ಮುಂಬೈ: ನನ್ನ ಬಾಲ್ಯ ಐಷಾರಾಮಿಯಾಗಿರಲಿಲ್ಲ. ಇದೇ ಕಾರಣದಿಂದ ನಾನು ಆಗಿನಿಂದಲೇ ನನ್ನ ಗುರಿಯನ್ನು ಯಶಸ್ಸಿನತ್ತಇಡಬೇಕಾಯಿತು ಎಂದು ನಟಿ ಸಮಂತಾ ರುತ್ ಪ್ರಭು ತಿಳಿಸಿದ್ದಾರೆ.
ತಮ್ಮ ಪೋಡಕಾಸ್ಟ್ 'ಟೇಕ್ 20'ಯಲ್ಲಿ ತಮ್ಮ ಯಶಸ್ಸಿನ ಪಯಣ ಆ ಗುರಿಯತ್ತಾ ಸಾಗಿ ಬಂದ ಹಾದಿ ಕುರಿತು ಮಾತನಾಡಿದ್ದಾರೆ. ಈ ಪೋಡಕಾಸ್ಟ್ ಮೂಲಕ ನಟಿ ಸಮಂತಾ ತಮ್ಮ ಜೀವನದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಹಿಂದಿನ ಪ್ರಸಾರದಲ್ಲಿ ತಮ್ಮ ಆರೋಗ್ಯ ಸಮಸ್ಯೆ ಕುರಿತು ಅವರು ಮಾತನಾಡಿದ್ದರು.
ಪೌಷ್ಟಿಕತಜ್ಞ ಅಲ್ಕೇಶ್ ಶರೋತ್ರಿ ಅವರೊಂದಿಗಿನ ಮಾತುಕತೆ ವೇಳೆ ಹೋರಾಟದ ಕುರಿತು ಮಾತನಾಡಿದ ಅವರು, ಆಯಾಸ ಮತ್ತು ವಿಶ್ರಾಂತಿಯ ಅಗತ್ಯತೆಯನ್ನು ದೌರ್ಬಲ್ಯದ ಸಂಕೇತ ಎಂದು ನಾನು ನಂಬಿದ್ದೇನೆ. ನಾನು ಕೇವಲ ಆರುಗಂಟೆ ನಿದ್ರೆ ಮಾಡುವ ಅಭ್ಯಾಸ ರೂಢಿಸಿಕೊಂಡಿದ್ದು, ಇದರಿಂದ ದಿನವಿಡೀ ಉತ್ಸಾಹದಾಯಕವಾಗಿರುತ್ತೇನೆ. ಅನೇಕ ಬಾರಿ ದೇಹ ದಣಿದರೂ ನಾನು ಅದನ್ನು ಒಪ್ಪಿಕೊಳ್ಳುವುದಿಲ್ಲ. 13 ಗಂಟೆ ಯಾವುದೇ ವಿರಾಮ ಇರದೇ ಕೆಲಸ ಮಾಡುತ್ತೇನೆ ಎಂದರು.
ಮುಂದುವರಿದು ಮಾತನಾಡಿದ ಅವರು, ನಾನು ಐಷಾರಾಮಿ ಬಾಲ್ಯದಲ್ಲಿ ಬೆಳೆಯಲಿಲ್ಲ. ಇದೇ ಕಾರಣಕ್ಕೆ ತುಂಬಾ ಬೇಗನೇ ನನ್ನ ಗಮನವನ್ನ ಯಶಸ್ಸಿನತ್ತ ಹರಿಸಿದೆ. ಅದನ್ನು ಮಾಡಲೇ ಬೇಕು ಎಂಬ ತೀವ್ರ ತುಡಿತ ನನ್ನಲ್ಲಿ ನಾನು ಅನುಭವಿಸುತ್ತಿದ್ದೆ. ನನ್ನ ಯಶಸ್ಸಿನ ಕಲ್ಪನೆಗೆ ನಿರಂತರ ಆಕಾರ ನೀಡಿದ್ದೆ. ಇದುವೇ ನನ್ನ ಯಶಸ್ಸಿಗೆ ಪ್ರೇರಣೆಯಾಯಿತು ಎಂದು ನಟಿ ಹೇಳಿಕೊಂಡರು.