ತಮ್ಮ ವೈಯಕ್ತಿಕ, ವೈವಾಹಿಕ ಜೀವನದ ಬಗ್ಗೆ ಹೆಚ್ಚುತ್ತಿರುವ ಊಹಾಪೋಹಗಳ ನಡುವೆ ಮುಂಬೈನಲ್ಲಿ ನಡೆದ ಧೀರೂಭಾಯಿ ಅಂಬಾನಿ ಶಾಲೆಯ ವಾರ್ಷಿಕ ಸಮಾರಂಭದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಒಟ್ಟಿಗೆ ಕಾಣಿಸಿಕೊಂಡರು. ಸಿನಿಮಾ ಇಂಡಸ್ಟ್ರಿಯ ಲೆಜೆಂಡ್ ಅಮಿತಾಭ್ ಬಚ್ಚನ್ ಜೊತೆ ತಾರಾ ದಂಪತಿ ಕಾಣಿಸಿಕೊಂಡಿದ್ದು, ಅವರ ಸಂಬಂಧದಲ್ಲಿನ ಸಂಭವನೀಯ ಬಿರುಕುಗಳ ಬಗೆಗಿನ ವದಂತಿಗೆ ಫುಲ್ಸ್ಟಾಪ್ ಇಟ್ಟಿದೆ.
ಪ್ರತಿಷ್ಠಿತ ಸಮಾರಂಭದಲ್ಲಿ ಬಚ್ಚನ್ ಕುಟುಂಬ ಸಾರ್ವಜನಿಕವಾಗಿ ಕಾಣಿಸಿಕೊಂಡಿದೆ. ವಿಚ್ಛೇದನದ ವದಂತಿ ಹೆಚ್ಚಿರುವ ಈ ಹೊತ್ತಲ್ಲಿ ಜೋಡಿ ಕೈಕೈ ಹಿಡಿದು ಬರುವ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ. ಐಶ್ವರ್ಯಾ ರೈ ಬಚ್ಚನ್ ಆಕರ್ಷಕ ಬ್ಲ್ಯಾಕ್ ಔಟ್ಫಿಟ್ನಲ್ಲಿ ಕಾಣಿಸಿಕೊಂಡರು. ಈವೆಂಟ್‌ನ ಉದ್ದಕ್ಕೂ ಶಾಂತಸ್ವರೂಪವಾಗಿ ಗುರುತಿಸಿಕೊಂಡರು. ಮತ್ತೊಂದೆಡೆ ಅಭಿಷೇಕ್ ಮತ್ತು ಅಮಿತಾಭ್ ಅತಿಥಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದದ್ದು ಕಂಡುಬಂದಿದೆ. ದಂಪತಿ ಪರಸ್ಪರ ಕಾಳಜಿ ವಹಿಸುತ್ತಾ, ಪ್ರಬುದ್ಧತೆಯಲ್ಲಿ ಹೆಜ್ಜೆ ಹಾಕಿದರು.
ವಿಚ್ಛೇದನ ವದಂತಿ ವ್ಯಾಪಕವಾಗಿ ಹರಡಲು ಶುರುವಾದ ನಂತರ ದಂಪತಿ ಜೊತೆಯಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ವಿಶೇಷವಾಗಿ, ಈ ವರ್ಷದ ನಡುವೆ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಜೋಡಿಯ ಅದ್ಧೂರಿ ವಿವಾಹದಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಂಡ ನಂತರ ಅಂತಲೇ ಹೇಳಬಹುದು. ದುಬೈನ ಕಾರ್ಯಕ್ರಮವೊಂದರಲ್ಲಿ 'ಬಚ್ಚನ್' ಸರ್ನೇಮ್ ಇಲ್ಲದೇ ಐಶ್ವರ್ಯಾ ರೈ ಅವರ ಹೆಸರು ಕಾಣಿಸಿಕೊಂಡಾಗ ಸೋಷಿಯಲ್ ಮೀಡಿಯಾ ಪರಿಸ್ಥಿತಿ ಬದಲಾಯಿತು. ಊಹಾಪೋಹಗಳ ಜ್ವಾಲೆ ಮತ್ತಷ್ಟು ಹೆಚ್ಚಿತು.
ಇದನ್ನೂ ಓದಿ:'ಸಿನಿಮಾ ನಮ್ಮನ್ನು ವಿಮರ್ಶೆ ಮಾಡುತ್ತೆ': 'ಯುಐ'ಗೆ ಪ್ರೇಕ್ಷಕರು ಹೇಳಿದ್ದಿಷ್ಟು; ಮೊದಲ ದಿನ ಕಲೆಕ್ಷನ್ ಎಷ್ಟಾಗಬಹುದು?
ವ್ಯಾಪಕ ವದಂತಿಗಳ ಹೊರತಾಗಿಯೂ, ಐಶ್ವರ್ಯಾ ಅವರಾಗಲಿ ಅಥವಾ ಅಭಿಷೇಕ್ ಅವರಾಗಲಿ ಈ ವಿಷಯವನ್ನುದ್ದೇಶಿಸಿ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಲಿಲ್ಲ. ಬದಲಾಗಿ ತಮ್ಮ ವೃತ್ತಿಪರ ವೃತ್ತಿಜೀವನದ ಮೇಲೆ ಗಮನ ಕೇಂದ್ರೀಕರಿಸಿಕೊಂಡರು. ಅದಾಗ್ಯೂ, ಅಭಿಷೇಕ್ ಅವರ ತಂದೆ, ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಬ್ಲಾಗ್‌ನಲ್ಲಿ ಸೋಷಿಯಲ್ ಮೀಡಿಯಾ ರೂಮರ್ಗಳಿಗೆ ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಬಿಗ್ ಬಿ ತಮ್ಮ ಪೋಸ್ಟ್‌ನಲ್ಲಿ, ಪ್ರಶ್ನಾರ್ಥಕ ಚಿಹ್ನೆಯೊಂದಿಗಿನ ಆಧಾರರಹಿತ ಗಾಸಿಪ್ ಸಾರ್ವಜನಿಕ ಅನುಮಾನಗಳನ್ನು ಉತ್ತೇಜಿಸುತ್ತದೆ ಮತ್ತು ಅಪನಂಬಿಕೆಯನ್ನು ಹರಡುತ್ತದೆ ಎಂದು ತಿಳಿಸಿದ್ದರು.
ಇದನ್ನೂ ಓದಿ:'UI': ಶಿವಣ್ಣ, ಉಪ್ಪಿ ಫೋಟೋ ಇಟ್ಟು ಪೂಜೆ; ಫ್ಯಾನ್ಸ್ ಸೆಲೆಬ್ರೇಶನ್ ವಿಡಿಯೋ ನೋಡಿ
ಐಶ್ವರ್ಯಾ ಅವರು ಯಾವುದೇ ಈವೆಂಟ್ ಇರಲಿ ತಮ್ಮ ಮುದ್ದು ಮಗಳು ಆರಾಧ್ಯ ಅವರೊಂದಿಗೆ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿನ ದಿನಗಳಲ್ಲಿ ಬಚ್ಚನ್ ಕುಟುಂಬದೊಂದಿಗೆ ಕಾಣಿಸಿಕೊಳ್ಳಲಿಲ್ಲ. ವಿಶ್ವವನ್ನೇ ಗಮನ ಸೆಳೆದಿದ್ದ ಅಂಬಾನಿ ಕುಟುಂಬದ ಅದ್ಧೂರಿ ವಿವಾಹ ಸಮಾರಂಭದಲ್ಲೂ ಇಡೀ ಬಚ್ಚನ್ ಕುಟುಂಬ ಒಟ್ಟಾಗಿ ಬಂದರೆ, ಐಶ್ವರ್ಯಾ ಮಗಳೊಂದಿಗೆ ಪ್ರತ್ಯೇಕ ಎಂಟ್ರಿ ಕೊಟ್ಟಿದ್ದರು. ಇದು ವ್ಯಾಪಕ ವದಂತಿಗೆ ಕಾರಣವಾಗಿತ್ತು. ಈವೆಂಟ್ ಒಳಗೆ ಐಶ್ ಅಭಿ ಜೊತೆಯಾಗಿ ಕುಳಿತುಕೊಂಡಿದ್ದರೂ ಕೂಡಾ ಟ್ರೋಲಿಗರು ತಾರಾ ದಂಪತಿಯನ್ನು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆದ್ರೀಗ ಎಲ್ಲಾ ಊಹಾಪೋಹಗಳಿಗೂ ಫುಲ್ ಸ್ಟಾಪ್ ಇಟ್ಟಿದೆ ಧೀರೂಭಾಯಿ ಅಂಬಾನಿ ಶಾಲೆಯ ವಿಡಿಯೋಗಳು.