ಹೈದರಾಬಾದ್: ದಕ್ಷಿಣ ಚಿತ್ರರಂಗದಲ್ಲಿ ಹೆಸರು ಮಾಡಿರುವ ಅದಿತಿ ರಾವ್ ಹೈದರಿ ಮತ್ತು ಸಿದ್ಧಾರ್ಥ್ ಇತ್ತೀಚೆಗಷ್ಟೇ ದಾಂಪತ್ಯ ಜೀವನ ಶುರು ಮಾಡಿದ್ದಾರೆ. ಸೆಪ್ಟೆಂಬರ್ 16ರಂದು ಮದುವೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಖತ್ ಸದ್ದು ಮಾಡಿದ್ದರು. ಸೂಪರ್ ಸ್ಟಾರ್ಸ್ ದೇವಸ್ಥಾನದಲ್ಲಿ ಸರಳವಾಗಿ ಸಾಂಪ್ರದಾಯಿಕವಾಗಿ ಹಸೆಮಣೆ ಏರಿ ಇತರರಿಗೆ ಮಾದರಿಯಾಗಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿಂದು ಕಾಣಿಸಿಕೊಳ್ಳುವ ಮೂಲಕ ಈ ಜೋಡಿ ಮತ್ತೊಮ್ಮೆ ನೆಟ್ಟಿಗರ ಗಮನ ಸೆಳೆದರು.
ಶುಕ್ರವಾರ ಮುಂಜಾನೆ ಮುಂಬೈ ಏರ್ಪೋರ್ಟ್ನಲ್ಲಿ ನವದಂಪತಿ ಕಾಣಿಸಿಕೊಂಡಿದ್ದಾರೆ. ತಮ್ಮ ಸಾಲಿಡ್ ಕೆಮಿಸ್ಟ್ರಿ ಮೂಲಕ ಮತ್ತೊಮ್ಮೆ ನೆಟಿಜನ್‌ಗಳ ಮನ ಗೆದ್ದರು. ದೀರ್ಘಕಾಲದವರೆಗೆ ತಮ್ಮ ಸಂಬಂಧವನ್ನು ಖಾಸಗಿಯಾಗೇ ಇರಿಸಿಕೊಂಡಿದ್ದ ಇವರು, ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡು ವೈವಾಹಿಕ ಬಂಧನಕ್ಕೆ ಬಳಗಾಗಿದ್ದಾರೆ. ಮುಂಬೈಗೆ ಆಗಮಿಸಿದ ನವದಂಪತಿಯನ್ನು ಅಭಿಮಾನಿಗಳು ಮತ್ತು ಪಾಪರಾಜಿಗಳು ಆತ್ಮೀಯವಾಗಿ ಸ್ವಾಗತಿಸಿದ್ದು, ಪ್ರೇಮಪಕ್ಷಿಗಳು ನಗು ಬೀರಿದರು.
ಬಹುಭಾಷಾ ನಟಿ ಅದಿತಿ ರಾವ್ ಹೈದರಿ ಗುಲಾಬಿ ಬಣ್ಣದ ರೇಷ್ಮೆ ಕುರ್ತಾ ಸೆಟ್‌ನಲ್ಲಿ ಬಹಳ ಸುಂದರವಾಗಿ ಕಂಗೊಳಿಸಿದರು. ಮಿನಿಮಮ್ ಮೇಕ್ಅಪ್ ಮತ್ತು ಜ್ಯುವೆಲರಿಯಲ್ಲಿ ಬಹಳ ಸುಂದರವಾಗಿ ಕಂಡುಬಂದರು. ಹಣೆ ಮೇಲಿನ ಸಿಂಧೂರ ನೆಟ್ಟಿಗರನ್ನು ಹೆಚ್ಚಾಗಿ ಗಮನ ಸೆಳೆಯಿತು. ಮತ್ತೊಂದೆಡೆ ನಟ ಸಿದ್ಧಾರ್ಥ್ ಬ್ಲ್ಯಾಕ್ ಪ್ಯಾಂಟ್, ಸ್ಟೈಲಿಶ್ ಡೆನಿಮ್ ಶರ್ಟ್ ಮತ್ತು ಕ್ಯಾಪ್ ಧರಿಸಿದ್ದರು. ಇಬ್ಬರೂ ಕ್ಯಾಶುವಲ್ ವೇರ್‌ನಲ್ಲಿದ್ದರು. ಪಾಪರಾಜಿಗಳ ಕ್ಯಾಮರಾಗಳಿಗೆ ನಗುನಗುತ್ತಾ ಪೋಸ್ ನೀಡಿದ್ದಾರೆ.