ಹೈದರಾಬಾದ್: ಜನಪ್ರಿಯ ನಿರ್ದೇಶಕ ಕೋಡಿ ರಾಮಕೃಷ್ಣ ನಿರ್ದೇಶನದ ಸೋಶಿಯೋ ಫ್ಯಾಂಟಸಿ ಚಿತ್ರ 'ದೇವಿ'. ಆ ಸಮಯದಲ್ಲಿ ಈ ಚಿತ್ರವು ಬಾಕ್ಸ್ ಆಫೀಸ್ನಲ್ಲಿ ಸಂಚಲನ ಮೂಡಿಸಿತ್ತು. ನಿನ್ನೆ ಮಂಗಳವಾರದಂದು ಚಿತ್ರವು ಬಿಡುಗಡೆಯಾಗಿ 25 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಸಿನಿಮಾ ನಾಯಕಿಯಾಗಿ ನಟಿಸಿದ್ದ ನಾಯಕಿ ಪ್ರೇಮ ಚಿತ್ರದ ಬಗ್ಗೆ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಶೂಟಿಂಗ್ ವೇಳೆ ನಡೆದ ಘಟನೆಗಳನ್ನು ನೆನಪಿಸಿಕೊಂಡಿದ್ದಾರೆ.
''ಆ ಕಾಲದಲ್ಲಿ ಲೇಡಿ ಓರಿಯೆಂಟೆಡ್ ಚಿತ್ರಗಳು ಕಡಿಮೆ. ಆಗ ಬಂದ ಈ ದೇವಿ ಚಿತ್ರ ಭರ್ಜರಿ ಯಶಸ್ಸು ಕಂಡಿತ್ತು. ಇಷ್ಟು ದೊಡ್ಡ ಯಶಸ್ಸಿಗೆ ಕೋಡಿ ರಾಮಕೃಷ್ಣ ಅವರೇ ಪ್ರಮುಖ ಕಾರಣ. ದೃಶ್ಯ ಬರುವವರೆಗೆ ಕನಿಷ್ಠ 50 ಟೇಕ್ ತೆಗೆದುಕೊಳ್ಳಲಾಗಿತ್ತು. ಪರ್ಫೆಕ್ಟ್ ಆಗಲು ನಾನು ಹಗಲು-ರಾತ್ರಿ ಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ. ಡೈಲಾಗ್ಸ್ ಕೂಡ ಚೆನ್ನಾಗಿ ಪ್ರಾಕ್ಟೀಸ್ ಮಾಡ್ತಿದ್ದೆವು. ಇಂತಹ ಹಾವಿನ ಚಿತ್ರಗಳನ್ನು ಯಾರು ನೋಡುತ್ತಾರೆ ಅಂತಾ ಆಗ ನಾವೆಲ್ಲಾ ಅಂದುಕೊಂಡಿದ್ದೆವು. ಆದರೆ, ಶೂಟಿಂಗ್ ಮುಗಿದ ನಂತರ ಅಚ್ಚರಿಯಾಯಿತು. ಶೂಟಿಂಗ್ ವೇಳೆ ಒಬ್ಬರಿಗೆ ನಿಜವಾಗಿ ಹಾವು ಕಚ್ಚಿತ್ತು. ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ. ಹಾಗಾಗಿ, ಎರಡು ದಿನ ಶೂಟಿಂಗ್ ನಿಲ್ಲಿಸಿದ್ದೆವು. ಕ್ಲೈಮ್ಯಾಕ್ಸ್ಗೆ ಹಿಮದಲ್ಲಿ ಸಾಕಷ್ಟು ತೊಂದರೆ ಅನುಭವಿಸಿದ್ದೆವು'' ಎಂದು ಪ್ರೇಮಾ ಹೇಳಿದ್ದಾರೆ.