ಮುಂಬೈ (ಮಹಾರಾಷ್ಟ್ರ): ಬಾಲಿವುಡ್‌ನ ಅತ್ಯಂತ ಸುಂದರ ಮತ್ತು ಬಹುಬೇಡಿಕೆ ನಟಿಯರಲ್ಲಿ ಒಬ್ಬರಾದ ಕತ್ರಿನಾ ಕೈಫ್ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. 41ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರು, ಆತ್ಮೀಯರು ಸೇರಿದಂತೆ ಅಭಿಮಾನಿಗಳು ವಿಶೇಷವಾಗಿ ಶುಭಕೋರುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೀಗ ನಟಿಯ ಸಿನಿಮಾ, ಗ್ಲ್ಯಾಮರ್ ಜೊತೆಗೆ ಆಸ್ತಿಪಾಸ್ತಿ ಬಗ್ಗೆ ನೆಟ್ಟಿಗರು ಚರ್ಚೆ ನಡೆಸುತ್ತಿದ್ದಾರೆ.
ಕ್ಯಾಟ್ ಖ್ಯಾತಿಯ ಕತ್ರಿನಾ ಕೈಫ್ 2003ರಲ್ಲಿ ತೆರೆಕಂಡ 'ಬೂಮ್' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು. ಯಶಸ್ವಿ ಚಿತ್ರಗಳನ್ನು ಕೊಡುತ್ತಾ ಚಿತ್ರರಂಗದಲ್ಲಿ ಎರಡು ದಶಕಗಳನ್ನು ಪೂರೈಸಿರುವ ಕತ್ರಿನಾ ಸದ್ಯ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ನಟಿಯ ನೆಟ್ ವರ್ತ್ ಪತಿ ವಿಕ್ಕಿ ಕೌಶಲ್ ಅವರಿಗಿನ್ನ ಹೆಚ್ಚು. ಕತ್ರಿನಾ, ಬಾಲಿವುಡ್ನಲ್ಲೇ ಗುರುತಿಸಿಕೊಂಡಿರುವ ನಟ ವಿಕ್ಕಿ ಕೌಶಲ್ ಅವರನ್ನು 2021ರ ಡಿಸೆಂಬರ್ 9ರಂದು ಮದುವೆಯಾದರು. ನಟನೆಯ ಹೊರತಾಗಿ ಕತ್ರಿನಾ ವಿವಿಧ ವೇದಿಕೆಗಳಿಂದ ಆದಾಯ ಗಳಿಸುತ್ತಿದ್ದು, ಶ್ರೀಮಂತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.