ: ಮಗಳೊಂದಿಗೆ ಏರ್​​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಚೆಲುವೆ - Aishwarya Rai Injured

77ನೇ ಆವೃತ್ತಿಯ ಈ ಚಿತ್ರೋತ್ಸವದಲ್ಲಿ ರೈ, ಬ್ಲ್ಯಾಕ್​, ವೈಟ್​, ಗೋಲ್ಡನ್​​ ಕಾಂಬಿನೆಶನ್​ನ ಗೌನ್‌ನಲ್ಲಿ ಕಾಣಿಸಿಕೊಂಡರು. ಪ್ರತೀ ಬಾರಿಯಂತೆ ಈ ವರ್ಷವೂ ವಿಭಿನ್ನ ಶೈಲಿಯ ಉಡುಗೆ ಮತ್ತು ತನ್ನ ಸೌಂದರ್ಯದಿಂದ ಹೆಚ್ಚಿನವರ ಮನ ಗೆದ್ದಿದ್ದಾರೆ. ಐಶ್ವರ್ಯಾ 'ಫಲ್ಗುಣಿ ಶೇನ್ ಪಿಕಾಕ್' ವಿನ್ಯಾಸಗೊಳಿಸಿರುವ ಉಡುಗೆ ಧರಿಸಿದ್ದರು.

ಇದನ್ನೂ ಓದಿ:26 ವರ್ಷಗಳ ಬಳಿಕ ನಾಳೆ 'A' ರೀ ರಿಲೀಸ್: ಇದು ನನ್ನ ಬದುಕು ಬದಲಿಸಿದ ಸಿನಿಮಾ ಎಂದ ನಟಿ ಚಾಂದಿನಿ - A Movie Re Release

2024ರ ಕೇನ್ಸ್ ಫಿಲ್ಮ್ ಫೆಸ್ಟಿವಲ್​​​​ ಫ್ರಾನ್ಸ್​​ನ ಕೇನ್ಸ್​​​ ಪ್ರದೇಶದಲ್ಲಿ ಇದೇ ಮಾರ್ಚ್ 14ಕ್ಕೆ (ಮಂಗಳವಾರ) ಆರಂಭವಾಗಿದ್ದು, 25 (ಬರುವ ಶನಿವಾರ)ರಂದು ಪೂರ್ಣಗೊಳ್ಳಲಿದೆ. ಊರ್ವಶಿ ರೌಟೇಲಾ, ಐಶ್ವರ್ಯಾ ರೈ ಬಚ್ಚನ್​​ ಈಗಾಗಲೇ ಕೇನ್ಸ್​ ಕಾರ್ಪೆಟ್​ ಮೇಲೆ ನಡೆದಿದ್ದಾರೆ. ಉಳಿದಂತೆ ಕಿಯಾರಾ ಅಡ್ವಾಣಿ, ಶೋಭಿತಾ ಧೂಳಿಪಾಲ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅದಿತಿ ರಾವ್ ಹೈದರಿ ಸೇರಿದಂತೆ ಹಲವರು ಕಾಣಿಸಿಕೊಳ್ಳಲಿದ್ದಾರೆ. ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಲೇಡಿ ಬಚ್ಚನ್​ ಫೋಟೋಗಳು ಸದ್ದು ಮಾಡುತ್ತಿವೆ. ನಟಿಯ ನೋಟಕ್ಕೆ ಮೆಚ್ಚುಗೆಯ ಮಹಾಪೂರ ಹರಿದುಬರುತ್ತಿದೆ. ಅಭಿಮಾನಿಗಳು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ.

ABOUT THE AUTHOR

...view details